ಬೆಂಗಳೂರು, ಆಗಸ್ಟ್ 1: ಮೈಸೂರಿನ ಕೆಆರ್ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ದೋಷಿ ಎಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಘೋಷಿಸಿದೆ.
ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರು ಜುಲೈ 29 ರಂದು ವಿಚಾರಣೆಯನ್ನು ಮುಗಿಸಿ ತೀರ್ಪು ಕಾಯ್ದಿರಿಸಿದ್ದರು. ಇಂದು (ಆಗಸ್ಟ್ 1) ಅವರು ದೋಷದ ತೀರ್ಪು ಪ್ರಕಟಿಸಿದರು.
ಶಿಕ್ಷೆಯ ಪ್ರಮಾಣವನ್ನು ಇನ್ನೂ ನ್ಯಾಯಾಲಯ ಪ್ರಕಟಿಸಬೇಕಿದೆ. ಕಾನೂನಿನ ಪ್ರಕಾರ ಕನಿಷ್ಠ 10 ವರ್ಷದಿಂದ ಗರಿಷ್ಠ ಜೀವಾವಧಿ ಶಿಕ್ಷೆ ವಿಧಿಸುವ ಸಾಧ್ಯತೆ ಇದೆ.
ತೀರ್ಪು ಪ್ರಕಟವಾದ ಕ್ಷಣದಲ್ಲಿ ಪ್ರಜ್ವಲ್ ರೇವಣ್ಣ ಕೋರ್ಟ್ ಹಾಲ್ನಲ್ಲೇ ಕಣ್ಣೀರು ಹಾಕಿದ ದೃಶ್ಯ ಕಂಡುಬಂದಿತು. ಕಣ್ಣೀರು ಒರೆಸುತ್ತಾ ಅವರು ಕೋರ್ಟ್ಹಾಲ್ನಿಂದ ಹೊರಟರು.
