ಪ್ರಾಸ್ತಾವಿಕವಾಗಿ ತಿಮ್ಮಯ್ಯ ನಾಯಕ್ ಯೋಜನಾಧಿಕಾರಿಗಳು ಜನಜಾಗೃತಿ ವೇದಿಕೆ, ಇವರು ಪರಮಪೂಜ್ಯರು ಮಾಡುತ್ತಿರುವಂತಹ ಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ಹಾಗೂ ಕರ್ನಾಟಕ ರಾಜ್ಯಾದ್ಯಂತ ನಡೆಯುತ್ತಿರುವ ಮಧ್ಯವರ್ಜನ ಶಿಬಿರಗಳ ಬಗ್ಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಶ್ರೀಮತಿ ವೇದಾವತಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೆಳ್ಳಾವಿ ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಸರಕಾರವು ಮಾಡದೇ ಇರುವ ಕಾರ್ಯಕ್ರಮಗಳನ್ನು ಪರಮಪೂಜ್ಯರು ಮಾಡುತ್ತಿರುವುದು ಒಂದು ಒಳ್ಳೆಯ ಸಮಾಜಮುಖಿ ಕೆಲಸ ಎಂದು ತಿಳಿಸುತ್ತಾ ಈ ಶಿಬಿರದಲ್ಲಿ 80ಕ್ಕೂ ಹೆಚ್ಚು ಶಿಬಿರಾರ್ಥಿಗಳು ಇದ್ದು ಇದರಲ್ಲಿ 40 ಜನ ಶಿಬಿರಾರ್ಥಿಗಳು ವ್ಯಸನ ಮುಕ್ತಾರಾದರೆ 40 ಸಂಸಾರಗಳು ಉಳಿದಂತೆ ಎಂದು ಹೇಳುತ್ತಾ ಪೂಜ್ಯರು ಮಾಡುತ್ತಿರುವ ಒಳ್ಳೆಯ ಕಾರ್ಯಕ್ರಮಗಳ ಶ್ಲಾಘನೀಯ ವ್ಯಕ್ತಪಡಿಸಿದರು.
ಈ ಸಂದರ್ಭ ಶ್ರೀ ಚನ್ನಕೇಶವ ಕಲ್ಯಾಣ ಮಂಟಪದ ಮಾಲೀಕರು ಆದ ಶ್ರೀ ಮೃತ್ಯುಂಜಯ ಬೆಳ್ಳಾವಿ, ಮಧ್ಯವರ್ಜನ ಶಿಬಿರದ ವ್ಯವಸ್ಥಾಪನ ಸಮಿತಿಯ ಉಪಾಧ್ಯಕ್ಷರುಗಳಾದ ಕೆಂಪನರಸಯ್ಯ, ಗಂಗಾಧರ್, ದೀಪಕ್, ಶ್ರೀಮತಿ ಮಂಜುಳಾ, ಶ್ರೀಮತಿ ಜ್ಞಾನಮ್ಮ ಹಾಗೂ ಕೋಶಾಧಿಕಾರಿ ಬಿ.ಬಿ. ಗಂಗಾಧರ್ ಉಪಸ್ಥಿತರಿದ್ದರು.
ಈ ಸಂದರ್ಭ ವಲಯದ ಮೇಲ್ವಿಚಾರಕರು ಮನೋಜ್ ತಾಲೂಕಿನ ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು ಹಾಗೂ ತಾಲೂಕಿನ ಎಲ್ಲಾ ವಲಯದ ಸೇವಾ ಪ್ರತಿನಿಧಿಗಳು ಮತ್ತು ನವ ಜೀವನ ಸಮಿತಿಯ ಸದಸ್ಯರು ಹಾಗೂ ಶಿಬಿರದ ಚಿಕಿತ್ಸೆ ತಂಡದ ಶಿಬಿರಾಧಿಕಾರಿ ರಮೇಶ್,ಮೇಲ್ವಿಚಾರಕರಾದ ದರ್ಶನ್, ಆರೋಗ್ಯ ಸಹಾಯಕಿ ಶ್ರೀಮತಿ ನೇತ್ರಾವತಿ ರವರು ಉಪಸ್ಥಿತರಿದ್ದರು.
– ಚಂದ್ರಚೂಡ ಕೆ.ಬಿ
