ಆಲೂರು : ಸ್ಕೌಟ್ಸ್ ಗೈಡ್ಸ್ ಮುಖ್ಯ ಉದ್ದೇಶವೇ ಮಕ್ಕಳಲ್ಲಿ ಶಿಸ್ತು ಹಾಗೂ ಸೇವಾ ಮನೋಭಾವನೆಯನ್ನು ವೃದ್ಧಿಸುವುದಾಗಿದೆ. ಸ್ಕೌಟ್ಸ್ ಗೈಡ್ಸ್ ಮಕ್ಕಳಿಗೆ ಸಮಾಜದಲ್ಲಿ ವಿಶೇಷ ಗೌರವವಿದೆ. ಎಲ್ಲಿ ಇಲ್ಲಿರುತ್ತದೋ ಅಲ್ಲಿ ಯಶಸ್ಸು ಕಟ್ಟಿಟ್ಟ ಬುತ್ತಿ, ಮಕ್ಕಳು ತಮ್ಮ ಜೀವನದಲ್ಲಿ ಶಿಸ್ತನ್ನು ರೂಢಿಸಿಕೊಂಡು ಯಶಸ್ಸಿನ ಮೆಟ್ಟಿಲೇರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಜೆ.ಕೃಷ್ಣೇಗೌಡ ಕರೆಕೊಟ್ಟರು.
ಅವರು ಆಲೂರು ತಾಲ್ಲೂಕು ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವತಿಯಿಂದ ಬೈರಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಹಮ್ಮಿಕೊಂಡಿದ್ದ ಚಿಂತನಾ ದಿನವನ್ನು ಉದ್ಘಾಟಿಸಿ ಮಾತನಾಡಿ ಮಕ್ಕಳಲ್ಲಿ ಶಿಸ್ತು ಹಾಗೂ ಸಾವಾ ಮನೋಭಾವನೆಯನ್ನು ಹುಟ್ಟುಹಾಕಲೆಂದೇ ೧೯೦೭ ರಲ್ಲಿ ಇಂಗ್ಲೆಂಡಿನ ನಿವೃತ್ತ ಸೇನಾಧಿಕಾರಿ ಲಾರ್ಡ್ ಬೆಡನ್ ಪೊವೆಲ್ ಅವರು ಈ ಚಳವಳಿಯನ್ನು ಪ್ರಾರಂಭಿಸಿದರು. ಅವರ ದೂರದೃಷ್ಠಿಯ ಕನಸು ಇಂದು ನೂರಾರು ದೇಶಗಳಲ್ಲಿ ನನಸಾಗುತ್ತಿದೆ.

ಜೀವನದಲ್ಲಿ ಶಿಸ್ತು, ಸೇವೆ, ದೇಶಪ್ರೇಮ ಬಹಳಮುಖ್ಯ. ಸರ್.ಎಂ. ವಿಶ್ವೇಶ್ವರಯ್ಯ, ಅಬ್ದುಲ್ ಕಲಾಂರಂತಹ ದಿಗ್ಗಜರು ಶಿಸ್ತಿಗೆ ಹೆಸರುವಾಸಿಯಾದವರು. ಅವರೆಲ್ಲಾ ಇಂದಿನ ಮಕ್ಕಳಿಗೆ ಆದರ್ಶವಾಗಿದ್ದಾರೆ. ಸ್ಕೌಟ್ಸ್ ಗೈಡ್ಸ್ ಚಳವಳಿಗೆ ಮಕ್ಕಳು ಸೇರಿದರೆ ಅವರಿಗೆ ವೈಯಕ್ತಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಏನೇನು ಉಪಯೋಗವಿದೆ ಎಂಬುದನ್ನು ಸಂಬಂಧಪಟ್ಟ ಶಿಕ್ಷಕರು ಮಕ್ಕಳಿಗೆ ಹಾಗೂ ಪೋಷಕರಿಗೆ ತಿಳಿಹೇಳಬೇಕಿದೆ ಎಂದರು.

