ನಾವು ಬುದ್ದಿವಂತರಾ? ನನಗೆ ಈ ಹೇಳಿಕೆ ಬಗ್ಗೆ ಸಂಶಯವಿದೆ. ಈ ಕಾಲಘಟ್ಟದಲ್ಲಿ ವಿಕಸತೆಯ ಪಿತಾಮಹ “ಡಾರ್ವಿನ್” ಬದುಕಿದ್ದರೆ ನನ್ನ ಸಂದೇಹ ಒಪ್ಪುತ್ತಿದ್ದರು. ಅಮೆಜಾನ್ ಕಾಡಿನಲ್ಲಿ ಕಂಡ ದೃಶ್ಯಾವಳಿಗಳಿಗೆ ಡಾರ್ವಿನ್ನರೇ ಹೇಳಿದಂತೆ ” ಈ ಕಾಡಿನ ನರಭಕ್ಷತೆ ಮತ್ತು ಕ್ರೂರತೆಯಿಂದ ಗುಡ್ಡಗಳೆಲ್ಲವೂ ತಲೆ ಬುರುಡೆಗಳಿಂದ ತುಂಬಿ ರಕ್ತದ ಕೋಡಿಯೇ ಹರಿದಿದೆ”. ಇದನ್ನು ಅರಿತಿದ್ದ ಡಾರ್ವಿನ್ನರು “ವೈಸ್ (ವಿವೇಕವುಳ್ಳ) ಎಂಬುವರನ್ನು ಹುಡಕಬೇಕಿದೆ” ಎನ್ನುವ ನಿರ್ಧಾರಕ್ಕೆ ಬಂದಿದ್ದರಂತೆ.
ನಾನು ಆಗಷ್ಟೇ ಕಾಂಬೋಡಿಯ ಪ್ರವಾಸ ಮಾಡಿದ್ದೆ. ಇಂತಹ ಹಿಂದೆ ನೆಡೆದ ನರಮೇಧ ಈ ದೇಶದಲ್ಲಿ ಕಾಣಲು ಸಿಗುವುದು. 1975 ನೆ ಇಸವಿಯಲ್ಲಿ “ಪಾಲ್ ಪಾಟ್ ಅಥವ ಕೇಮರ್ ರೋಜ್” ಆಡಳಿತಾವಧಿಯಲ್ಲಿ ನೆಡದಂತ ಘೋರ ದುರಂತ ಅಲ್ಲಿ ನೋಡಲು ಸಿಗುವುದು. ನಾವು ಬುರಡೆ ಆವಶೇಷಗಳ ಐದು ಅಂತಸ್ತಿನ ಸ್ಮಾರಕ ನೋಡಬಹುದು. ಇತ್ತೀಚೆಗೆ ಅಂದರೆ 1990 ರಲ್ಲಿ ನೆಡೆದ ರುವಾಂಡಾ ಆಂತರಿಕ ಯುದ್ಧದಲ್ಲಿ ಆದ ನರಮೇಧ. ಈ ಯುದ್ಧದಲ್ಲಿ ಸುಮಾರು 2 ಲಕ್ಷ ನಾಗರಿಕರು ಹತರಾದರು. ಆಗ ಅಲ್ಲಿ ಎರಡು ಬೀರ್ ಬಾಟ್ಲಗೆ ಒಂದು ಗ್ರೆನೇಡ್ ಸಿಗುತ್ತಿತ್ತು. ಲಂಡೆನ್ ಆ ದೇಶಕ್ಕೆ ಗ್ರೇನೆಡ್ಗಳನ್ನು ಮಾರಿ ಹೇರಳವಾಗಿ ಹಣ ಮಾಡಿತ್ತು. ಇಂದು ಲಂಡನ್ ನಮಗೆ ಪ್ರಜಾಪ್ರಭುತ್ವದ ಪಾಠ ಹೇಳಲು ಬಂದಿದೆ. ಎಂತಾ ವಿಪರ್ಯಾಸ ಅಲ್ಲವೇ. ಡಾರ್ವಿನ್ನರೇ ಹೇಳಿಕೊಂಡಂತ್ತೆ ‘ವೈಸ್’ ಇವರಿಗೆ ಗೀಳಾಗಿ ಕಾಡಿತ್ತಂತೆ. “ವೈಸ್ ಮತ್ತು ಅನ್ – ವೈಸ್” ಬದಿಗಿಟ್ಟು ನಾನು ಒಂದು ತಾರ್ಕಿಕ ನಿರೂಪಣೆ ವಿವರಿಸುವ ಪ್ರಯತ್ನ ಮಾಡುವೆ.
