ನಾ.ಡಿಸೋಜಾ
~~~~~~~~~~
1. ನಾ.ಡಿಸೋಜಾ ಅವರ ಹುಟ್ಟೂರು ಯಾವುದು?
1)ಸಾಗರ. 2)ಸೊರಭ. 3)ಶಿವಮೊಗ್ಗ
2. ನಾ.ಡಿಸೋಜಾ ಅವರ ತಂದೆಯ ಹೆಸರೇನು?
1)ಪಿ.ಎಸ್ ಡಿಸೋಜಾ. 2)ಎ.ಎಸ್.ಡಿಸೋಜಾ. 3)ಎಫ್.ಪಿ.ಡಿಸೋಜಾ
3. ನಾ.ಡಿಸೋಜಾ ಅವರ ತಾಯಿಯ ಹೆಸರೇನು?
1)ರುಬಿನಾ ಡಿಸೋಜಾ. 2)ರೂಪೀನಾ ಡಿಸೋಜಾ. 3)ಮೇರಿ ಡಿಸೋಜಾ
4. ನಾ.ಡಿಸೋಜಾ ಅವರ ಜನ್ಮದಿನಾಂಕ ಯಾವುದು?
1)6 ಮೇ 1937 2)6 ಜುಲೈ 1937 3)6 ಜೂನ್ 1937
5. ನಾ.ಡಿಸೋಜಾ ಅವರ ಮೊದಲ ಕಾದಂಬರಿ ಯಾವುದು?
1)ಬಂಜೆ ಬೆಂಕಿ. 2)ಮುಳುಗಡೆ. 3)ಬಳುವಳಿ
6. ನಾ.ಡಿಸೋಜಾ ಅವರ ಕಥೆ ಆಧಾರಿತ ಸುರೇಶ್ ಹೆಬ್ಳೀಕರ್ ನಿರ್ದೇಶನದ ಚಲನಚಿತ್ರ ಯಾವುದು?
1)ದ್ವೀಪ. 2)ಕಾಡಿನ ಬೆಂಕಿ. 3)ಬೆಟ್ಟದಪುರದ ದಿಟ್ಟ ಮಕ್ಕಳು
7. ನಾ.ಡಿಸೋಜಾ ಅವರ ಕಥೆಯಾಧಾರಿತವಾದ ದ್ವೀಪ ಚಲನಚಿತ್ರದ ನಿರ್ದೇಶಕ ಯಾರು?
1)ಗಿರೀಶ್ ಕಾಸರವಳ್ಳಿ. 2)ಕೋಡ್ಲು ರಾಮಕೃಷ್ಣ. 3)ಸಿರಿಗಂಧ ಶ್ರೀನಿವಾಸಮೂರ್ತಿ
8. ಇವುಗಳಲ್ಲಿ ನಾ.ಡಿಸೋಜಾ ಅವರ ಮಕ್ಕಳ ನಾಟಕ ಯಾವುದು?
1)ಭೂತ. 2)ಬೆತ್ತಲೆ ಸೇವೆ. 3)ತಬ್ಬಲಿ
9. ಇವುಗಳಲ್ಲಿ ನಾ.ಡಿಸೋಜಾ ಅವರು ರಚಿಸಿದ ಕಿರು ಕಾದಂಬರಿ ಯಾವುದು?
1)ಆನೆ ಹುಡುಗ ಅಬ್ದುಲ್ಲ. 2)ಮಲೆನಾಡಿನ ಮದಕರಿ. 3)ಎರಡು ರಾತ್ರಿ ಒಂದು ಹಗಲು
10. ‘ಪುಟ್ಟಜ್ಜಿ ಪುಟ್ಟಜ್ಜಿ ಕಥೆ ಹೇಳು’ – ಇದು ನಾ.ಡಿಸೋಜಾ ಅವರ ಯಾವ ಪ್ರಕಾರ?
1)ಮಕ್ಕಳ ಸಾಹಿತ್ಯ. 2)ಬಾನುಲಿ ನಾಟಕ. 3)ಕಾದಂಬರಿ
11. ನಾ.ಡಿಸೋಜಾ ಅವರ ಅಧ್ಯಕ್ಷತೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನವು ಜರುಗಿದ ಸ್ಥಳ ಯಾವುದು?
1)ಮಂಗಳೂರು. 2)ಮಡಿಕೇರಿ. 3)ಶಿವಮೊಗ್ಗ
12. ನಾ.ಡಿಸೋಜಾ ಅವರು ಬರೆದ ಕಾದಂಬರಿಗಳ ಸಮಗ್ರ ಸಂಪುಟ ಯಾವುದು?
1)ಬೆಳಕಿನೊಡನೆ ಬಂತು ನೆನಪು. 2)ನಾಡಿ ಮಿಡಿತ. 3)ಹೋರಾಟ
13. ಕೇಂದ್ರ ಸರ್ಕಾರ ಅಕಾಡೆಮಿಯಿಂದ ‘ಬಾಲ ಸಾಹಿತ್ಯ ಪುರಸ್ಕಾರ’ ಪಡೆದ ನಾ.ಡಿಸೋಜಾ ಅವರ ಕೃತಿ ಯಾವುದು?
1)ಮಲೆನಾಡ ಹಾಡು-ಹಸೆ. 2)ಬೆಟ್ಟದಪುರದ ದಿಟ್ಟ ಮಕ್ಕಳು. 3)ಮುಳುಗಡೆಯ ಊರಿಗೆ ಬಂದವರು
14. ನಾ.ಡಿಸೋಜಾ ಅವರ ಹೆಸರಿನಲ್ಲಿ ‘ನಾ’ ಅಕ್ಷರದ ವಿಸ್ತರಣೆ ಏನು?
1)ನಾರ್ಬರ್ಟ್. 2)ನಾರ್ಮಲ್. 3)ನಾರ್ಬೈಟ್
15. ಆರಂಭದಲ್ಲಿ ನಾ.ಡಿಸೋಜಾ ಅವರ ಕಥೆಗಳು ಪ್ರಕಟವಾಗುತ್ತಿದ್ದ ಪತ್ರಿಕೆ ಯಾವುದು?
1)ಸಂಕ್ರಮಣ. 2)ಪ್ರಪಂಚ. 3)ವಿನೋದ
~~~~~~~~~~~~~~~~~~~~~~~~~~
★ಉತ್ತರಗಳು:-
1)ಸಾಗರ 2)ಎಫ್. ಪಿ.ಡಿಸೋಜಾ 3)ರೂಪೀನಾ ಡಿಸೋಜಾ 4) 06 ಜೂನ್ 1937 5)ಬಂಜೆ ಬೆಂಕಿ 6)ಕಾಡಿನ ಬೆಂಕಿ 7)ಗಿರೀಶ್ ಕಾಸರವಳ್ಳಿ 8)ಭೂತ 9)ಎರಡು ರಾತ್ರಿ ಒಂದು ಹಗಲು 10)ಮಕ್ಕಳ ಸಾಹಿತ್ಯ 11)ಮಡಿಕೇರಿ 12)ನಾಡಿ ಮಿಡಿತ 13)ಮುಳುಗಡೆಯ ಊರಿಗೆ ಬಂದವರು 14)ನಾರ್ಬರ್ಟ್ 15)ಪ್ರಪಂಚ
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372