ಜಿಲ್ಲಾ ಸಹಾಯಕ ಆಯುಕ್ತರಾದ ಎಂ. ಬಾಲಕೃಷ್ಣ ಮಾತನಾಡಿ ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್ ಅವರ ಪ್ರೇರಣೆಯಿಂದ ನಾನು ಈ ಸಂಸ್ಥೆಗೆ ಸೇರಿಕೊಂಡೆ, ಇಲ್ಲಿನ ತತ್ತ್ವ ಸಿದ್ಧಾಂತಗಳು, ಗುರಿ-ಉದ್ದೇಶಗಳು ನನ್ನನ್ನು ಗಟ್ಟಿಗೊಳಿಸಿವೆ. ಸಮವಸ್ತ್ರ ಧರಿಸಿದಾಗ ಯೋಧನ ಆತ್ಮಸ್ಥೈರ್ಯ ಬರುತ್ತದೆ. ಸಮಾಜಿಕ ಕಳಕಳಿ ಹೆಚ್ಚಾಗುತ್ತದೆ. ನಮ್ಮೊಳಗೆ ಜಾಗೃತಿಯುಂಟಾಗುತ್ತದೆ. ಹಾಸನಾಂಬ ಜಾತ್ರೆಯಲ್ಲಿ ಸೇವೆ ಮಾಡುವ ಭಾಗ್ಯ ದೊರೆಕಿದ್ದು ನನ್ನ ಪುಣ್ಯ. ಅದು ಸ್ಕೌಟ್ಸ್ ಗೈಡ್ಸ್ ಸಮವಸ್ತ್ರದ ಶಕ್ತಿ, ಗೌರವವಾಗಿದೆ. ನಮ್ಮ ತಾಲ್ಲೂಕಿನ ಹೆಚ್ಚೆಚ್ಚು ಮಕ್ಕಳು ಈ ಚಳವಳಿಯಲ್ಲಿ ಭಾಗಿಯಾಗಿ ತಮ್ಮ ಜೀವನವನ್ನು ಉದಾತ್ತಗೊಳಿಸಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಶಿಕ್ಷಕ ಶಂಕರಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ನಮ್ಮ ಶಾಲೆಯ ಬುಲ್ ಬುಲ್ಸ್ ಮಕ್ಕಳು ನಿಕಟಪೂರ್ವ ಮುಖ್ಯಶಿಕ್ಷಕರಾದ ಎಂ. ಎಲ್. ಎಲಿಜಬೆತ್ ಅವರ ಪರಿಶ್ರಮದಿಂದ ರಾಷ್ಟçಪತಿ ಪ್ರಶಸ್ತಿಗೆ ಭಾಜನರಾಗಿದ್ದಾರೆ. ನಮ್ಮ ಶಾಲೆಯಲ್ಲಿ ಸ್ಕೌಟ್ಸ್ ಗೈಡ್ಸ್ ಮಕ್ಕಳಿಂದ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಈ ಚಳವಳಿಯಲ್ಲಿ ಇನ್ನೂ ಹೆಚ್ಚಿನ ಮಕ್ಕಳು ಭಾಗಿಯಾಗಲು ನಾವು ಪ್ರೇರಣೆ ನೀಡುವುದರ ಮೂಲಕ ಉತ್ತಮೋತ್ತಮ ಕಾರ್ಯಕ್ರಮಗಳನ್ನು ಮಕ್ಕಳಿಗೆ ನೀಡುತ್ತೇವೆ ಎಂದರು.

ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಸುರೇಶ್ ಗುರೂಜಿ, ತಾಲ್ಲೂಕು ಕಾರ್ಯದರ್ಶಿ ಕೊಟ್ರೇಶ್ ಎಸ್. ಉಪ್ಪಾರ್, ಶಿಕ್ಷಣ ಸಂಯೋಜಕ ತಿಮ್ಮಶೆಟ್ಟಿ, ತಾಲ್ಲೂಕು ಖಜಾಂಚಿ ಬಿ.ಎಸ್. ಹಿಮ, ತಾಲ್ಲೂಕು ಸಹ ಕಾರ್ಯದರ್ಶಿ ಎಚ್.ಡಿ.ಕುಮಾರ್, ಫ್ಲಾಕ್ ಲೀಡರ್ ಎಂ.ಎಲ್.ಎಲಿಜಬೆತ್, ಎಚ್.ಸಿ. ಜ್ಯೋತಿ ಅಮೃತೇಶ್, ಎಸ್.ವಿ.ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಸುನಿಲ್ ಮುಂತಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್.ವಿ. ಪಬ್ಲಿಕ್ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ರೋಸ್ ಮೇರಿ, ನವ್ಯಶ್ರೀ, ಗೈಡ್ ಕ್ಯಾಪ್ಟನ್ ಸುಮಿತ್ರ, ಸ್ಕೌಟ್ ಮಾಸ್ಟರ್ ದೇವರಾಜ್, ಸತೀಶ್; ಬೆಥಸ್ದ ಆಂಗ್ಲ ಮಾಧ್ಯಮ ಶಾಲೆಯ ಗೈಡ್ ಕ್ಯಾಪ್ಟನ್ಸ್ ಶಿಲ್ಪಾಕೃತಿ, ಎಂ. ಚಂದ್ರಕಲಾ, ಸೌಮ್ಯ ಎಚ್.ಎನ್; ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಲೇಡಿ ಸ್ಕೌಟ್ ಮಾಸ್ಟರ್ ಕಾವ್ಯ; ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬೈರಾಪುರ ಗೈಡ್ ಕ್ಯಾಪ್ಟನ್ ಅಶ್ವಿನಿ; ಆಲೂರು ವಿಶ್ವೇಶ್ವರಯ್ಯ ಪಬ್ಲಿಕ್ ಶಾಲೆಯ ಕಬ್ ಮಾಸ್ಟರ್ ಕೆ.ಜೆ. ರಾಮಚಂದ್ರು, ಗೈಡ್ ಕ್ಯಾಪ್ಟನ್ ರೋಹಿಣಿ ಬಿ.ಎಂ, ಲೇಡಿ ಸ್ಕೌಟ್ ಮಾಸ್ಟರ್ ಕೆ.ಎ. ಶಕುಂತಲಾ; ಬೈರಾಪುರ ಶಾಲೆಯ ಸಹ ಶಿಕ್ಷಕರಾದ ಜ್ಯೋತಿಅಮೃತೇಶ್, ನಾಗರತ್ನ, ಅಂಬಿಕಾ, ಅತಿಥಿ ಶಿಕ್ಷಕಿ ಕಾವ್ಯ ಸೇರಿದಂತೆ ಹಲವರು ಉಪಸ್ಥಿತರಿದ್ದರು.