ನಮ್ಮ ಮನೋ ಜಗತ್ತನ್ನು ಎರಡು ಮಟ್ಟಗಳಲ್ಲಿ ವಿಭಜಿಸಬಹುದು. ಮೊದಲನೆಯದು, ನೈಸರ್ಗಿಕವಾಗಿ ತಲ ತಲಾಂತರಗಳಿಂದ ಬಂದ ಮನೋ ಜಗತ್ತು ಮತ್ತು ನಾವು ಪ್ರಸ್ತುತದಲ್ಲಿ ಕಂಡು ಕೊಂಡ ಮನೋ ಜಗತ್ತು ಅಥವಾ ಆಯಾಮ. ನೈಸರ್ಗಿಕವಾಗಿ ಹರಿದ ಮನೋ ಸ್ಥಿತಿ ಮುಗ್ಧತೆಯಿಂದ ಕೂಡಿದ್ದು, ಈಗ ಪಡೆದುಕೊಂಡ ಮನೋ ಸ್ಥಿತಿಗತಿಗಳು ಲೌಕಿಕ ಬದುಕಿಗೆ ಅಂಟಿಕೊಂಡಂತಾದ್ದು. ನೈಸರ್ಗಿಕವಾಗಿ ಬಂದಂತ್ತಾ ಮನಸ್ಸು “ವೈಸ್” ನಿಂದ ತುಂಬಿದ್ದು, ಈಗಿನ ಮನಸ್ಸು ವಿಲಕ್ಷಣ ಬುದ್ದಿ, ಉದಾತ್ತ ವೃತ್ತಿ, ಹೇರಳ ಹಣ, ಅತಿಯಾದ ಸ್ಪರ್ಧೆ ಹೀಗೆ, ಇವುಗಳಿಂದ ಅಂಟಿಕೊಂಡು “ಅನ್ – ವೈಸ್” ಆಗಿರುತ್ತದೆ. ವೈಯಕ್ತಿಕವಾಗಿ ನಾನು ಮುಗ್ಧತೆಯ ಮನಸ್ಸನ್ನು ಆಯ್ಕೆ ಮಾಡಿಕೊಳ್ಳುವೆನು. ಆದರೆ ಭೌತಿಕ ಲೋಕದಲ್ಲಿ ನನ್ನ ಈ ಆಯ್ಕೆ ಸರಿಯೇ?
ಊಹಾ ತಾರ್ಕಿಕವಾಗಿ ನೋಡವುದಾದರೆ ವರ್ಚಸ್ಸು ಮತ್ತು ಸುಗುಣತ್ವಗಳ ಪೂರಕತ್ವ ‘ಬುದ್ದಿ’. ಆದರೆ ಇದು ವಿಲಕ್ಷಣ ಬುದ್ದಿ. ಹೀಗಿರುವಾಗ ನಾನು ಹೇಗೆ ದೇವನಾಗಲು ಸಾಧ್ಯ? ಈ ಕಾರಣವನ್ನು ಅವಲೋಕನ ಮಾಡಿದಾಗ ನನ್ನಲ್ಲಿ ಇಂದು ನೈಸರ್ಗಿಕವಾದ ಮನಸ್ಸು ಮತ್ತು ಈವತ್ತಿನ ಲೌಕಿಕ ಬದುಕಿಗೆ ಅಂಟಿಕೊಂಡಿರುವ ಮನಸ್ಸು ಎರಡೂ ಇವೆ. ಆದುದರಿಂದ ಮನುಷ್ಯ ಗುಣವಂತನು ಮತ್ತು ಹೀನನು ಸಹ ಆಗಿರುವನು. ಇದರಿಂದಾಗಿ ಜನರ ಮನಸ್ಸಿನ ಒಳಗೆ ಇವೆರಡರ ಮಧ್ಯೆ ಯಾವಾಗಲೂ ಘರ್ಷಣೆಯಾಗುತ್ತಿರುತ್ತದೆ. ಕೆಲವು ವೇಳೆ ಮಾನವ ಇದರಿಂದ ಹೊರ ಬರದೆ ಅನೇಕ ಮಾನಸಿಕ ಗೊಂದಲಗಳಿಗೆ ಒಳಗಾಗುತ್ತಾನೆ.
