ಬೆಂಗಳೂರು, ಜೂನ್ 29: ಆಸ್ತಿ ಮಾಲೀಕರಿಗೆ ಮಹತ್ವದ ಸುದ್ದಿಯಾಗಿದೆ. ಇತ್ತೀಚೆಗೆ ಕಂದಾಯ ಇಲಾಖೆ ‘ಇ-ಖಾತಾ’ ಯೋಜನೆಯನ್ನು ಗ್ರಾಮೀಣ ಪ್ರದೇಶಗಳಲ್ಲೂ ವಿಸ್ತರಿಸಲು ನಿರ್ಧರಿಸಿದೆ. ಇದರಿಂದ ಇನ್ನು ಮುಂದೆ ಕೇವಲ ಪಾಲಿಕೆ ವ್ಯಾಪ್ತಿಯಲ್ಲಷ್ಟೇ ಅಲ್ಲ, ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲೂ ಇ-ಖಾತಾ ಸಿಗಲಿದೆ. ಜುಲೈ 15ರಿಂದ ಈ ಸೇವೆ ಪ್ರಾರಂಭವಾಗುವ ಸಾಧ್ಯತೆಗಳಿವೆ.
ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು ಈ ಕುರಿತು ಪ್ರತಿಕ್ರಿಯಿಸಿ, ಗ್ರಾಮ ಪಂಚಾಯ್ತಿಗಳಲ್ಲೂ ಇ-ಖಾತಾ ನೋಂದಣಿಗೆ ಸಿದ್ಧತೆ ನಡೆದಿದೆ ಎಂದು ತಿಳಿಸಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ಸುಮಾರು 50 ಲಕ್ಷ ಇ-ಖಾತಾ ನೋಂದಣಿಯಾಗಿದ್ದು, ಜನರಿಗೆ ಖಾತಾ ವಿತರಣೆಗಾಗಿ ವಿಶೇಷ ಮೇಳಗಳನ್ನೂ ಏರ್ಪಡಿಸಲಾಗಿದೆ.
ಇ-ಖಾತಾ ಉಪಯೋಗಗಳೇನು?
-
ಆಸ್ತಿ ನೋಂದಣಿ, ತೆರಿಗೆ ಪಾವತಿ, ದಾಖಲೆ ಪರಿಶೀಲನೆ—all in one system
-
ಆಸ್ತಿ ಖರೀದಿ/ಮಾರಾಟ ಪ್ರಕ್ರಿಯೆ ಸುಲಭ ಮತ್ತು ಸುರಕ್ಷಿತ
-
ಸಂಪೂರ್ಣ ಪಾರದರ್ಶಕ ಮಾಹಿತಿ, ಮೋಸಕ್ಕೆ ತಡೆಯು
-
ಡಿಜಿಟಲ್ ದಾಖಲೆಗಳು, ಅಧಿಕೃತ ಸ್ವತ್ತಿನ ಖಚಿತತೆ
ಇ-ಖಾತಾ ಎಂದರೆ ಏನು?
ಇದು A ಖಾತಾದ ಡಿಜಿಟಲ್ ಆವೃತ್ತಿ. ಇದರಲ್ಲಿ ಆಸ್ತಿಯ ನಿಖರ ಗಾತ್ರ, ಸ್ಥಳ, ಬಳಕೆಪ್ರಕಾರ ಮುಂತಾದ ಎಲ್ಲ ವಿವರಗಳೂ ಲಭ್ಯವಿರುತ್ತವೆ. ಇನ್ನು ಇ-ಖಾತಾ ಇಲ್ಲದೆ ಆಸ್ತಿ ದಾಖಲೆ ಅಥವಾ ಮಾರಾಟ ಸಾಧ್ಯವಿಲ್ಲ.
ಇ-ಖಾತಾ ಯೋಜನೆಯ ವಿಸ್ತರಣೆ ಗ್ರಾಮೀಣ ಪ್ರದೇಶದ ಜನತೆಗೆ ಆಸ್ತಿ ಸಂಬಂಧಿತ ವ್ಯವಹಾರಗಳಲ್ಲಿ ಪಾರದರ್ಶಕತೆ ಮತ್ತು ಅನುಕೂಲತೆ ಒದಗಿಸಲಿದೆ. ಹಳ್ಳಿಗಳಲ್ಲೂ ಡಿಜಿಟಲ್ ಆಸ್ತಿ ದಾಖಲೆಗಳು ಸಿಕ್ಕು ನಿರ್ವಹಣೆ ಸುಲಭವಾಗಲಿದೆ.
ಇದನ್ನು ಓದಿ:-
ಭಾರತದ ಆರ್ಥಿಕತೆಗೆ ಆಶಾದಾಯಕ ನಿರೀಕ್ಷೆ: ಮಾಸಿಕ ಪರಾಮರ್ಶೆ ವರದಿ ಹೀಗಿದೆ
