ಬೆಂಗಳೂರು : ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ ಟ್ರಸ್ಟ್ (ರಿ) ವತಿಯಿಂದ ಕನ್ನಡ ಭಾಷೆ, ಸಾಹಿತ್ಯಕ್ಕೆ ಬೂಕರ್ ಪ್ರಶಸ್ತಿಯ ಮೂಲಕ ಜಗತ್ತಿನ ಮನ್ನಣೆ ತಂದುಕೊಟ್ಟ ಹಿರಿಯ ಸಾಹಿತಿಗಳಾದ ಶ್ರೀಮತಿ ಬಾನು ಮುಷ್ತಾಕ್ ಅವರಿಗೆ ಬೆಂಗಳೂರಿನ ಗಾಂಧಿ ಭವನದಲ್ಲಿ ಗೌರವಿಸಿ ಅಭಿನಂದಿಸಲಾಯಿತು.

ತನ್ನ ಬದುಕು ಬರಹ ಒಂದೇ ತೆರನಾದುದರಿಂದ , ಹೆಣ್ಣಿನ ಸಾಮಾಜಿಕ ಶೋಷಣೆ, ಪುರುಷ ಪ್ರಧಾನ ವ್ಯವಸ್ಥೆ, ಜಾತಿ, ಮತ, ಧರ್ಮದ ಅಡಿಯಲ್ಲಿ ಹೆಣ್ಣು ಹೇಗೆ ತನ್ನನ್ನು ದಹಿಸಿಕೊಂಡು ಬಾಳುವೆ ನಡೆಸುತ್ತಿದ್ದಾಳೆಂಬುದನ್ನು ತನ್ನ ಎಲ್ಲಾ ಕೃತಿಗಳಲ್ಲಿ ತೆರೆದಿಟ್ಟಿದ್ದೇನೆ. ಇದು ನನ್ನೊಬ್ಬಳ ಕಥೆಯಲ್ಲ, ಕನ್ನಡ,ಭಾರತ, ಈ ಜಗತ್ತಿನಲ್ಲಿನ ಎಲ್ಲಾ ಮಹಿಳೆಯರ ಸಂಕಟಗಳೇ ಆಗಿವೆ ಎಂದು ತಮ್ಮ ಮಾತುಗಳನ್ನು ಬಾನು ಮುಷ್ತಾಕ್ ಅವರು ವ್ಯಕ್ತಪಡಿಸಿದರು.

ಸಂಸ್ಥೆಯ ಅಧ್ಯಕ್ಷ ಡಾ.ಎಸ್.ರಾಮಲಿಂಗೇಶ್ವರ, ಪರಿಸರವಾದಿ ಎಂ.ಎ.ರವಿಕುಮಾರ್,ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು, ನಾಟಕಕಾರ ಪ್ರೊ.ತುಕ್ಕಪ್ಪ ಜಡಗೆ ಮುಂತಾದವರಿದ್ದರು.
