ಮನಸ್ಸು ಮಂಥನ
ಆ ವಿಷಮಗಳಿಗೆ
ನಮ್ಮ ಮನಗಳ ನಡುವಿನ ವಿರಸ
ನಮ್ಮಿಬ್ಬರ ದೂರ ಮಾಡಿತ್ತು
ನೆನಪಿರಲಿ ದೂರವಾಗಿದ್ದು
ದೇಹವೇ ಹೊರತು ಮನಸಲ್ಲ
ನೀ ಇಲ್ಲದ ಕ್ಷಣ ಮನ ಬರಿದಾಗಿತ್ತು
ಹೃದಯ ಭಾರವಾಗಿತ್ತುತಾಯಿ ಇಲ್ಲದ ಮಗುವಂತಾದ ಮನ
ಒಮ್ಮೆ ಬಂದು ಸಂತೈಸು
ನೊಂದ ಜೀವಕೆ ಪ್ರೀತಿಸು
ಕಾರಣ ಗೊತ್ತಿಲ್ಲ ದೂರವಾಗಿದ್ದೇಕೆ
ನೀನೇ ಬೇಕೆನ್ನುವ ಬಯಕೆ
ದೂರವಾಗುತ್ತಿಲ್ಲವೇಕೆ
ನಿನ್ನ ಚೆಲುವು ಕಣ್ಣೆಳೆಯುವಂತದ್ದಲ್ಲ
ಹೃದಯ ಮುಟ್ಟುವಂತದ್ದು
ನಿನ್ನ ಮಗುವಿನಂತ ಮನಸ್ಸು
ನನ್ನ ಬಾಳಿಗದುವೆ ಸೊಗಸು
ಹುಸಿ ಮುನಿಸನು ಬಿಟ್ಟು
ಒಮ್ಮೆ ಬಂದು ಸೇರು
ನನ್ನ ಮನದ ಸೂರು
ಮತ್ತೇಕೆ ಕೋಪ
ಒಮ್ಮೆ ಬಂದು ಸೇರು
ನನ್ನ ಮನದ ದೀಪಾ

- ಈಶ್ವರ್ ಎ.ನಾಟೇಕಾರ್
ಜೇವರ್ಗಿ ಪೋಲೀಸ್ ಠಾಣೆ
– 9591495884
