~~~~~~~~~~~~
“ಕಯ್ಯಾರ ಕಿಞ್ಞಣ್ಣ ರೈ”
~~~~~~~~~~~~
1. ಕಯ್ಯಾರ ಕಿಞ್ಞಣ್ಣ ರೈ ಅವರ ಹುಟ್ಟೂರು ಯಾವುದು?
1)ಕಾಸರಗೋಡು. 2)ಪೆರಡಾಲ. 3)ಭಟ್ಕಳ
2. ಕಯ್ಯಾರ ಕಿಞ್ಞಣ್ಣ ರೈ ಅವರ ತಂದೆಯ ಹೆಸರೇನು?
1)ದುಗ್ಗಪ್ಪ ರೈ. 2)ಆನಂದಪ್ಪ ರೈ. 3)ದುರ್ಗಪ್ಪ ರೈ
3. ಕಯ್ಯಾರ ಕಿಞ್ಞಣ್ಣ ರೈ ಅವರ ತಾಯಿಯ ಹೆಸರೇನು?
1)ರುದ್ರಕ್ಕೆ. 2)ಬಾಯಕ್ಕೆ. 3)ದೈಯಕ್ಕೆ
4. ಕಯ್ಯಾರ ಕಿಞ್ಞಣ್ಣ ರೈ ಅವರ ಜನ್ಮದಿನಾಂಕ ಯಾವುದು?
1)10 ಜೂನ್ 1915 2)8 ಜೂನ್ 1915 3)6 ಜೂನ್ 1915
5. ಕಯ್ಯಾರ ಕಿಞ್ಞಣ್ಣ ರೈ ಅವರ ಆತ್ಮಕಥನ ಕೃತಿ ಯಾವುದು?
1)ಐಕ್ಯಗಾನ. 2)ಪುನರ್ನವ. 3)ದುಡಿತವೇ ನನ್ನ ದೇವರು
6. ಇವುಗಳಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ನಾಟಕ ಯಾವುದು?
1)ವಿರಾಗಿಣಿ. 2)ಶ್ರೀಮುಖ. 3)ಕೊರಗ
7. ಪ್ರಭಾತ, ರಾಷ್ಟ್ರಬಂಧು, ಸ್ವದೇಶಾಭಿಮಾನಿ ಇವು ಕಯ್ಯಾರ ಕಿಞ್ಞಣ್ಣ ರೈ ಸಂಪಾದಕತ್ವದ ಯಾವ ಪ್ರಕಾರದ ಕೃತಿಗಳು?
1)ಕನ್ನಡ ಪತ್ರಿಕೆಗಳು. 2)ಕವನ ಸಂಕಲನಗಳು. 3)ನಾಟಕಗಳು
8. ಕಯ್ಯಾರ ಕಿಞ್ಞಣ್ಣ ರೈ ಅವರ ನಿವಾಸದ ಹೆಸರೇನು?
1)ಕನ್ನಡ ಮಹಲ್. 2)ಕವಿತಾ ಕುಟೀರ. 3)ಕಾವ್ಯ ಸುಧಾ
9. ಕಯ್ಯಾರ ಕಿಞ್ಞಣ್ಣ ರೈ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳಯಾವುದು?
1)ಧರ್ಮಸ್ಥಳ. 2)ಕಾಸರಗೋಡು. 3)ಮಂಗಳೂರು
10. ಭಾರತ ಭಾರತಿ ಪುಸ್ತಕ ಸಂಪದಮಾಲೆಯಲ್ಲಿ ಕಯ್ಯಾರ ಕಿಞ್ಞಣ್ಣ ರೈ ಮಕ್ಕಳಿಗಾಗಿ ರಚಿಸಿದ ಕಥೆ ಯಾವುದು?
1)ಭಾರದ್ವಾಜ. 2)ಪರಶುರಾಮ. 3)ಜಮದಗ್ನಿ
11. ಕಯ್ಯಾರ ಕಿಞ್ಞಣ್ಣ ರೈ ಅವರಿಗೆ ಹಂಪಿ ವಿಶ್ವವಿದ್ಯಾಲಯವು ನಾಡೋಜ ಪ್ರಶಸ್ತಿ ನೀಡಿದ ವರ್ಷ ಯಾವುದು?
1)2011 2)1900 3)2006
12. ಇವುಗಳಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಕವನ ಸಂಕಲನ ಯಾವುದು?
1)ಶ್ರೀಮುಖ. 2)ರತ್ನರಾಜಿ. 3)ಪಂಚಮಿ
13. ಇವುಗಳಲ್ಲಿ ಕಯ್ಯಾರ ಕಿಞ್ಞಣ್ಣ ರೈ ಅವರ ಶಿಶುಗೀತೆ ಯಾವುದು?
1)ಏರುತಿಹುದು ಹಾರುತಿಹುದು…
2)ಇರುವೆ ಇರುವೆ ಕರಿಯ ಇರುವೆ…
3)ಬಾ ಬಾ ಗಿಳಿಯೆ ಬಣ್ಣದ ಗಿಳಿಯೇ…
14. ಕಯ್ಯಾರ ಕಿಞ್ಞಣ್ಣ ರೈ ಅವರು ಯಾವ ಕವಿಯ ಬಗ್ಗೆ ಮೂರು ಗ್ರಂಥಗಳನ್ನು ರಚಿಸಿದ್ದಾರೆ.?
1)ಎಂ.ಗೋವಿಂದ ಪೈ. 2)ಬಿ.ಎಂ.ಶ್ರೀಕಂಠಯ್ಯ. 3)ದ.ರಾ.ಬೇಂದ್ರೆ
15. ಕಯ್ಯಾರ ಕಿಞ್ಞಣ್ಣ ರೈ ಅವರು ಇಹಲೋಕ ಯಾತ್ರೆಯನ್ನು ಮುಗಿಸಿದ ದಿನಾಂಕ ಯಾವುದು?
1)9 ಆಗಸ್ಟ್ 2013 2)9 ಆಗಸ್ಟ್ 2017 3)9 ಆಗಸ್ಟ್ 2015
~~~~~~~~~~~~~~~~~~~~~~~~~~
★ಉತ್ತರಗಳು:-
1)ಪೆರಡಾಲ 2)ದುಗ್ಗಪ್ರ ರೈ 3)ದೈಯಕ್ಕೆ 4) 08 ಜೂನ್ 1915 5)ದುಡಿತವೇ ನನ್ನ ದೇವರು 6)ವಿರಾಗಿಣಿ 7)ಕನ್ನಡ ಪತ್ರಿಕೆಗಳು 8)ಕವಿತಾ ಕುಟೀರ 9)ಮಂಗಳೂರು 10)ಪರಶುರಾಮ 11)2006 12)ಶ್ರೀಮುಖ 13)ಏರುತಿಹುದು ಹಾರುತಿಹುದು … 14)ಎಂ.ಗೋವಿಂದ ಪೈ 15)09 ಆಗಸ್ಟ್ 2015
******
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ

[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]
[…] ಪ್ರಮುಖ ಕನ್ನಡ ಕವಿಗಳ – ಕವಿ ಪರಿಚಯ ಮಾಲಿಕೆ […]