“ದೊಡ್ಡ ರಂಗೇಗೌಡ”
~~~~~~~~~~~~~~
1. ದೊಡ್ಡ ರಂಗೇಗೌಡರು ಜನಿಸಿದ ಊರು ಯಾವುದು?
1)ಕುರುಬರ ಹಳ್ಳಿ. 2)ನಾಯಕರ ಹಳ್ಳಿ. 3)ಗೌಡರ ಹಳ್ಳಿ
2. ದೊಡ್ಡ ರಂಗೇಗೌಡ ಅವರ ತಂದೆಯ ಹೆಸರೇನು?
1)ಚನ್ನೇಗೌಡರು. 2)ನಿಂಗೇಗೌಡರು. 3)ರಂಗೇಗೌಡರು
3. ದೊಡ್ಡ ರಂಗೇಗೌಡ ಅವರ ತಾಯಿಯ ಹೆಸರೇನು?
1)ತಾಯಮ್ಮ. 2)ಅಕ್ಕಮ್ಮ. 3)ತಂಗ್ಯಮ್ಮ
4. ದೊಡ್ಡ ರಂಗೇಗೌಡ ಅವರು ಜನಿಸಿದ ದಿನಾಂಕ ಯಾವುದು?
1)05 ಫೆಬ್ರವರಿ 1946 2)09 ಫೆಬ್ರವರಿ 1946 3)07 ಫೆಬ್ರವರಿ 1946
5. ದೊಡ್ಡ ರಂಗೇಗೌಡರ ಕಾವ್ಯನಾಮ ಯಾವುದು?
1)ತನುಜ. 2)ಮನುಜ. 3)ಅನುಜ
6. ದೊಡ್ಡ ರಂಗೇಗೌಡ ಅವರು ಅಭಿನಯಿಸಿದ ಚಲನಚಿತ್ರ ಯಾವುದು?
1)ಮಾಗಿಯ ಕನಸು. 2)ಎರಡು ಕನಸು 3)ಹಗಲುವೇಷ
7. ದೊಡ್ಡ ರಂಗೇಗೌಡ ಅವರು ನಿರ್ದೇಶಿಸಿದ ಚಲನಚಿತ್ರ ಯಾವುದು?
1)ಹೃದಯ ಗೀತೆ. 2)ಹಂಸ ಗೀತೆ. 3)ಹಾರುವ ಹಂಸಗಳು
8. ದೊಡ್ಡ ರಂಗೇಗೌಡ ವಿರಚಿತ “ಮಲೆನಾಡಿನ್ ಮೂಲೆನಾಗೆ… ಇತ್ತೊಂದು ಸಣ್ಣ ಹಳ್ಳಿ…” ಗೀತೆ ಇರುವ ಚಲನಚಿತ್ರ ಯಾವುದು?
1)ಪಡುವಾರಹಳ್ಳಿ ಪಾಂಡವರು. 2)ಬಂಗಾರದ ಜಿಂಕೆ. 3)ಸುವರ್ಣ ಸೇತುವೆ
9. ಡಾ.ರಾಜ್ ಕುಮಾರ್ ಗಾಯನದಲ್ಲಿ ದೊಡ್ಡ ರಂಗೇಗೌಡ ಅವರ “ಹೃದಯ ಸಮುದ್ರ ಕಲಕಿ, ಹೊತ್ತಿದೆ ರೋಷದ ಬೆಂಕಿ..” ಗೀತೆಯು ಇರುವ ಚಿತ್ರ ಯಾವುದು?
