ಹುಡ್ಕೀ ಹುಡ್ಕೀ ಹುಚ್ಚನಾದೆ ನಾನೂ
ಎಲ್ಲಿರುವೆ? ಹೇಳು, ನನ್ನೊಲವೇ ನೀನೂ…
ನಿನ್ನಾ ಕಣ್ಣಲ್ಲಿ ಕಣ್ಣಿಟ್ಟು ಕರಗೀ ಬಿಡುವೆ…
ನನ್ನಾ ಬಾಳಿನಾ ಭರವಸೆ ನೀ ಒಲವೆ!
ನಿನ್ನಾ ಎದೆಯಾ ಪಿಸುಮಾತ ಆಲಿಸುವೆ…
ಅದೇ ಸ್ಫೂರ್ತಿಗೆ ಅನುಕ್ಷಣವೂ ನಲಿವೆ!
ನಿನ್ನ ದಯೆ ಇರದೇ, ನಾ ಬದುಕಲಾರೆ…
ನಾ ಚಂದ್ರನಷ್ಟೆ, ನೀ ಸೂರ್ಯ ತಾರೆ!
ನಾನು ನೀನೂ ವಿಭಿನ್ನ, ಆದ್ರೂ ಅಭಿನ್ನಾ..
ಕಾಲ, ಸೀಮೆಯ ಮೀರಿ ಬಲ್ಲೆ ನೀ ನನ್ನಾ!
ಚೆಲುವು ಮಾಸದ ಹುಡ್ಗೀ ಎಲ್ಲಿ ಹುಡುಕಲೀ…
ವಯಸಾಯಿತಿನ್ನು ನಿನ್ನ ಸೇರುವ ಮನಸಲೀ!
ಅರೆರೆ… ನೀನು’ ನಾನೂ’ ಬೇರೆ ಏನೇ ಹುಚ್ಚೀ…
‘ನಾನು’ ಸತ್ತು ಹೋಗುವೆ, ನಿನ್ನ ತುಟೀ ಕಚ್ಚೀ!
– ಚಂಸು
