ಚನ್ನರಾಯಪಟ್ಟಣ, ಜುಲೈ 7: 21 ವರ್ಷಗಳ ಇತಿಹಾಸವಿರುವ ಚನ್ನರಾಯಪಟ್ಟಣ ಕಂಟ್ರಾಕ್ಟರ್ ಅಸೋಸಿಯೇಷನ್ ಅಂಡ್ ಕ್ಲಬ್ನ ನೂತನ ಕಾರ್ಯಕಾರಿ ಆಡಳಿತ ಮಂಡಳಿ ರಚನೆಯಾಗಿದೆ. ಈ ಚುನಾವಣೆಯಲ್ಲಿ ಕಗ್ಗೆರೆ ತೋಪೇಗೌಡ ಅವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.
ಗೌರವಾಧ್ಯಕ್ಷರಾಗಿ ಸಿ.ವೈ. ಪ್ರವೀಣ್, ಉಪಾಧ್ಯಕ್ಷರಾಗಿ ಎನ್. ರಂಗಸ್ವಾಮಿ ಮತ್ತು ಜಿ.ಎನ್. ಯೋಗೇಶ್, ಕಾರ್ಯದರ್ಶಿಯಾಗಿ ಎಸ್.ಎಲ್. ರಮೇಶ್, ಸಹ ಕಾರ್ಯದರ್ಶಿಯಾಗಿ ಪಿ.ಜೆ. ರಾಮಕೃಷ್ಣೇಗೌಡ ಹಾಗೂ ಖಜಾಂಚಿಯಾಗಿ ಸಿ.ಎನ್. ಪಾಂಡು ಆಯ್ಕೆಯಾದರು. ನಿರ್ದೇಶಕರಾಗಿ ವೆಂಕಟೇಶ್, ಶಂಕರೇಗೌಡ, ಸಿ.ಆರ್. ನಂಜಪ್ಪ, ಜಗದೀಶ್ ಗಂಗಾಧರ್, ಗಣೇಶ್ ಮತ್ತು ರಾಜು ಕೂಡ ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ನೂತನ ಅಧ್ಯಕ್ಷ ತೋಪೇಗೌಡ ಮಾತನಾಡಿ, “ಸಂಘದ ಎಲ್ಲಾ ಸದಸ್ಯರ ಸಲಹೆ ಹಾಗೂ ಸಹಕಾರದೊಂದಿಗೆ ಜನಪರ ಕಾರ್ಯಗಳನ್ನು ಕೈಗೊಂಡು ಸಾರ್ವಜನಿಕರಿಗೆ ಉಪಯುಕ್ತವಾಗುವ ಯೋಜನೆಗಳನ್ನು ಜಾರಿಗೆ ತರಲು ಪ್ರಯತ್ನಿಸುತ್ತೇನೆ” ಎಂದು ತಿಳಿಸಿದ್ದಾರೆ.
- ಮಂಜುನಾಥ್ ಐ.ಕೆ

[…] […]