1)ಶರವೇಗದ ಸರದಾರ. 2)ಅಶ್ವಮೇಧ 3)ಬೆಳ್ಳಿಯಪ್ಪ ಬಂಗಾರಪ್ಪ
10. ಪಡುವಾರಹಳ್ಳಿ ಪಾಂಡವರು ಚಿತ್ರಕ್ಕಾಗಿ ದೊಡ್ಡ ರಂಗೇಗೌಡರು ಬರೆದ “ಜನ್ಮ ನೀಡಿದ _______ ಯ ನಾ ಹೇಗೆ ಮರೆಯಲಿ…” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಭೂತಾಯಿ. 2)ತಾಯಿ. 3)ತಂದೆ
11. ದೊಡ್ಡ ರಂಗೇಗೌಡರ “ಮೂಡುತ ರವಿ ರಂಗು ಚೆಲ್ಲೈತೆ…..” ಭಾವಗೀತೆ ಅಡಕವಾಗಿರುವ ಧ್ವನಿಸುರುಳಿ(ಕ್ಯಾಸೆಟ್) ಯಾವುದು?
1)ಮಾವು ಮಲ್ಲಿಗೆ. 2)ಭೂಮಿ ಬಾನು. 3)ಮಾವು ಬೇವು
12. ದೊಡ್ಡ ರಂಗೇಗೌಡ ಅವರ “ನವೋದಯ ಕಾವ್ಯ; ಒಂದು ಪುನರ್ ಮೌಲ್ಯಮಾಪನ” ಪ್ರಬಂಧಕ್ಕೆ ಲಭಿಸಿದ ಗೌರವ ಯಾವುದು?
1)ಡಾಕ್ಟರೇಟ್ ಪದವಿ. 2)ಮುದ್ದಣ ಕಾವ್ಯ ಪ್ರಶಸ್ತಿ. 3)ಕಾವ್ಯ ಮಾಣಿಕ್ಯ ಪ್ರಶಸ್ತಿ
13. ಉತ್ತಮ ಗೀತೆ ರಚನೆಗಾಗಿ ದೊಡ್ಡ ರಂಗೇಗೌಡ ಅವರು ಪಡೆದಿರುವ ರಾಜ್ಯ ಸರ್ಕಾರದ ಪ್ರಶಸ್ತಿಗಳ ಸಂಖ್ಯೆ ಎಷ್ಟು?
1)ಐದು ಬಾರಿ. 2)ಒಂದು ಬಾರಿ. 3)ಮೂರು ಬಾರಿ
14. ದೊಡ್ಡ ರಂಗೇಗೌಡ ಅವರ ಅಧ್ಯಕ್ಷತೆಯಲ್ಲಿ 86ನೇ “ಕನ್ನಡ ಸಾಹಿತ್ಯ ಸಮ್ಮೇಳನ”ವು ನಡೆದ ಸ್ಥಳ ಯಾವುದು?
1)ಗದಗ. 2)ಹಾವೇರಿ. 3)ದಾವಣಗೆರೆ
15. ದೊಡ್ಡ ರಂಗೇಗೌಡ ಅವರು ರಾಜಕೀಯ ಕ್ಷೇತ್ರದಲ್ಲಿ ಯಾವ ಸೇವೆಯನ್ನು ಸಲ್ಲಿಸಿದ್ದಾರೆ?
1)ವಿಧಾನ ಪರಿಷತ್ ಸದಸ್ಯರು. 2)ವಿಧಾನಸಭಾ ಸದಸ್ಯರು. 3)ಲೋಕಸಭಾ ಸದಸ್ಯರು
~~~~~~~~~~~~~~~~~~~~~~~~~~
★ಉತ್ತರಗಳು:-
1)ಕುರುಬರ ಹಳ್ಳಿ 2)ರಂಗೇಗೌಡ 3)ಅಕ್ಕಮ್ಮ 4)07 ಫೆಬ್ರವರಿ 1946 5)ಮನುಜ 6)ಮಾಗಿಯ ಕನಸು 7)ಹಾರುವ ಹಂಸಗಳು 8)ಸುವರ್ಣ ಸೇತುವೆ 9)ಅಶ್ವಮೇಧ 10)ಭೂತಾಯಿ 11)ಮಾವು ಬೇವು 12)ಡಾಕ್ಟರೇಟ್ ಪದವಿ 13)ಮೂರು ಬಾರಿ 14)ಹಾವೇರಿ 15)ವಿಧಾನ ಪರಿಷತ್ ಸದಸ್ಯ
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
