ಹಾಸನ, ಜೂನ್ 23: ಹಾಸನ ಜಿಲ್ಲೆಯ ದೂರವಾಣಿ ನಗರದ ಬಿ. ಕಾಟಿಹಳ್ಳಿಯಲ್ಲಿ ಇರುವ ಪ್ರಸಿದ್ಧ ಪಂಚಮುಖಿ ಗಣಪತಿ, ಸುಬ್ರಮಣ್ಯ ಹಾಗೂ ನವಗ್ರಹ ದೇವಾಲಯದಲ್ಲಿ ಕಳೆದ ರಾತ್ರಿ ಕಳ್ಳರು ಬಾಗಿಲು ಮುರಿದು ನುಗ್ಗಿ ಲಕ್ಷ ರೂ.ಮಟ್ಟದ ನಗದು ದೋಚಿ ಪರಾರಿಯಾಗಿದ್ದಾರೆ.
ಇದೀಗ ಒಂದು ವರ್ಷದ ಒಳಗೆ ಇದೇ ದೇವಾಲಯದಲ್ಲಿ ಮೂರನೇ ಬಾರಿ ಕಳ್ಳತನ ನಡೆಯುತ್ತಿದೆ. ಇದರಿಂದಾಗಿ ದೇವಸ್ಥಾನದ ಭದ್ರತಾ ವ್ಯವಸ್ಥೆಯಲ್ಲಿನ ಲೋಪ ಮತ್ತು ಪೊಲೀಸರ ನಿರ್ಲಕ್ಷ್ಯತೆ ಕುರಿತು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

“ಪ್ರತಿ ಬಾರಿ ಪ್ರಕರಣದ ಬಳಿಕ ಪತ್ತೆ ಇಲ್ಲದೆ ಮುಚ್ಚಲಾಗುತ್ತದೆ. ದೇವಾಲಯದ ರಕ್ಷಣೆಗೆ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ,” ಎಂದು ಸ್ಥಳೀಯ ನಿವಾಸಿಗಳು ಗಂಭೀರ ಅಸಂತೋಷ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸ್ಥಳೀಯರು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಮನವರಿಕೆ ಸಲ್ಲಿಸಿ, ದೇವಾಲಯಗಳಿಗೆ ಶಾಶ್ವತ ಭದ್ರತಾ ಕ್ರಮಗಳನ್ನು ಒದಗಿಸುವಂತೆ ಆಗ್ರಹಿಸಿದ್ದಾರೆ.
