ಬೆಂಗಳೂರು, ಜುಲೈ 2: ನಾವೀನ್ಯ ವಿನ್ಯಾಸ ಮತ್ತು ಲೈಟ್ವೇಟ್ ಆಭರಣಗಳಿಗಾಗಿ ಪ್ರಸಿದ್ಧವಾದ ಕಲ್ಕತ್ತಾದ ಅಥರ್ವ್ ಜುವೆಲ್ಸ್, ಬೆಂಗಳೂರಿನ ಲಲಿತ್ ಅಶೋಕ್ ಮಾಲ್ನಲ್ಲಿ ಜುಲೈ 3 ರಿಂದ 5ರವರೆಗೆ ಆಭರಣ ಪ್ರದರ್ಶನವನ್ನು ಆಯೋಜಿಸಿದೆ.
14 ಕ್ಯಾರೇಟ್ ಚಿನ್ನದ ಆಭರಣಗಳ ತಯಾರಿಕೆಯಲ್ಲಿ ಪರಿಣತಿಯುಳ್ಳ ಈ ಸಂಸ್ಥೆ, ಮಾರುಕಟ್ಟೆ ದರಕ್ಕಿಂತಲೂ ಕಡಿಮೆ ದರದಲ್ಲಿ ಆಭರಣಗಳನ್ನು ಗ್ರಾಹಕರಿಗೆ ನೀಡುತ್ತಿರುವುದು ಇದರ ವಿಶೇಷವಾಗಿದೆ.
ಸಂಸ್ಥೆಯ ಮಾಲಕಿ ರಿತಿಕಾ ಅಗರ್ವಾಲ್ ಅವರು ಪತ್ರಿಕಾ ಪ್ರಕಟಣೆಯಲ್ಲಿ, “ನಾನು ಬೆಂಗಳೂರನ್ನು ಮತ್ತು ಕರ್ನಾಟಕವನ್ನ ಪ್ರೀತಿಸುತ್ತೇನೆ. ಇದೇ ಕಾರಣದಿಂದ ಈ ನಗರದಲ್ಲಿ ನಮ್ಮ ಸಂಸ್ಥೆಯ ಮೊದಲ ಪ್ರದರ್ಶನವನ್ನು ಆಯೋಜಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ಈ ಪ್ರದರ್ಶನದಲ್ಲಿ ದೈನಂದಿನ ಬಳಕೆಗೆ ಸೂಕ್ತವಾದ ಹಾಸ್ಯ, ಆಕರ್ಷಕ ವಿನ್ಯಾಸಗಳ ವೈವಿಧ್ಯಮಯ ಆಭರಣಗಳು ಗ್ರಾಹಕರಿಗೆ ಲಭ್ಯವಿರಲಿವೆ ಎಂದು ಆತ್ಥರ್ವ್ ಜುವೆಲ್ಸ್ ಮೂಲಗಳು ತಿಳಿಸಿವೆ.
