ಬೆಂಗಳೂರು March -4 , 2026: ಭಾರತದ ಅತಿದೊಡ್ಡ ಮನರಂಜನಾ ಪಾರ್ಕ್ ಚೈನ್ ಆದ ವಂಡರ್ಲಾ ಹಾಲಿಡೇಸ್ ಲಿ., ತನ್ನ ಬೆಂಗಳೂರು ಪಾರ್ಕ್ನಲ್ಲಿ ವಿಶೇಷ ಒಂದು ದಿನದ ಅನುಭವದೊಂದಿಗೆ ಮಹಿಳಾ ದಿನವನ್ನು ಆಚರಿಸಲು ಸಜ್ಜಾಗಿದೆ. ಮಾರ್ಚ್ 8ರಂದು, ವಂಡರ್ಲಾ ಬೆಂಗಳೂರು, ಮಹಿಳೆಯರಿಗಾಗಿ ವಿಶೇಷವಾದ 1 ಖರೀದಿಸಿ 1 ಉಚಿತ ಪಡೆಯಿರಿ ಕೊಡುಗೆ ಒದಗಿಸಲಿದೆ. ಇದರೊಂದಿಗೆ, ಸಾಹಸ, ಮನರಂಜನೆ ಮತ್ತು ಉತ್ಸಾಹದ ಅನುಭವಗಳಿಂದ ತುಂಬಿದ ದಿನವನ್ನು ಆನಂದಿಸಲು ಮಹಿಳೆಯರಿಗೆ ಪಾರ್ಕ್ ಆದ್ಯಂತ ಉಜ್ವಲವಾದ, ಸುರಕ್ಷಿತವಾದ ಮತ್ತು ಸಬಲ ಸ್ಥಳಗಳಿಗೆ ಪ್ರವೇಶಾವಕಾಶವನ್ನೂ ಒದಗಿಸಲಾಗುತ್ತಿದೆ.
ಅಭಿಪ್ರಾಯ-ಮುಕ್ತ, ಅತಿ-ಶಕ್ತಿಯ ಆಚರಣೆಯಾಗಿ ವಿನ್ಯಾಸಗೊಳಿಸಲಾಗಿರುವ ವಂಡರ್ಲಾ, ಮಹಿಳೆಯರು ಮುಕ್ತವಾಗಿ, ಆರಾಮವಾಗಿ ಮತ್ತು ಆತ್ಮವಿಶ್ವಾಸದಿಂದ ಆಚರಿಸಲು ಸಾಧ್ಯವಾಗುವಂತಹ ಪ್ರಖರವಾದ, ಸುರಕ್ಷಿತ ವಾತಾವರಣವನ್ನು ಸೃಷ್ಟಿ ಮಾಡುವ ಗುರಿ ಹೊಂದಿದೆ. ಈ ವಿಶೇಷ ಮಹಿಳಾ ದಿನದ ಆಚರಣೆಗಳಿಗೆ ಬುಕಿಂಗ್ಗಳು ಈಗ ವಿಶೇಷವಾಗಿ ಆನ್ಲೈನ್ ಬುಕಿಂಗ್ ಪೋರ್ಟಲ್ಗಾಗಿ ತೆರೆದಿವೆ. 10 ವರ್ಷ ಮೇಲ್ಪಟ್ಟ ಗಂಡಸರಿಗೆ ಪಾರ್ಕ್ ಒಳಗಡೆ ಪ್ರವೇಶವಿಲ್ಲ.
ಈ ಆಚರಣೆಗಳನ್ನು ಇನ್ನಷ್ಟು ವಿಶೇಷಗೊಳಿಸಲು ವಂಡರ್ಲಾ ಬೆಂಗಳೂರು, ದಿನದುದ್ದಕ್ಕೂ ಅನೇಕ ಸಂರಚನೆಯ ಅನುಭವಗಳನ್ನು ನಡೆಸಿಕೊಡಲಿದೆ. ಅತಿಥಿಗಳು, ಹಬ್ಬದ ವಾತಾವರಣವನ್ನು ಹೆಚ್ಚಿಸುವುದಕ್ಕಾಗಿಯೇ ಚಿನ್ಯಾಸಗೊಂಡಿರುವ ಉಜ್ವಲ ಥೀಮ್ ಇರುವ ಅಲಂಕರಣದ ಜೊತೆಗೆ, ಪಾರ್ಕ್ ಆದ್ಯಂತ ಎಮ್ ಸಿ-ನಿರ್ದೇಶಿತ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬಹುದು. ಆಚರಣೆಗಳು ನೇರವಾದ ಫೋಮ್ ಪಾರ್ಟಿ, ಅತಿ-ಶಕ್ತಿಯ ವೇವ್ ಪೂಲ್ ಡಿಜೆ ಸೆಶನ್ ಹಾಗೂ ಅತ್ಯಾಕರ್ಷಕವಾದ ಜೂಂಬಾ ಸೆಶನ್ ಹೊಂದಿದ್ದು, ಭಾಗವಹಿಸುವ ಎಲ್ಲರಿದೂ ಮೋಜಿನಿಂದ ತುಂಬಿದ ಸ್ಮರಣೀಯ ದಿನವನ್ನು ಖಾತರಿಪಡಿಸಲಿದೆ. ಈ ಕೌತುಕಕ್ಕೆ ಸೇರ್ಪಡೆಯಾಗಿ ವಂಡರ್ಲಾ ತನ್ನ ಮೀಲ್ ಬೌಲ್+ ಕೇಕ್ ಕಾಂಬೋ ಮೇಲೆ 1 ಖರೀದಿಸಿ 1 ಉಚಿತ ಪಡೆದುಕೊಳ್ಳಿ ಕೊಡುಗೆಯನ್ನೂ ಪರಿಚಯಿಸಲಿದೆ.