ಮಾನವನನ್ನು ಹೋಮೋ ಸೆಪಿಯನ್ ಎಂದು ಕರೆಯುತ್ತೇವೆ. ಲ್ಯಾಟಿನ್ ಬಾಷೆಯಲ್ಲಿ “ಹೋಮೋ” ದ ಅರ್ಥ ಸ್ಥೂಲವಾದ, ಅಂದರೆ “ನೆಟ್ಟಗೆ ನಿಲ್ಲವುದು”. “ಸೆಪಿಯನ್” ಅಂದರೆ “ವೈಸ್” ಎಂದು. ಆದಿ ಕಾಲದಿಂದಲೂ “ಸಂಸಾರ” ಚೌಕಟ್ಟಿನಲ್ಲಿ ಗಂಡಸು ಸಂಸಾರದ ಉಳಿವಿಗೆ ದುಡಿಯುತ್ತಿದ್ದೇನೆ ಎನ್ನುವ ಕಾರಣಕ್ಕೆ ತನ್ನನ್ನು “ವೈಸ್” ಎಂದೇ ಹೇಳಿಕೊಂಡು ಬಂದಿದ್ದಾನೆ. ಹಾಗಿದ್ದರೆ ಒಂದು ವೇಳೆ ಗಂಡು ತನ್ನ ಸಂಗಾತಿಯನ್ನು ಗಂಡನ್ನೇ ಆರಿಸಿದಾಗ ಆತ “ಹೋಮೋ (Homo)” ಎಂದು ಕರೆಸಿಕೊಳ್ಳೂವುದುಕ್ಕೆ ಅರ್ಹನೇ? ಹಿಂದೆ ಹೆಣ್ಣಿಗೆ ಗೌರವ ಕೊಡದಿದ್ದ ಕಾಲವಾಗಿತ್ತು. ಆಕೆಯನ್ನು ಗುಲಾಮಗಿರಿಗೆ ತಳ್ಳುತ್ತಿದ್ದ ಕಾಲ ಅದು. ಅವಳನ್ನು ಬುದ್ದಿ ಇಲ್ಲವೆಂದೇ ಭಾವಿಸುತಿದ್ದ ಕಾಲ ಅಂದು. “ವೈಸ್” ಎಂದರೆ ಬುದ್ದಿವಂತ ಎಂದು. ಹಾಗಾದರೆ “ಅನ್ – ವೈಸ್” ಯಾರು? ಉಹಾ ತಾರ್ಕಿಕವಾಗಿ ಅನ್ – ವೈಸ್ ಈ ಹೆಣ್ಣು ಆಗಿರಬೇಕಲ್ಲವೇ? ಆದುದರಿಂದ ಈಕೆಯನ್ನು “ಲೆಸ್ ಬೀಯಿಂಗ್” ಎಂದು ಹೇಳೋಣವೇ? ಈಕೆ ತನ್ನ ಸಂಗಾತಿಯನ್ನು ಹೆಣ್ಣನ್ನೇ ಆರಿಸಿದಾಗ, ಈ ಸಪಿಂಡ ತನವನ್ನು “ಲೆಸ್ ಬೀಯಿಂಗ್” ಎಂದು ಹೇಳಬಹುದಾ? ಕಾಲ ಕ್ರಮೇಣ ಈ ಸಂಬಂಧವು “ಲೆಸ್ಬಿಯನ್ (Lesbian)” ಎಂದು ಮಾರ್ಪಾಡು ಆಗಿರಬಹುದೇ?
