ಹಾಸನ, ಜೂನ್ 21: ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್, ಯೋಗ ಚೇತನಾ ಕೇಂದ್ರ (ಅಡಗೂರು) ಹಾಗೂ ಶ್ರೀ ವರಸಿದ್ಧಿ ವಿನಾಯಕ ಯೋಗ ಸಭಾ (ಎಸ್.ಬಿ.ಎಂ ಕಾಲೋನಿ) ಅವರ ಸಹಯೋಗದೊಂದಿಗೆ ಇಂದು ಹಾಸನ ನಗರದಲ್ಲಿ “ವಿಶ್ವ ಯೋಗ ದಿನಾಚರಣೆ”ಯ ಅಂಗವಾಗಿ ವಿಶಿಷ್ಟ ಯೋಗಾಸನ ಶಿಬಿರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮವು ಎಸ್.ಬಿ.ಎಂ ಕಾಲೋನಿಯ ಶ್ರೀ ವರಸಿದ್ಧಿ ವಿನಾಯಕ ದೇವಸ್ಥಾನ ಆವರಣದಲ್ಲಿ ನಡೆದಿದ್ದು, ಸುಮಾರು 50 ಕ್ಕೂ ಹೆಚ್ಚು ಯೋಗಾಸನ ಆಸಕ್ತರು ಶಿಬಿರದಲ್ಲಿ ಭಾಗವಹಿಸಿದರು. ಶಿಬಿರದಲ್ಲಿ ಪಾಲ್ಗೊಂಡವರು ಯೋಗದ ವಿವಿಧ ಆಸನಗಳ ಅಭ್ಯಾಸ ಮಾಡಿ, ದೇಹ ಮತ್ತು ಮನಸ್ಸಿನ ಸಮತೋಲನ ಸಾಧಿಸುವತ್ತ ಗಮನ ಹರಿಸಿದರು.

ಯೋಗ ಗುರು ಚೇತನ್ ಗುರೂಜಿ ಯವರು ಶಿಬಿರಾರ್ಥಿಗಳಿಗೆ ಯೋಗದ ಮೂಲ ತತ್ತ್ವಗಳು, ಶ್ವಾಸ ನಿಯಂತ್ರಣ ಹಾಗೂ ಆರೋಗ್ಯದ ಮೇಲೆ ಯೋಗದ ಪ್ರಭಾವ ಕುರಿತು ಉಪದೇಶ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಮಧುಶರ್ಮಾ (ಶ್ರೀ ವರಸಿದ್ಧಿ ವಿನಾಯಕ ಯೋಗ ಸಭಾ ಮುಖ್ಯಸ್ಥ), ರೋಟರಿ ಸದಸ್ಯರಾದ ವಜ್ರಕುಮಾರ್, ಎಂ.ಬಿ. ವಿಶ್ವನಾಥ್, ಕೆ.ಎಸ್. ಯೋಗೇಶ್, ಮಧು ಮತ್ತು ಇತರ ಗಣ್ಯರೂ ಉಪಸ್ಥಿತರಿದ್ದರು.
ಸರ್ಕಾರಿ ನೌಕರರಿಗೆ ‘ಏಕೀಕೃತ ಪಿಂಚಣಿ ಯೋಜನೆ’ : ಕೇಂದ್ರ ಸರ್ಕಾರದಿಂದ ಮಹತ್ವದ ಸೂಚನೆ
