ಬೆಂಗಳೂರು : ಪ್ಯೂರ್-ಪ್ಲೇ ಇವಿ ಕಂಪನಿ ಓಲಾ ಎಲೆಕ್ಟ್ರಿಕ್, ತನ್ನ ರೋಡ್ಸ್ಟರ್ ಎಕ್ಸ್ ಪೋರ್ಟ್ಫೋಲಿಯೊದ ಮೋಟಾರ್ ಸೈಕಲ್ಗಳ ವಿತರಣೆಯನ್ನು ಇಂದು ಪ್ರಾರಂಭಿಸುವುದಾಗಿ ಘೋಷಿಸಿದೆ. ತನ್ನ ರೈಡ್ ದಿ ಫ್ಯೂಚರ್ ಅಭಿಯಾನದ ಭಾಗವಾಗಿ, ವಾರಂಟಿ, ಮೂವ್ಒಎಸ್+ ಮತ್ತು ಎಸೆನ್ಷಿಯಲ್ ಕೇರ್ ಅನ್ನು ಉಚಿತವಾಗಿ ಪಡೆಯುವ ಮೊದಲ ತನ್ನ 5,000 ಗ್ರಾಹಕರಿಗೆ ₹10,000 ಮೌಲ್ಯದ ಕೊಡುಗೆಗಳನ್ನು ಘೋಷಿಸಿದೆ.
ಈ ರೋಡ್ಸ್ಟರ್ ಎಕ್ಸ್ ವಾಹನದ ಕಾರ್ಯಕ್ಷಮತೆ ಮತ್ತು ಸುರಕ್ಷತೆ ಹೆಚ್ಚಳವು ಮಿಡ್-ಡ್ರೈವ್ ಮೋಟಾರ್ನೊಂದಿಗೆ ಬರುತ್ತದೆ. ಪವರ್ಟ್ರೇನ್ ಚೈನ್ ಡ್ರೈವ್ ಮತ್ತು ಪರಿಣಾಮಕಾರಿ ಟಾರ್ಕ್ ವರ್ಗಾವಣೆಗಾಗಿ ಸಂಯೋಜಿತ MCU ಅನ್ನು ಸಹ ಒಳಗೊಂಡಿದೆ. ಇದು ಉತ್ತಮ ವೇಗವರ್ಧನೆ ಮತ್ತು ಸುಧಾರಿತ ಶ್ರೇಣಿ ಯನ್ನು ಒದಗಿಸುತ್ತದೆ. ಈ ಮೋಟಾರ್ ಸೈಕಲ್ಗಳಲ್ಲಿ ಫ್ಲಾಟ್ ಕೇಬಲ್ಗಳ ಸಹ ಒಳಗೊಂಡಿದೆ. ಈ ಕೇಬಲ್ಗಳು ಪ್ಯಾಕೇಜಿಂಗ್ ದಕ್ಷತೆಯನ್ನು ಸುಧಾರಿಸುತ್ತದೆ, ತೂಕವನ್ನು ಕಡಿಮೆ ಮಾಡುತ್ತದೆ ಮತ್ತು ಉಷ್ಣ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ. ಉದ್ಯಮದಲ್ಲಿ ಇದು ಮೊದಲ ನಾವೀನ್ಯತೆ ಎನಿಸಿದೆ. ಒಟ್ಟಾರೆ ಈ ವಾಹನವು ಬಾಳಿಕೆ ಮತ್ತು ವಿಶ್ವಾಸಾರ್ಹತೆಗೆ ಹೇಳಿ ಮಾಡಿಸಿದೆ.
