ಜೂನ್ 21 ನೆಯ ದಿನಾಂಕ ಸಂಯುಕ್ತ ರಾಷ್ಟ್ರಗಳ ಒಕ್ಕೂಟ ಸಂಸ್ಥೆಯ ಸನ್ನಿಧಿಯಲ್ಲಿ ಪ್ರಪಂಚಾದ್ಯಂತ “ಯೋಗ” ದಿನಾಚರಣೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಸುಮಾರು ಮೂರು ಸಾವಿರ ವರ್ಷಗಳ ಹಿಂದೆ “ಗೋವಿಂದ ಭಟ್ಟ” ಋಷಿಯು ಕೃತಿಸಿದ “ಯೋಗ ಸೂತ್ರ”ಗಳು ಇಂದು ವಿಶ್ವ ಮಟ್ಟದಲ್ಲಿ ಬೆಳೆದಿರುವುದು ಭಾರತದ ಹಿರಿಮೆಗೆ ಒಂದು ಮುಕುಟ ಎನ್ನುವುದರಲ್ಲಿ ಸಂಶಯವಿಲ್ಲ.
ದಿನ ನಿತ್ಯ ಈ ಋಷಿಗಳು ರಚಿಸಿರುವ ಸೂತ್ರವನ್ನು ಅನಾವರಣ ಮಾಡಿ ತಿಳಿದು ಪಾಲಿಸಿದಾಗ ಮನಸ್ಸಿಗೆ ಹಿತ ಮತ್ತು ನೆಮ್ಮದಿ ತರುವ ಶಕ್ತಿ ಈ ಸೂತ್ರಗಳಲ್ಲಿ ಇವೆ ಎನ್ನುವುದು ವಿದ್ವಾಂಸರ ವಾದ. ಆದುದರಿಂದ ಈ ಸೂತ್ರ ಗುಚ್ಛ ಪರಿವಿಡಿಯನ್ನು “ಪಥಂಜಲಿ” ಎಂದು ಕರೆದರು. “ಪಥ” ಅಂದರೆ highway ಮತ್ತು “ಅಂಜಲಿ” ಎಂದರೆ “dose”. ಇವೆರಡನ್ನು ಸಮೀಕರಣ ಮಾಡಿದಾಗ, by taking everyday this meditative dose takes a person to the path of Moksha”.
ನನ್ನ ವೈಯಕ್ತಿಕ ಅಭಿಪ್ರಾಯ ಜೂನ್ 21 ರ ದಿನವನ್ನು “ಪತಂಜಲಿ” ಯವರ ದಿವಸ ಎಂದು ಕರೆಯಬಹುದಿತ್ತು. ಈ ವಿಷಯ ಹಾಗಿರಲಿ, ಈ ಯೋಗ ದಿವಸವು ಯೋಗಾಸನಕ್ಕೆ ಮಾತ್ರ ಮೀಸಲಾಗದೇ , ಇಂದು ಪ್ರಪಂಚಾದ್ಯಂತ ಯುದ್ಧ ಉನ್ಮಾದ ಮತ್ತು ಎಲ್ಲರಲ್ಲೂ ಪ್ರತಿಷ್ಠೆಗಳೇ ತುಂಬಿರುವಾಗ “ಯೋಗ” ಸಮಸ್ತ ಆತ್ಮಗಳಿಗೆ ನೆಮ್ಮದಿ, ಏಳಿಗೆ ಮತ್ತು ಸಂತೋಷಗಳನ್ನು ತಂದು “ಸಂಯೋಗ” ಮತ್ತು “ಸನ್ಮಂಗಳ” ತರಲಿ ಎಂದು ಹಾರೈಸಿ ಶುಭವನ್ನು ಕೋರುವ…
- ಡಾಕ್ಟರ್ ಎ. ಎಮ್. ನಾಗೇಶ

