ಧರಣಿಗೆ ತಲೆನೋವು ಎಂದು, ಪೋಷಕರು ಅವರನ್ನು ಎಸ್ಎಸ್ಎಂ ಆಸ್ಪತ್ರೆಗೆ ಕರೆತಂದಿದ್ದರು. ಡಾ. ವಿನಾಯಕ್ ಮತ್ತು ಅವರ ತಂಡ ಐಸಿಯುನಲ್ಲಿ ಸುಮಾರು ಒಂದು ಗಂಟೆ ಚಿಕಿತ್ಸೆ ನೀಡಿದ ಬಳಿಕ ಧರಣಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.

ವೈದ್ಯರು , ಅಪರೇಷನ್ ಮಾಡುವುದಾಗಿ ಮೆಡಿಷನ್ ನ್ನು ತರಿಸಿಕೊಂಡು, ಪೋಷಕರ ಸಹಿ ಪಡೆದಿದ್ದಾರೆ. ನಂತರ ಇಲ್ಲಿ ಆಗುವುದಿಲ್ಲ ಎಂದು ಹೇಳಿ, ಯುವಕನನ್ನು ಬೆಂಗಳೂರಿಗೆ ಶಿಫ್ಟ್ ಮಾಡುವುದಾಗಿ ನಾವೇ ಅದಕ್ಕೆ ಜವಾಬ್ದಾರಿ ಎಂದು ಭರವಸೆ ನೀಡಿ ಪೋಷಕರನ್ನು ನಂಬಿಸಿದ್ದಾರೆ. ಕೆಲ ನಿಮಿಷಗಳಲ್ಲೇ, ಧರಣಿ ಸತ್ತಿರುವುದಾಗಿ ಹೇಳಿ ಬೇಜಾವಬ್ದಾರಿಯ ವರ್ತನೆ ತೋರಿ, ಒಂದು ಜೀವವನ್ನು ತೆಗೆದಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಘಟನೆಯಿಂದ ಆಕ್ರೋಶಗೊಂಡ ಧರಣಿಯ ಪೋಷಕರು ಮತ್ತು ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದು, ವೈದ್ಯರು ಮತ್ತು ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಿಂದಾಗಿ ಆಸ್ಪತ್ರೆ ಆವರಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
