ಹಾಸನ: ಸರ್ಕಾರಿ ಗೋಮಾಳದಲ್ಲಿ ಗ್ರಾಮ ಪಂಚಾಯತಿ ಅನುಮತಿ ಮೇರೆಗೆ ನಿರ್ಮಿಸಿದ್ದ ಮನೆಯನ್ನು ಯಾವುದೇ ನೋಟೀಸ್ ನೀಡದೆ ನೆಲಸಮಗೊಳಿಸಿ ಯಸಳೂರು ಅರಣ್ಯ ಅಧಿಕಾರಿ ಕೃಷ್ಣ ಕಿರುಕುಳ ನೀಡುತ್ತಿದ್ದಾರೆ ಎಂದು ತೊಂದ್ಲ್ಲ್ಲಾಪುರ ಗ್ರಾಮದ ಶೋಭರಾಜ್ ಆರೋಪಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸಕಲೇಶಪುರ ತಾಲ್ಲೂಕು, ಯಸಳೂರು ವ್ಯಾಪ್ತಿಯ ಮರಡಿಕೆರೆ ಗ್ರಾಮದಲ್ಲಿ ಸರ್ವೆ ನಂಬರ್ 361ರ ಸರ್ಕಾರಿ ಗೋಮಾಳದಲ್ಲಿ ಮನೆ ನಿರ್ಮಿಸಿಕೊಂಡು ವಾಸವಿದ್ದೇನೆ. 2021-22ನೇ ಸಾಲಿನಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ವಸತಿ ಯೋಜನೆ ಅಡಿ ಗ್ರಾಮ ಪಂಚಾಯಿತಿಯಿಂದ ಮನೆ ಮಂಜೂರಾತಿ ಪಡೆದುಕೊಂಡು ಹೊಸದಾಗಿ ಮನೆ ನಿರ್ಮಿಸಿಕೊಂಡಿದ್ದೆನು.
ಅಲ್ಲದೆ ಪಂಚಾಯಿತಿಯಿಂದ ಮನೆ ನಿರ್ಮಾಣದ ಪ್ರತಿ ಹಂತದಲ್ಲೂ ಹಣ ಬಿಡುಗಡೆ ಆಗಿದೆ, ಜಿಪಿಎಸ್ ಮೂಲಕ ದಾಖಲೆ ನೀಡಲಾಗಿದೆ ಆದರೆ ಅರಣ್ಯ ಇಲಾಖೆ ಅಧಿಕಾರಿಗಳು ಈ ಪ್ರದೇಶದಲ್ಲಿನ ಮರ ಕಡಿಯಲಾಗಿದೆ ಎಂದು ಸುಳ್ಳು ಆರೋಪದಡಿ ಜು.3ರಂದು ಆರ್ಎಫ್ಓ ಕೃಷ್ಣ ಅವರು ಏಕಾಏಕಿ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಹಾಗೂ ಜಾತಿನಿಂದನೆ ಮಾಡಿದ್ದಾರೆ ಎಂದು ದೂರಿದರು.
ಜು.4ರಂದು ಬೆಳಗ್ಗೆ ಮನೆಯಲ್ಲಿ ಯಾರು ಇಲ್ಲದ ವೇಳೆ ಇಲಾಖೆಯ ಸಿಬ್ಬಂದಿಗಳೊಂದಿಗೆ ