ಕೆ.ಆರ್.ಪೇಟೆ: ಸಹಕಾರಿ ಕ್ಷೇತ್ರದಲ್ಲಿ ಒಟ್ಟಾಗಿ ಶ್ರಮಿಸಿದಾಗ ಮಾತ್ರ ಸಹಕಾರಿ ರಂಗ ಪ್ರಗತಿಯಾಗಲು ಸಾಧ್ಯ ಎಂದು ಮನ್ಮುಲ್ ನಿರ್ದೇಶಕ ಕೆ.ರವಿ (ಡಾಲು ರವಿ) ಅಭಿಪ್ರಾಯಪಟ್ಟರು.
ತಾಲೂಕಿನ ಕಿಕ್ಕೇರಿ ಹೋಬಳಿಯ ಕಳ್ಳನಕೆರೆ ಗ್ರಾಮದ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘದ ಆಡಳಿತ ಮಂಡಳಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರೇಮ ಲೋಕೇಶ್ ಅವರನ್ನು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ತಮ್ಮ ನಿವಾಸದಲ್ಲಿ ಅಭಿನಂದಿಸಿ ಮಾತನಾಡಿದ ಮನ್ಮುಲ್ ನಿರ್ದೇಶಕ ಡಾಲು ರವಿ ಸಹಕಾರಿ ಕ್ಷೇತ್ರದ ಮೂಲಕ ರೈತರನ್ನು ಮೇಲಕ್ಕೆತ್ತುವ ಪ್ರಯತ್ನ ನಡೆದಾಗ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ.ಈ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಮುಖ್ಯ ಸಹಕಾರಿ ಕ್ಷೇತ್ರ ಯಾವುದೇ ಪಕ್ಷದ ಸ್ವತ್ತಲ್ಲ. ಸಹಕಾರಿ ಕ್ಷೇತ್ರ ಬಳಸಿಕೊಂಡು ಭ್ರಷ್ಟಾಚಾರ ನಡೆಸುವವರಿಗೆ ಅವರ ಕುಟುಂಬದ ಕಲ್ಯಾಣ ಮಾತ್ರ ಸಾಧ್ಯ. ಅದೇ ಪ್ರಾಮಾಣಿಕ ಸಹಕಾರಿಗಳಿಂದ ನಾಡಿಗೆ ಅನುಕೂಲ. ಹಾಗಾಗಿ ಅಧಿಕಾರ ಸಿಕ್ಕಾಗ ಒಳ್ಳೆಯದನ್ನು ಮಾಡಬೇಕು ಎಂದು ಸಲಹೆ ನೀಡಿದರು.
ಬಳಿಕ ಗ್ರಾಮಸ್ಥರು ಮನ್ಮುಲ್ ನಿರ್ದೇಶಕ ಡಾಲು ರವಿ ಅವರನ್ನ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷೆ ಪ್ರೇಮ ಲೋಕೇಶ್,ಗ್ರಾಮದ ಮುಖಂಡರಾದ ಕಾಂತರಾಜು, ಉಮೇಶ್, ಅಶೋಕ್ ಕೆ.ವಿ,ಲೋಕೇಶ್,ರಾಜಕುಮಾರ್,ಜಯಣ್ಣ, ನಾರಾಯಣ, ಮಧು, ರಾಜೇಗೌಡ, ಗಣೇಶ್, ಲಕ್ಷ್ಮಿದೇವಮ್ಮ,ಶ್ವೇತ, ಕುಮಾರಿ, ಕಾಳಮ್ಮ, ಮೈತ್ರಿ, ಸುಮಿತ್ರಾ,ಸೇರಿದರೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
