ತಮಿಳುನಾಡಿನ ಮಹಾಬಲಿಪುರಂನಲ್ಲಿ ತಯಾರಿಸಲಾದ ವಿಶ್ವದ ಅತಿದೊಡ್ಡ ಏಕಶಿಲಾ ಶಿವಲಿಂಗವನ್ನು ಬಿಹಾರದ ಚಂಪಾರಣ್ ಜಿಲ್ಲೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ದೇವಾಲಯಕ್ಕೆ ಸಾಗಿಸುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ದೊರೆತಿದೆ.
ನವೆಂಬರ್ 21ರಂದು ವಿಶೇಷ ಬೃಹತ್ ಟ್ರೇಲರ್ ಮೂಲಕ ಮಹಾಬಲಿಪುರಂನಿಂದ ಹೊರಟಿರುವ ಶಿವಲಿಂಗವು ಸುಮಾರು 2,100 ಕಿಲೋಮೀಟರ್ ದೂರವನ್ನು 25 ದಿನಗಳಲ್ಲಿ ಸೇರುವ ನಿರೀಕ್ಷೆಯಿದೆ. ಮಾರ್ಗಮಧ್ಯೆ ಅನೇಕ ರಾಜ್ಯಗಳನ್ನು ದಾಟುವ ಈ ಪ್ರಯಾಣಕ್ಕೆ ವಿಶೇಷ ಸುರಕ್ಷತಾ ವ್ಯವಸ್ಥೆಯನ್ನು ಮಾಡಲಾಗಿದೆ.
ಇದನ್ನು ಓದು: ಜಕಾರ್ತಾ ವಿಶ್ವದ ಅತ್ಯಂತ ಜನನಿಬಿಡ ನಗರ — ಯುಎನ್ ವರದಿ
ಚಂಪಾರಣ್ ಪ್ರದೇಶದಲ್ಲಿರುವ ದೇವಸ್ಥಾನದಲ್ಲಿ ಈ ಶಿವಲಿಂಗದ ಪ್ರತಿಷ್ಠಾಪನೆಗಾಗಿ ಭಕ್ತರು ಹಾಗೂ ಸ್ಥಳೀಯರು ಆತುರದಿಂದ ಕಾಯುತ್ತಿದ್ದಾರೆ. ಈ ಮಹಾಕಾಯ ಶಿವಲಿಂಗವು ದೇಶದಾದ್ಯಂತ ಆಧ್ಯಾತ್ಮಿಕ ಕುತೂಹಲವನ್ನು ಹೆಚ್ಚಿಸಿದೆ.
