ಹಾಸನ: ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ಇಂತಹ ಕಾರ್ಯಕ್ರಮಗಳು ಬಹಳ ಉಪಯುಕ್ತವಾಗಿದೆ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಚೌಡುವಳ್ಳಿ ಜಗದೀಶ್ ತಿಳಿಸಿದರು.
ನಗರದ ಮಲೆನಾಡು ಇಂಜಿನಿಯರಿಂಗ್ ಕಾಲೇಜು ಹಾಗೂ ಕರ್ನಾಟಕ ಪರಿಕ್ಷಾ ಪ್ರಾಧಿಕಾರ (ಕೆ ಇ ಎ) ವತಿಯಿಂದ ಮಲೆನಾಡು ಇಂಜಿನಿಯರ್ ಕಾಲೇಜು ಅಡಿಟೋರಿಯಂ ಅವರಣದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಯುಜಿಸಿಇಟಿ 2025 ಸೀಟು ಹಂಚಿಕೆ ಮಂಥನ ಕಾರ್ಯಕ್ರಮ ಉಧ್ಘಾಟನೆ ನೇರವೇರಿಸಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 2025 ಯಜಿಸಿಇಟಿಯಿಂದ ಕಾಲೇಜು ಹಾಗೂ ಕೋರ್ಸ್ಗಳ ಅಯ್ಕೆಯ ಮಾಹಿತಿಯನ್ನು ನೀಡುವ ಸಲುವಾಗಿ ಈ ಕಾರ್ಯಕ್ರಮ ಏರ್ಪಡಿಸಲಾಗಿದ್ದು, ಇದರ ಸದುಪಯೋಗ ಪಡೆಯಲು ವಿದ್ಯಾರ್ಥಿಗಳು ಹಾಗು ಪೋಷಕರಿಗೆ ಹೆಚ್ಚಿನ ಅನೂಕೂಲ ಸೀಗಲೆಂದು. ಸರ್ಕಾರದ ಉನ್ನತ ಶಿಕ್ಷಣ ಇಲಾಖೆಯ ಸಚಿವರು ಸಂಬಂಧಪಟ್ಟವರಿಂದ ರಾಜ್ಯದ ವಿದ್ಯಾರ್ಥಿಗಳಿಗೆ ಉತ್ತಮ ಮಾಹಿತಿ ಕೊಡುತ್ತಿರುವುದು ಎಲ್ಲಾ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಅರ್.ಟಿ. ದ್ಯಾವೇಗೌಡರು ಮಾತಾನಾಡಿ, ಮಲೆನಾಡು ಇಂಜಿನಿಯರಿಂಗ್ ಕಾಲೇಜು ಸುಮಾರು 40 ಎಕರೆ ಜಾಗದಲ್ಲಿ ಇದ್ದು ಇಲ್ಲಿ ಎಲ್ಲಾ ರೀತಿಯ ಸೌಲಭ್ಯ ಕಲ್ಪಿಸಲಾಗಿದೆ. ಕಾಲೇಜು ಕೊಠಡಿಗಳು, ಆಟದ ಮೈದಾನ, ಲ್ಯಾಬ್ರೇಟರಿಗಳು, ಗ್ರಂಥಾಲಯ, ಈಜುಕೋಳ, ಹಾಸ್ಟೆಲ್, ಇತರೆ ಆನೇಕ ಉತ್ತಮ ಸೌಲಭ್ಯ ಕಲ್ಪಿಸಲಾಗಿದೆ. ಸರ್ಕಾರದ ಉನ್ನತ ಶಿಕ್ಷಣ ಇಲಾಖೆ ಸಿಇಟಿ ಮೂಲಕ ಇಂಜಿನಿಯರಿಂಗ್, ವ್ಯೆಧ್ಯಕೀಯ, ಡೆಂಟಲ್ ಇನ್ನಿತರ ಸೀಟುಗಳ ಅಯ್ಕೆ ಮಾಡಿಕೊಳ್ಳುವ ಪ್ರಕ್ರೀಯೆ ಬಗ್ಗೆ ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಸಿಇಟಿಯಿಂದ ಸೀಟು ಪಡೆಯಲು ಯುಜಿಸಿಇಟಿ 2025 ಸೀಟು ಹಂಚಿಕೆ ಮಂಥನ ಕಾರ್ಯಕ್ರಮ ಯಶಸ್ವಿಯಾಗಿ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲುಗೊಂಡಿರುವುದು ಸಂತೋಷವಾಗಿದೆ ಎಂದು ಹೇಳಿದರು.
ಇದನ್ನು ಓದಿ: ಶ್ರವಣಬೆಳಗೊಳ: ಆಚಾರ್ಯ ವಿದ್ಯಾನಂದ ಮಹಾರಾಜರ ಶತಮಾನೋತ್ಸವ: ಜೈನ ಪರಂಪರೆಯ ಗೌರವ ಆಚರಣೆ- ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾಗಿ
ಕಾರ್ಯಕ್ರಮದಲ್ಲಿ ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಖಜಾಂಚಿ ಹೆಚ್ ಡಿ ಪಾರ್ಶನಾಥ್, ಸಿ ಇ ಟಿ ವಿಭಾಗದ ಲತೇಶ್, ಭಾಗವಹಿಸಿದ್ದರು. ಕಾಲೇಜು ವತಿಯಿಂದ ಸಿಇಟಿಯಿಂದ ಕಾಲೇಜು ಅಯ್ಕೆ ಹಾಗೂ ಸೀಟು ಪಡೆಯುವ ಸವಿಸ್ಥಾರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನಿಡಲಾಯಿತು ಕಾರ್ಯಕ್ರಮದ ಸ್ವಾಗತವನ್ನು ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ ಎ.ಜೆ. ಕೃಷ್ಣಯ್ಯ ಸ್ವಾಗತಮಾಡಿದರು, ವಂದನಾರ್ಪಣೆಯನ್ನು ಮಲೆನಾಡು ಇಂಜಿನಿಯರಿಂಗ್ ಕಾಲೇಜು ನಿರ್ದೇಶಕರಾದ ಡಾ ಎಸ್ ಪ್ರಧೀಪ್ ನೆರವೇರಿಸಿದರು,ಕಾರ್ಯಕ್ರಮದಲ್ಲಿ ಕಾಲೇಜೀನ ವಿದ್ಯಾರ್ಥಿ ಕ್ಷೇಮಭಿವೃದ್ದಿ ಅಧಿಕಾರಿಗಳಾದ ಡಾ. ಕೆ.ಎ. ದುಷ್ಂತ್, ಸಹ ವಿದ್ಯಾರ್ಥಿ ಕ್ಷೇಮಭಿವೃದ್ದಿ ಅಧಿಕಾರಿ ಡಾ. ಇಂದ್ರ ಬಹುದ್ದೂರು, ಹಾಗು ದ್ವೀತೀಯ ಪಿಯುಸಿ ಪಾಸಾದ ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು.

[…] […]