ಟಿ.ನರಸೀಪುರ : ಒತ್ತಡ ರಹಿತ ಜೀವನಕ್ಕಾಗಿ ಯೋಗಾಭ್ಯಾಸ ಬಹಳಷ್ಟು ಸಹಕಾರಿಯಾಗಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಜಿ.ಹೆಚ್. ಹನುಮಂತುರವರು ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಮೇಲಂತಸ್ತಿನ ಅಂಗಳದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ‘ವಕೀಲರ ಸಂಘ, ನ್ಯಾಯಾಂಗ ಇಲಾಖೆ ಸಂಯುಕ್ತಾಶ್ರಯ ಅಂತರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಯೋಗ ಮಾಡುವ ಮೂಲಕ ಅಂತರಾಷ್ಟ್ರೀಯ ಯೋಗ ಅರಿವು ಕಾರ್ಯಕ್ರಮ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾವು ದಿನನಿತ್ಯ ಬರುವ ಪ್ರಕರಣಗಳನ್ನು ನಮ್ಮ ಪ್ರಕರಣಗಳಂತೆ ಪರಿಗಣಿಸಿ ಕರ್ತವ್ಯ ನಿರ್ವಹಿಸುತ್ತೇವೆ.ದೈನಂದಿನ ನಾವು ಕರ್ತವ್ಯಕ್ಕೆ ಬರುವಾಗ ಲವಲವಿಕೆಯಿಂದಲೇ ಬರುತ್ತೇವೆ. ಕರ್ತವ್ಯಕ್ಕೆ ಹಾಜರಾದ ಮೇಲೆ ಒಂದು ರೀತಿ ಒತ್ತಡ ಹೆಚ್ಚಾಗುತ್ತದೆ ಇಂತಹ ಒತ್ತಡಗಳನ್ನು ನಿಯಂತ್ರಣ ಮಾಡಬೇಕೆಂದರೆ ಯೋಗ ಮಾಡುವುದರಿಂದ ಕಡಿಮೆ ಮಾಡಿಕೊಂಡು ನಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಸಿವಿಲ್ ನ್ಯಾಯಾಧೀಶರಾದ ಸಚಿನ್ ಎಚ್.ಆರ್., ವಕೀಲರ ಸಂಘದ ತಾಲೂಕು ಅಧ್ಯಕ್ಷ ಮಹದೇವಸ್ವಾಮಿ, ಸಹ ಕಾರ್ಯದರ್ಶಿ ಎಂ. ಮಹಾದೇವಸ್ವಾಮಿ, ಖಜಾಂಚಿ ಮಹಾದೇವಸ್ವಾಮಿ, ಯೋಗ ತರಬೇತುದಾರ ಡಾ. ಮಧುಸೂದನ್, ಹಿರಿಯ ವಕೀಲರುಗಳಾದ ಮಾದಪ್ಪ, ಶಂಭುಲಿಂಗಸ್ವಾಮಿ, ವಕೀಲರ ಸಂಘದ ಮಾಜಿ ತಾಲೂಕು ಅಧ್ಯಕ್ಷ ಪಾಲಾಕ್ಷಮೂರ್ತಿ, ಜ್ಞಾನೇಂದ್ರ ಮೂರ್ತಿ, ಬಸವಣ್ಣ, ತಾಲೂಕು ಕಾನೂನು ಸೇವಾ ಸಮಿತಿ ಆಡಳಿತ ಸಹಾಯಕ ಮಾದಪ್ಪ, ನ್ಯಾಯಾಲಯದ ಶಿರಸ್ತೆದಾರ್ ರವಿ,ಸೇರಿದಂತೆ ನ್ಯಾಯಾಲಯದ ಸಿಬ್ಬಂದಿಗಳಿದ್ದರು.
- ಎಂ.ನಾಗೇಂದ್ರ ಕುಮಾರ್
“ನಾನೂ ವಿಜ್ಞಾನಿ” 2025: ರಾಜ್ಯದ 250 ವಿದ್ಯಾರ್ಥಿಗಳಿಂದ 250 ಟೆಲಿಸ್ಕೋಪ್ ತಯಾರಿಕೆ
