ಹಾಸನ, ಏ.4: ಹಾಸನ ಜಿಲ್ಲೆಯ ವಿವಿಧ ತಾಲ್ಲೂಕುಗಳ ಹಲವು ಗ್ರಾಮಗಳಲ್ಲಿ ಕಾಡಾನೆಗಳು ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಅರಣ್ಯ ಇಲಾಖೆಯ ಇ.ಟಿ.ಎಫ್ (ETF) ಕಂಟ್ರೋಲ್ ರೂಮ್ ಸಾರ್ವಜನಿಕರಿಗೆ ತುರ್ತು ಎಚ್ಚರಿಕೆ ನೀಡಿದೆ.
ಅರಣ್ಯ ಇಲಾಖೆಯ ಪ್ರಕಟಣೆಯ ಪ್ರಕಾರ, ಬೇಲೂರು, ಸಕಲೇಶಪುರ ಹಾಗೂ ಅರಕಲಗೂಡು ತಾಲ್ಲೂಕುಗಳ ವಿವಿಧ ಗ್ರಾಮಗಳ ಸುತ್ತಮುತ್ತ ಕಾಡಾನೆಗಳ ಹಿಂಡು ಸಂಚರಿಸುತ್ತಿರುವುದು ಗಮನಕ್ಕೆ ಬಂದಿದ್ದು, ಗ್ರಾಮಸ್ಥರು ರಾತ್ರಿ ವೇಳೆ ಅನಗತ್ಯವಾಗಿ ಹೊರಗೆ ಓಡಾಡಬಾರದು, ತೋಟ-ಕಾಡು ಪ್ರದೇಶಗಳಿಗೆ ಒಬ್ಬರೇ ತೆರಳಬಾರದು ಹಾಗೂ ಕಾಡಾನೆಗಳು ಕಂಡುಬಂದರೆ ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಬೇಕೆಂದು ಮನವಿ ಮಾಡಲಾಗಿದೆ.
ಬೇಲೂರು ತಾಲ್ಲೂಕಿನ ಪ್ರದೇಶಗಳು
ಹಿರಿಹಸಡೆ ಗ್ರಾಮದ ಐಬಿಸಿ ಎಸ್ಟೇಟ್ ಹತ್ತಿರದ ಹಂಜಿಹಳ್ಳಿ, ರಿಜ್ವಾನ್ ಸಾಬ್ರು ತೋಟ, ಕುಪ್ಪಗೋಡು ಗ್ರಾಮದ ಪುಟ್ಟಮ್ಮ ಅವರ ಕಾಡು, ಮಡೇನಹಳ್ಳಿ ಗ್ರಾಮದ ಚಿದಾನಂದ ಅವರ ಕಾಡು, ಬೋಮ್ಮೆನಹಳ್ಳಿ ಹಾಗೂ ಕೊಗೋಡು ಗ್ರಾಮದ ಬೇಡಿ ಎಸ್ಟೇಟ್, ಕಿತ್ತಾವರ ಗ್ರಾಮದ ಕಿತ್ತಾವರ ಎಸ್ಟೇಟ್ ಬಿ ಬ್ಲಾಕ್ ಹಾಗೂ ಬಸವಣ್ಣ ದೇವಸ್ಥಾನ ಸುತ್ತಮುತ್ತ, ಶಿರಾಗುರ ಗ್ರಾಮದ ಬಿರ್ಬಾನ್ ಕಾಡು, ಕಾನಹಳ್ಳಿ ಫಾರೆಸ್ಟ್, ಲಕ್ಷ್ಮೀಪುರ ಶಾಲೆ ಸುತ್ತಮುತ್ತ ಕಾಡಾನೆಗಳು ಕಂಡುಬಂದಿವೆ.
ಸಕಲೇಶಪುರ ತಾಲ್ಲೂಕಿನ ಪ್ರದೇಶಗಳು
ಹೆತ್ತೂರು-ಯಸಳೂರು ಹೋಬಳಿ ವ್ಯಾಪ್ತಿಯ ಬಟ್ಟೆಕುಮಾರಿ, ಮತ್ತೂರು ಗ್ರಾಮದ ಬಿದಿರು ನೆಡುತೋಪು, ಪಟ್ಲ ಗ್ರಾಮದ ದೊಡ್ಡ ಹಡ್ಲು, ಕಿರ್ಕಳ್ಳಿ ಗ್ರಾಮದ ಒಂಟಿಗದ್ದೆ, ಕೊಂಗಳ್ಳಿ ಬೆಟ್ಟ, ಐಗೂರು ಗ್ರಾಮದ ಹಳೆ ನರ್ಸರಿ, ಹಾಡ್ಯಾ ಗ್ರಾಮದ ಕಾರೆಕುರಾವ್, ಹಳ್ಳಿಗದ್ದೆ ಗ್ರಾಮದ ಅಕೇಶಿಯ ಫಾರೆಸ್ಟ್, ಮೆಕ್ಕಿರಮನೆ ಗ್ರಾಮದ ಹೆಗ್ಗೋಡ್ಲು, ಚೀರಿ-ಚಿನ್ನಹಳ್ಳಿ ಸುತ್ತಮುತ್ತ ಕಾಡಾನೆಗಳು ಸಂಚರಿಸುತ್ತಿವೆ.
ಅರಕಲಗೂಡು ತಾಲ್ಲೂಕಿನ ಪ್ರದೇಶಗಳು
ಬೈಸೂರು ಫಾರೆಸ್ಟ್ ಹಾಗೂ ಬಾಣಾವರ ಫಾರೆಸ್ಟ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಹ ಕಾಡಾನೆಗಳು ಕಂಡುಬಂದಿರುವುದಾಗಿ ಅರಣ್ಯ ಇಲಾಖೆ ತಿಳಿಸಿದೆ.
ಅರಣ್ಯ ಇಲಾಖೆ ಸಾರ್ವಜನಿಕರಿಗೆ ಕಾಡಾನೆಗಳ ಚಲನವಲನ ಕುರಿತು ಜಾಗರೂಕರಾಗಿರಲು ಮನವಿ ಮಾಡಿದ್ದು, ತುರ್ತು ಪರಿಸ್ಥಿತಿಯಲ್ಲಿ ಇ.ಟಿ.ಎಫ್ ಕಂಟ್ರೋಲ್ ರೂಮ್, ಹಾಸನ ಅನ್ನು ಸಂಪರ್ಕಿಸಲು ಸೂಚಿಸಿದೆ.
ತುರ್ತು ಸಹಾಯವಾಣಿ ಸಂಖ್ಯೆಗಳು
📞 9480817460
📞 9481991326
ಕಾಡಾನೆಗಳು ಕಂಡುಬಂದಲ್ಲಿ ಅವುಗಳನ್ನು ಕೆಣಕಲು ಅಥವಾ ಸಮೀಪಿಸಲು ಯತ್ನಿಸದೇ, ಸುರಕ್ಷಿತ ಅಂತರ ಕಾಯ್ದುಕೊಂಡು ತಕ್ಷಣ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
