ಹಾಸನ, ಜೂನ್ 6: ಪರಿಸರ ದಿನಾಚರಣೆ ಅಂಗವಾಗಿ ಹಾಸನಾಂಬ ವೆಲ್ಫೇರ್ ಸೊಸೈಟಿ ವತಿಯಿಂದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಹಯೋಗದೊಂದಿಗೆ ಹಾಸನ ನಗರದ ಸರ್ಕಾರಿ ಕ್ರೀಡಾಂಗಣದ ಹೋರವಲಯದಲ್ಲಿ ಸಸ್ಯಾರೋಪಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಈ ಕಾರ್ಯಕ್ರಮದಲ್ಲಿ ಅಧ್ಯಯನ ಕಾಲೇಜಿನ ವಿದ್ಯಾರ್ಥಿಗಳು ಸಕ್ರಿಯವಾಗಿ ಪಾಲ್ಗೊಂಡು ಸಸ್ಯ ನೆಡುವಲ್ಲಿ ಶ್ರಮಿಸಿ, ಪರಿಸರ ಸಂರಕ್ಷಣೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವ ಸಂದೇಶವನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ “ಪರಿಸರ ಉಳಿಸಿ, ಬೆಳೆಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿ” ಎಂಬ ಮಹತ್ವದ ವಿಷಯವನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲಾಯಿತು.

ಸಂಸ್ಥೆಯ ಅಧ್ಯಕ್ಷರು ಸಿಂಧೂ ಆಕಾಶ ಮಾತನಾಡುತ್ತಾ, “ಗಿಡ ನೆಡುವ ಕಾರ್ಯವನ್ನು ಕೇವಲ ಒಂದು ದಿನದ ಕಾರ್ಯಕ್ರಮವಲ್ಲದೇ ನಿರಂತರ ಚಟುವಟಿಕೆಯಾಗಿಸಲು ನಮ್ಮ ತಂಡ ಬದ್ಧವಾಗಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಗಿಡಗಳನ್ನು ನೆಡುವ ಯೋಜನೆ ಇದೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯಧ್ಯಕ್ಷ ಮನೋಜ್ ಕುಮಾರ್ ಶರ್ಮ ಮತ್ತು ಸಹ ಕಾರ್ಯಧ್ಯಕ್ಷ ವಿನೇಶ್ ಕುಮಾರ್ ಉಪಸ್ಥಿತರಿದ್ದರು. ಅವರು ಸಹ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿ, ಪರಿಸರದ ಅರಿವು ಮೂಡಿಸಲು ಜವಾಬ್ದಾರಿಯುತ ನಡವಳಿಕೆ ಬೇಕೆಂದು ತಿಳಿಸಿದರು.
ಹಾಸನದ ಪೈಲ್ವಾನರ ಮೈದಾನದ ಸುತ್ತಮುತ್ತ ಗಿಡ ನೆಡುವ ಈ ಕಾರ್ಯಕ್ರಮವನ್ನು ಸ್ಥಳೀಯರು ಮತ್ತು ಸಹಭಾಗಿತ್ವದ ಸಂಘಟನೆಗಳು ಮೆಚ್ಚಿ ಸ್ಫೂರ್ತಿದಾಯಕ ಮಾದರಿಯಾಗಿ ಗುರುತಿಸಿದವು.

[…] […]