ಓಲಾ ಎಲೆಕ್ಟ್ರಿಕ್ನ ಅಧ್ಯಕ್ಷ ಮತ್ತು MD ಭವಿಶ್ ಅಗರ್ವಾಲ್ ಮಾತನಾಡಿ”ನಮ್ಮ ಕಂಪನಿಯ ಆರಂಭದ ಉತ್ಪನ್ನಗಳಾದ ಸ್ಕೂಟರ್ಗಳು ಈಗ ರೋಡ್ಸ್ಟರ್ ಎಕ್ಸ್ ಮೋಟಾರ್ಸೈಕ್ಲಿಂಗ್ ವಿಭಾಗಕ್ಕೆ ನಮ್ಮ ಪ್ರವೇಶ ಗುರುತಿಸುವ ಒಂದು ದಿಟ್ಟ ಹೆಜ್ಜೆ ಎಂದು ಹೇಳಬಹುದು. ಭವಿಷ್ಯದ ಬೈಕ್ ಅನ್ನು ಓಡಿಸಲು ಬಯಸುವ ಪೀಳಿಗೆಗಾಗಿ ರೋಡ್ಸ್ಟರ್ ಎಕ್ಸ್ ಅನ್ನು ಭಾರತದಲ್ಲಿ ವಿನ್ಯಾಸ ಗೊಳಿಸಿದ್ದು ನಿರ್ಮಿಸಲಾಗಿದೆ. ವಾಹನಗಳ ವಿತರಣೆಗಳು ಇಂದಿನಿಂದ ಪ್ರಾರಂಭವಾಗುವು ದರೊಂದಿಗೆ, ರೋಡ್ಸ್ಟರ್ ಎಕ್ಸ್ 2W ವಿಭಾಗದಲ್ಲಿ EV ಗಳ ನಿಜವಾದ ಸಾಮರ್ಥ್ಯವನ್ನು ಪ್ರದರ್ಶಿಸಲಿದೆ. EV ಅಳವಡಿಕೆ ಮತ್ತು #EndICEAge ಗೆ ನುಗ್ಗುವಿಕೆಯನ್ನು ವೇಗಗೊಳಿಸುತ್ತದೆ” ಎಂದು ಹೇಳಿದರು.

ರೋಡ್ಸ್ಟರ್ ಎಕ್ಸ್ ಸರಣಿಯು ಮೋಟಾರ್ಸೈಕಲ್ ತಂತ್ರಜ್ಞಾನದಲ್ಲಿ ಒಂದು ಪ್ರಗತಿಯನ್ನು ನೀಡುತ್ತದೆ ಮತ್ತು ಸಿಂಗಲ್ ಎಬಿಎಸ್ನೊಂದಿಗೆ ಮೊದಲ-ಇನ್-ಸೆಗ್ಮೆಂಟ್ ಪೇಟೆಂಟ್ ಪಡೆದ ಬ್ರೇಕ್-ಬೈ-ವೈರ್ ತಂತ್ರಜ್ಞಾನ ಮತ್ತು ಸುಧಾರಿತ ಪುನರುತ್ಪಾದನೆ, ಕ್ರೂಸ್ ಕಂಟ್ರೋಲ್ ಮತ್ತು ರಿವರ್ಸ್ ಮೋಡ್ನಂತಹ ಸ್ಮಾರ್ಟ್ ಮೂವ್ಓಎಸ್ 5 ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ವಾಹನ ಸರಣಿಯ ಬ್ಯಾಟರಿ ವ್ಯವಸ್ಥೆಯು IP67 ಜಲ ನಿರೋಧಕ ಮತ್ತು ಧೂಳು-ನಿರೋಧಕ ಪ್ರಮಾಣೀಕರಣ, ಸುಧಾರಿತ ವೈರ್ ಬಾಂಡಿಂಗ್ ತಂತ್ರ ಜ್ಞಾನ ಮತ್ತು ಸುಲಭ ನಿರ್ವಹಣೆ ಮುಂಂತಾದವನ್ನು ಸಕ್ರಿಯಗೊಳಿಸು ವಂಥ ಸೇವೆ ನೀಡುವ ಬ್ಯಾಟರಿ ನಿರ್ವಹಣಾ ವ್ಯವಸ್ಥೆ (BMS) ಅನ್ನು ಒಳಗೊಂಡಿದೆ.
ರೋಡ್ಸ್ಟರ್ X ಸರಣಿಯ ಬೆಲೆಗಳು ಕ್ರಮವಾಗಿ ₹99,999, ₹1,09,999 ಮತ್ತು ₹1,24,999 ರಿಂದ ಪ್ರಾರಂಭ ವಾಗುತ್ತವೆ. ಅಂದರೆ, ರೋಡ್ಸ್ಟರ್ X+ 4.5kWh ವಾಹನಕ್ಕೆ ಬೆಲೆ ₹1,29,999 ಆಗಿದ್ದರೆ, ಪ್ರತಿ ಚಾರ್ಜ್ಗೆ 501 ಕಿಮೀ ಮೈಲೇಜ್ ನೀಡುವ ರೋಡ್ಸ್ಟರ್ X+ 9.1kWh (4680 ಭಾರತ್ ಸೆಲ್ನೊಂದಿಗೆ) ಬೆಲೆ ₹1,99,999 ಆಗಿದೆ.
