“ಜಿ.ಎಸ್. ಶಿವರುದ್ರಪ್ಪ “
~~~~~~~~~~~~~~~
1. ಜಿ.ಎಸ್. ಶಿವರುದ್ರಪ್ಪನವರು ಹುಟ್ಟಿದ ಊರು ಯಾವುದು?
1)ಶಿವಮೊಗ್ಗ. 2)ಶಿಕಾರಿಪುರ. 3)ಈಸೂರು
2. ಜಿ.ಎಸ್. ಶಿವರುದ್ರಪ್ಪನವರ ತಂದೆಯ ಹೆಸರೇನು?
1)ವೀರನಾರಾಯಣ. 2)ಶಾಂತವೀರಪ್ಪ. 3)ವೀರನಗೌಡ
3. ಜಿ.ಎಸ್. ಶಿವರುದ್ರಪ್ಪನವರ ತಾಯಿಯ ಹೆಸರೇನು?
1)ವೀರಮ್ಮ. 2)ಸುನಂದಮ್ಮ. 3)ತಾಯಮ್ಮ
4. ಜಿ.ಎಸ್. ಶಿವರುದ್ರಪ್ಪನವರ ಜನ್ಮ ದಿನಾಂಕ ಯಾವುದು?
1)1 ಫೆಬ್ರವರಿ 1926 2)25 ಫೆಬ್ರವರಿ 1926 3)7 ಫೆಬ್ರವರಿ 1926
5. ಕುವೆಂಪು ಅವರ ಮಾರ್ಗದರ್ಶನದಲ್ಲಿ ಜಿ.ಎಸ್. ಶಿವರುದ್ರಪ್ಪನವರು ಬರೆದ ಮಹಾ ಪ್ರಬಂಧ ಯಾವುದು?
1)ಸೌಂದರ್ಯ ಸಮೀಕ್ಷೆ. 2)ಸಾಮಗಾನ. 3)ತೆರೆದ ದಾರಿ
6. ಜಿ.ಎಸ್. ಶಿವರುದ್ರಪ್ಪನವರಿಗೆ ರಾಷ್ಟ್ರಕವಿ ಎಂಬ ಗೌರವವು ಲಭಿಸಿದ ವರ್ಷ ಯಾವುದು?
1)2009 2)2006 3)2003
7. ಜಿ.ಎಸ್. ಶಿವರುದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?
1)ಕಾವ್ಯಾರ್ಥ ಚಿಂತನ. 2)ತೆರೆದ ದಾರಿ. 3)ಅನಾವರಣ
8. ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಪಡೆದ ಜಿ.ಎಸ್.ಶಿವರುದ್ರಪ್ಪನವರ ಕೃತಿ ಯಾವುದು?
1)ಅಮೇರಿಕಾದಲ್ಲಿ ಕನ್ನಡಿಗ. 2)ಮಾಸ್ಕೋದಲ್ಲಿ 22 ದಿನ. 3)ಇಂಗ್ಲೆಂಡ್ ನಲ್ಲಿ ಚತುರ್ಮಾಸ
9. ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ಜರುಗಿದ ಸ್ಥಳ ಯಾವುದು?
1)ಹರಿಹರ. 2)ಚಿತ್ರದುರ್ಗ. 3)ದಾವಣಗೆರೆ
10. ಇವುಗಳಲ್ಲಿ ಜಿ.ಎಸ್.ಶಿವರುದ್ರಪ್ಪನವರ ಕವಿತೆ ಯಾವುದು?
1)ಹೆಂಡತಿಯೊಬ್ಬಳು ಮನೆಯೊಳಗಿದ್ದರೆ… 2)ಓ ನನ್ನ ಚೇತನ…. 3)ಎದೆ ತುಂಬಿ ಹಾಡಿದೆನು….
11. ಜಿ.ಎಸ್.ಶಿವರುದ್ರಪ್ಪನವರ “ವೇದಾಂತಿ ಹೇಳಿದನು… ಹೊನ್ನೆಲ್ಲ ಮಣ್ಣು ಮಣ್ಣು…” ಗೀತೆ ಇರುವ ಚಲನ ಚಿತ್ರ ಯಾವುದು?
1)ಮಾನಸ ಸರೋವರ. 2)ಧರ್ಮಸೆರೆ. 3)ಮೌನಗೀತೆ
12. ಜಿ.ಎಸ್.ಶಿವರುದ್ರಪ್ಪನವರ “ಎಲ್ಲೋ ಹುಡುಕಿದೆ ಇಲ್ಲದ ದೇವರ ಕಲ್ಲು ಮಣ್ಣುಗಳ ______ ಒಳಗೆ” ಸಾಲಿನಲ್ಲಿ ಬಿಟ್ಟ ಶಬ್ದ ಯಾವುದು?
1)ಹೊಲದೊಳಗೆ. 2)ಗುಡಿಯೊಳಗೆ. 3)ಮನೆಯೊಳಗೆ
13. ಜಿ.ಎಸ್.ಶಿವರುದ್ರಪ್ಪನವರು ರಾಷ್ಟ್ರಕವಿ ಪ್ರಶಸ್ತಿ ಪಡೆದ ಕನ್ನಡ ಕವಿಗಳಲ್ಲಿ ಎಷ್ಟನೆಯವರು?
1)ಮೊದಲನೆಯವರು. 2)ಎರಡನೆಯವರು. 3)ಮೂರನೆಯವರು
14. ಜಿ.ಎಸ್.ಶಿವರುದ್ರಪ್ಪನವರು ವಿಧಿವಶರಾದ ದಿನಾಂಕ ಯಾವುದು?
1)23 ಡಿಸೆಂಬರ್ 2015 2)23 ಡಿಸೆಂಬರ್ 2013 3)23 ಡಿಸೆಂಬರ್ 2011
15. ಜಿ.ಎಸ್.ಶಿವರುದ್ರಪ್ಪನವರ “ಪ್ರೀತಿ ಇಲ್ಲದ ಮೇಲೆ ______ ಅರಳೀತು ಹೇಗೆ?” ಸಾಲಿನಲ್ಲಿ ಬಿಟ್ಟ ಪದ ಯಾವುದು?
1)ಹೂವು. 2)ಜೋಳ. 3)ಸುಣ್ಣ
~~~~~~~~~~~~~~~~~~~~~~~~~
★ಉತ್ತರಗಳು:-
1)ಈಸೂರು 2)ಶಾಂತವೀರಪ್ಪ 3)ವೀರಮ್ಮ 4)07 ಫೆಬ್ರವರಿ 1926 5)ಸೌಂದರ್ಯ ಸಮೀಕ್ಷೆ 6)2006 7)ಕಾವ್ಯಾರ್ಥ ಚಿಂತನ 8)ಮಾಸ್ಕೋದಲ್ಲಿ 22 ದಿನ 9)ದಾವಣಗೆರೆ 10)ಎದೆ ತುಂಬಿ ಹಾಡಿದೆನು 11)ಮಾನಸ ಸರೋವರ 12)ಗುಡಿಯೊಳಗೆ 13)ಮೂರನೇಯವರು 14) 23 ಡಿಸೆಂಬರ್ 2013 15)ಹೂವು
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