ಮಹಿಳಾ ದಿನದ ಆಚರಣೆಯ ಬಗ್ಗೆ ಮಾತನಾಡುತ್ತಾ, ವಂಡರ್ಲಾ ಹಾಲಿಡೇಸ್ ಲಿ.,ನ ಚೀಫ್ ಆಪರೇಟಿಂಗ್ ಆಫಿಸರ್ ಧೀರನ್ ಚೌಧರಿ, “ಈ ಮಹಿಳಾ ದಿನದಂದು ನಾವು, ಇಡೀ ಪಾರ್ಕ್ಅನ್ನು ವಿಶೇಷವಾಗಿ ಮಹಿಳೆಯರಿಗಾಗಿಯೇ ಮೀಸಲಿಡುವ ಮೂಲಕ ಅವರನ್ನು ನಿಜವಾಗಿಯೂ ಆಚರಿಸುವುದು ಎಂದರೆ ಏನೆಂಬುದನ್ನು ಮರುಕಲ್ಪಿಸಿದ್ದೇವೆ. ಒಂದು ದಿನದ ಮಟ್ಟಿಗೆ ವಂಡರ್ಲಾ ಬೆಂಗಳೂರು ಕೇವಲ ಒಂದು ಮನರಂಜನಾ ಪಾರ್ಕ್ಗಿಂತ ಹೆಚ್ಚಾಗಿರುತ್ತದೆ; ಅದು ಮಹಿಳೆಯರು, ಜೋರಾಗಿ ನಕ್ಕು, ಭಯವಿಲ್ಲದೆ ಸವಾರಿ ಮಾಡಿ, ಮುಕ್ತವಾಗಿ ಕುಣಿದು ಮತ್ತು ತಾವು ತಾವೇ ಆಗಿರುವಂತಹ ಅಭಿಪ್ರಾಯ-ಮುಕ್ತ ಸ್ಥಳವಾಗುತ್ತದೆ. ಮಹಿಳೆಯರಿಗೆ ಸುರಕ್ಷಿತವಾದ, ಆನಂದಮಯ ಸಾರ್ವಜನಿಕ ಸ್ಥಳಗಳನ್ನು ಸೃಷ್ಟಿಶುವುದು, ಅವರ ಬಲವನ್ನು, ವೈಯಕ್ತಿಕತೆಯನ್ನು ಮತ್ತು ಚೈತನ್ಯವನ್ನು ಆಚರಿಸುವ ಒಂದು ಶಕ್ತಿಶಾಲಿ ವಿಧಾನ ಎಂದು ನಾವು ನಂಬಿದ್ದೇವೆ. ಪ್ರತಿಯೊಬ್ಬ ಅತಿಥಿಯೂ ಕೇವಲ ಮನರಂಜನೆ ಹೊಂದಿದ ಭಾವದಿಂದ ಮಾತ್ರವಲ್ಲದೆ, ಸಬಲೀಕರಣಗೊಂಡ ಭಾವದಿಂದ ಹೊರನಡೆಯುವುದನ್ನು ಖಾತರಿಪಡಿಸುವುದು ನಮ್ಮ ಗುರಿಯಾಗಿದೆ.” ಎಂದು ಹೇಳಿದರು.
ಎಲ್ಲಾ ವಯಸ್ಸಿನ ಮಹಿಳೆಯರೂ ಆಚರಿಸಲು ಮತ್ತು ಈ ಮಹಿಳಾ ದಿನದಂದು ಪ್ರಕಹರವಾದ, ಮಹಿಳೆ-ಮೊದಲು ಪರಿಸರದಲ್ಲಿ ಅವಿಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಿಕೊಳ್ಳಲು ವಂಡರ್ಲಾ ಅವರನ್ನು ಆಹ್ವಾನಿಸುತ್ತಿದೆ.
● ಎಲ್ಲಾ ವಿಶೇಷ ಕೊಡುಗೆಗಳೂ ವಂಡರ್ಲಾದ ಆನ್ಲೈನ್ ಬುಕಿಂಗ್ ಪೋರ್ಟಲ್ ಮೂಲಕ ಲಭ್ಯವಿದೆ. ವಿವರಗಳು ಕೆಳಗಿವೆ: https://www.wonderla.com/offers | +91 80372 30333, +91 9945557777
