ಬೆಂಗಳೂರು | ಜೂನ್ 21, 2025 : ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅಧ್ಯಕ್ಷ ಡಾ. ಹುಲಿಕಲ್ ನಟರಾಜ್ ಅವರ ನೇತೃತ್ವದಲ್ಲಿ, ವಿಜ್ಞಾನಾಭಿವೃದ್ಧಿಗೆ ಹೊಸ ದಿಕ್ಕು ನೀಡುವ ಮಹತ್ವದ ಶಿಬಿರ “ನಾನೂ ವಿಜ್ಞಾನಿ” ಇದೇ ಜುಲೈ ತಿಂಗಳಲ್ಲಿ ದೊಡ್ಡಬಳ್ಳಾಪುರದ ಬೆಸೆಂಟ್ ಪಾರ್ಕ್ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ವೈಶಿಷ್ಟ್ಯತೆ:
-
ಪ್ರಥಮ ಬಾರಿಗೆ: ರಾಜ್ಯದ 250 ವಿದ್ಯಾರ್ಥಿಗಳು ತಯಾರಿಸುವ 250 ಟೆಲಿಸ್ಕೋಪ್ಗಳು
-
ಉದ್ದೇಶ: “ಶಾಲೆ/ಕಾಲೇಜಿಗೊಂದು ಟೆಲಿಸ್ಕೋಪ್” ಯೋಜನೆಯಡಿ ವಿಜ್ಞಾನೋಪಕರಣಗಳನ್ನು ಪ್ರೋತ್ಸಾಹಿಸುವುದು
-
ಪ್ರತಿ ವಿದ್ಯಾರ್ಥಿಗೆ ವೆಚ್ಚ: ₹15,000 (ಪೋಷಕರು ಅಥವಾ ಧಾನಿಗಳು ಭರಿಸಬೇಕಾಗುತ್ತದೆ)
-
ತಯಾರಿಸಿದ ಟೆಲಿಸ್ಕೋಪ್: ವಿದ್ಯಾರ್ಥಿಯದೇ ಆಗಿರುತ್ತದೆ
ಆಯ್ಕೆ ವಿಧಾನ ಮತ್ತು ಸೌಲಭ್ಯಗಳು:
-
ಆಯ್ಕೆಗೊಂಡ ವಿದ್ಯಾರ್ಥಿಗಳಿಗಾಗಿ 8 ದಿನಗಳ ಉಚಿತ ತರಬೇತಿ ಶಿಬಿರ
-
ಉಚಿತ ಊಟ, ವಸತಿ ಮತ್ತು ಹಾಜರಾತಿ ಪ್ರಮಾಣ ಪತ್ರ
-
ವಿಜ್ಞಾನ ಶಿಕ್ಷಕರಿಗೂ ಈ ಸೌಲಭ್ಯಗಳು ಅನ್ವಯ
ಹಾಸನ ಜಿಲ್ಲೆಯ ಪಾಲ್ಗೊಳ್ಳುವಿಕೆ:
ಹಾಸನ ಜಿಲ್ಲೆಯ ಪ್ರೌಢ ಶಾಲೆಗಳು ಮತ್ತು ಕಾಲೇಜುಗಳು ಕನಿಷ್ಠ 10 ವಿದ್ಯಾರ್ಥಿಗಳನ್ನು ಶಿಫಾರಸು ಮಾಡಬೇಕು. ವಿದ್ಯಾರ್ಥಿಗಳ ವಿವರಗಳು 25.06.26ರೊಳಗೆ ಭಾರತ ಸೇವಾದಳದ ವಲಯ ಸಂಘಟಕಿ ಶ್ರೀಮತಿ ರಾಣಿ ವಿ ಎಸ್ ಅವರಿಗೆ ಕಳುಹಿಸಬೇಕು.
ಅಭಿಮಾನ ಮತ್ತು ಅವಕಾಶ:
ಈ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳು ತಯಾರಿಸುವ ಟೆಲಿಸ್ಕೋಪ್ಗಳು ಲಿಮ್ಕಾ ಬುಕ್, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರಿದಂತೆ ವಿವಿಧ ಪಟ್ಟಿ ದಾಖಲೆಗಳಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಇದೆ. ಜೊತೆಗೆ ಮುಖ್ಯಮಂತ್ರಿಗಳಿಂದ ಪ್ರಶಸ್ತಿ, ತಾಂತ್ರಿಕ ಪ್ರಮಾಣಪತ್ರ ಲಭ್ಯವಿರುತ್ತದೆ.
ಈ ಒಂದು ಅನುಭವದಿಂದ ವಿದ್ಯಾರ್ಥಿಯ ವಿಜ್ಞಾನ ಜೀವನದ ದಿಕ್ಕು ಬದಲಾಗಬಹುದು.
ಸರ್ಕಾರಿ ನೌಕರರಿಗೆ ‘ಏಕೀಕೃತ ಪಿಂಚಣಿ ಯೋಜನೆ’ : ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ

[…] “ನಾನೂ ವಿಜ್ಞಾನಿ” 2025: ರಾಜ್ಯದ 250 ವಿದ್ಯಾರ್ಥ… […]