ಇಸ್ಲಾಮಾಬಾದ್: ಇತ್ತೀಚೆಗಷ್ಟೇಭಾರತವನ್ನು ಬಾಲ್ಕನೈಸೇಶನ್ ಮಾಡುವುದಾಗಿ ಬೆದರಿಕೆ ಹಾಕಿದ್ದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ನ (ಜೆಇಎಂ) ನಾಯಕ ಮೌಲಾನಾ ಅಬ್ದುಲ್ ಅಜೀಜ್ ಸೋಮವಾರ ಪಾಕಿಸ್ತಾನದ ಬಹಾವಲ್ಪುರದಲ್ಲಿ ಶವವಾಗಿ ಪತ್ತೆಯಾಗಿದ್ದಾನೆ.
ಆತನ ಸಾವು ನಿಗೂಢವಾಗಿದೆ.
ಅಬ್ದುಲ್ ಅಜೀಜ್ ಕಳೆದ ತಿಂಗಳು ಭಾರತಕ್ಕೆ ಬೆದರಿಕೆ ಹಾಕಿ, ಬಾಲ್ಕನೈಸೇಶನ್ ಎಂಬ ಪದವನ್ನು ನೀಡಿದ್ದ. ಇದು ಒಂದು ದೇಶವನ್ನು ಸಣ್ಣ, ಪ್ರತಿಕೂಲ ಪ್ರದೇಶಗಳಾಗಿ ವಿಭಜಿಸುವುದನ್ನು ವಿವರಿಸಲು ಬಳಸುವ ಪದವಾಗಿದೆ. ಆತನ ಸಾವನ್ನು ಜೆಇಎಂ ಜೊತೆ ಸಂಪರ್ಕ ಹೊಂದಿರುವ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ದೃಢಪಡಿಸಿದ್ದು, ಬಹಾವಲ್ಪುರದಲ್ಲಿ ಆತನ ಅಂತ್ಯಕ್ರಿಯೆ ನಡೆಯಲಿದೆ ಎಂದು ಘೋಷಿಸಲಾಗಿದೆ.
ಪಾಕಿಸ್ತಾನಿ ಅಧಿಕಾರಿಗಳು ಮತ್ತು ಜೆಇಎಂನ ಉನ್ನತ ನಾಯಕರು ಈ ಘಟನೆಯನ್ನು ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ಇದು ಅಜೀಜ್ ಸಾವು ನಿಜವೇ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವ ವದಂತಿಯೇ ಎಂಬ ಬಗ್ಗೆ ಗೊಂದಲವನ್ನು ಸೃಷ್ಟಿಸಿದೆ.

[…] […]