ವೈಜ್ಞಾನಿಕವಾಗಿ ನಮ್ಮ ನಮ್ಮ ಸಂಗಾತಿಗಳನ್ನು ಆರಿಸಿಕೊಳ್ಳುವಾಗ ಅಥವ ಆಕರ್ಷಿತಗೂಂಡಾಗ ನಮಗೆ ಅರಿವಿಲ್ಲದಂತೆ “ಆಕರ್ಷಿತ ಹಾರ್ಮೋನ್” ಕೆಲಸ ಮಾಡುತ್ತದೆ. ಈ ಹಾರ್ಮೋನ್ ನ್ನು “ಫೆನರೋಮ್ (Phenoromes)” ಎಂದು ಕರೆಯುತ್ತಾರೆ. ಮಾನವ ಪ್ರೀತಿಯ ಭಾವಪರವಶೆಯಲ್ಲಿ ತೇಲಾಡುವಾಗ ಈ ಹಾರ್ಮೋನ್ ನಮ್ಮ ಬೆವರು ಗ್ರಂಥಿಗಳಲ್ಲಿ ಉತ್ಪತ್ತಿ ಆಗುವುದು. ವಿಜ್ಞಾನಿಗಳು ಈ ಹಾರ್ಮೋನ್ ರಸಾಯನಿಕ ಗುಣವನ್ನು ಕಂಡುಹಿಡಿದು ಕೃತಕವಾಗಿ ತಯಾರಿಸಿದ್ದಾರೆ. ತಯಾರು ಮಾಡಿದ ಹಾರ್ಮೋನ್ ನ್ನು ಬಾಡಿ ಸ್ಪ್ರೇ ಜೊತೆಗೆ ಬೆರೆಸಿ ಮಾರಾಟ ಮಾಡುವರು.
ಸರಾಸರಿ 98% ವಿಭಿನ್ನ ಲಿಂಗದ ಕಡೆ ಜನರು ಆಕರ್ಷಕರಾಗುತ್ತಾರೆ. ಇನ್ನು 2% ಜನರು ಸಲಿಂಗದ ಕಡೆ ಆಕರ್ಷಕ್ಕೆ ಒಳಗಾಗುತ್ತಾರೆ. ಈ ಸಮಸ್ಯೆಗೆ ಹಲವಾರು ಕಾರಣಗಳಿದ್ದು ಅವರವರ ಫೆನರೋಮ್ಸ ಹೊರ ಸೋಸುವಿಕೆಯ ವೆತ್ಯಾಸದಿಂದ ಆಗಬಹುದು ಎಂದು ನರ ವಿಜ್ಞಾನಿಗಳು ಮತ್ತು ಮನೋ ವಿಜ್ಞಾನಿಗಳು ಹೇಳಿದ್ದಾರೆ. ಕಾರಣ ಎಷ್ಟು ಜಟಿಲವಾಗಿದಿಯೋ ಈ ಸಮಸ್ಯೆಯನ್ನು ಸರಿಪಡಿಸುವುದು ಅಷ್ಟೇ ಕಷ್ಟಕರ.
