ಚನ್ನರಾಯಪಟ್ಟಣ: ನಗರದ ಆದರ್ಶ ನಗರದಲ್ಲಿರುವ ಲಿಟಲ್ ಮಿಲೇನಿಯಮ್ ಪ್ರೆಸ್ಕೂಲ್ ನಲ್ಲಿ ವಿಶ್ವ ಸೈಕಲ್ ದಿನಾಚರಣೆವನ್ನು ಉತ್ಸವದ ರೂಪದಲ್ಲಿ ಆಚರಿಸಲಾಯಿತು.
ಎಲ್ಲಾ ಮಕ್ಕಳು ತಮ್ಮ ಸೈಕಲ್ಗಳೊಂದಿಗೆ ಉಲ್ಲಾಸದಿಂದ ಭಾಗವಹಿಸಿ ರ್ಯಾಲಿಯಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.
ಈ ಚಟುವಟಿಕೆಯ ಮೂಲಕ ಮಕ್ಕಳಲ್ಲಿ ಆರೋಗ್ಯದ ಮಹತ್ವ, ಸಮತೋಲನ ಹಾಗೂ ಪರಿಸರದ ಪ್ರೀತಿಯನ್ನು ಉತ್ತೇಜಿಸಲಾಯಿತು.
ಸೈಕಲ್ ರ್ಯಾಲಿಯು ಮಕ್ಕಳಿಗೆ ಆನಂದವನ್ನೂ ಕಲಿಕೆಯ ಅನುಭವವನ್ನೂ ನೀಡಿತು.

ಪೋಷಕರ ಸಹಕಾರದಿಂದ ಈ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇದೇ ಸಂದರ್ಭದಲ್ಲಿ ಲಿಟಲ್ ಮಿಲೇನಿಯಮ್ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಸುಷ್ಮ ಮಂಜುನಾಥ್, ಶಾಲೆಯ ಶಿಕ್ಷಕಿಯರು ಸೇರಿದಂತೆ ಇತರರು ಹಾಜರಿದ್ದರು.
- ಮಂಜುನಾಥ್ ಐ.ಕೆ