ಪ್ರಪಂಚಾದ್ಯಂತ “ರೈನ್ ಬೋ ಅಥವಾ ಪ್ರೈಡ್ ಫ್ಲಾಗ್ (Rain Bow or Pride Flag)” ಚಳುವಳಿಯನ್ನು ಕೇಳಿರಬಹುದು. ವಿಭಿನ್ನ ಸಪಿಂಡಗಳ ಗುಂಪುಗಳಿಂದ, ಕೆಲವು ಸರ್ಕಾರೇತರ ಸಂಸ್ಥೆಗಳಿಂದ, ಉದಾರಿ ಮಾನವೀಯತೆಯ ಶ್ರೇಷ್ಠ ವಕೀಲರಿಂದ ಮತ್ತು ನ್ಯಾಯಾಂಗ ತೀರ್ಪಿನಿಂದಾಗಿ ಈ ಚಳುವಳಿಯು ಶುರು ಆಯಿತು. ವಿಭಿನ್ನ ಸಪಿಂಡಗಳ (ಸ್ವಲಿಂಗ – Homo) ಪಂಗಡಗಳು ಯಾರೆಂದರೆ “ಗೇ, ಲೆಸ್ಬಿಯನ್, ಬೈ ಸೆಕ್ಸುಯಲ್, ಕ್ವೀರ್ಸ, ಟ್ರಾನ್ಸ ಜಂಡರ್, ಇಂಟರ್ ಸೆಕ್ಸ, ಕ್ವಸ್ಚನಿಂಗ್, ಎ ಸೆಕ್ಸುಯಲ್, ಟು ಸೋಲ್ (Gay, Lesbian, Bi Sexual, Queers, Trans Gender, Intersex, Questionin, A Sexual, To Soul)”. ಇಲ್ಲಿಯವರಿಗೂ ಇವರೆಲ್ಲರು ಧರ್ಮ ಬಾಹಿರವಾಗಿದ್ದರು. ಹೊರಗೆ ಕಾಣುತ್ತಿರಲಿಲ್ಲ. ಭಾರತ ದಂಡ ಸಂಹಿತೆಯ ಅನುಗುಣವಾಗಿ ಇವರುಗಳು ಶಿಕ್ಷೆಗೆ ಅರ್ಹರು ಎಂದು ದಾಖಲಾಗಿಸಿತ್ತು.
ಪ್ರಪಂಚಾದ್ಯಂತ ಯಾವುದೇ ಧರ್ಮ ಇವುರುಗಳನ್ನು ಒಪ್ಪುವುದಿಲ್ಲ. ಮೂಲಭೂತವಾಗಿ ಧರ್ಮ ಸಾರುವುದು ಮತ್ತು ಒಪ್ಪಿಕೊಳ್ಳುವುದು “ನೈಜ ಸಂಸಾರ” ಮಾತ್ರ. ಸಪಿಂಡರಲ್ಲಿ ಸಂಸಾರದ ಸಾರ ಇಲ್ಲದೇ ಇರುವುದರಿಂದ ಎಲ್ಲಾ ಧರ್ಮಗಳು ಈ ಪಂಗಡಗಳನ್ನು ಹೊರಗೆ ಇಟ್ಟಿದ್ದರು. ಆದರೆ 21ನೇ ಶತಮಾನದ ಮಾನವ ಬದಲಾಗಿದ್ದಾನೆ. ವಿಕಸತೆಯನ್ನು ಹೊಂದಿದ್ದಾನೆ. ಬುದ್ದಿವಂತನಾಗಿದ್ದಾನೆ. ಈ ಎಲ್ಲಾ ಕಾರಣಗಳಿಂದಾಗಿ ಮನುಷ್ಯತ್ವವನ್ನು ಹೊಂದಿದ್ದಾನೆ. ಆದುದರಿಂದ ಹೋಮೋಸೆಕ್ಸುಯಾಲಿಟಿಯಿಂದ ಬಳಲುತ್ತಿರುವರು. ಇಂತಹ ಅರಿವಿಲ್ಲದ ಸಮಸ್ಯೆಗಳಿಗೆ ಇಂದು ಮನೋಧರ್ಮ ಅಥವಾ ಮಾನವೀಯತೆ ಗೆದ್ದಿದೆ. ಇವುರು ನಮ್ಮಂತಯೇ ಎನ್ನುವ ಮನೋಭಾವಕ್ಕೆ ಈ ಸಮಾಜ ಬಂದಿದೆ. ಇಂತಹ ಹುಟ್ಟು ಮಾನಸಿಕ ಸಮಸ್ಯೆಗಳಿಗೆ ಔಷದಿ ಇಲ್ಲ. ಕನಿಕರ, ಮರುಕ, ಸಹಾನುಭೂತಿ ಮತ್ತು ಆತ್ಮಸಮಾಲೋಚನೆಗಳೇ ಪರಮ ಔಷಧ…..
ಮುಂದುವರಿಯುವುದು…
-ಡಾ॥ ಎ.ಎಂ.ನಾಗೇಶ್
ಖ್ಯಾತ ಮನೋವೈದ್ಯ

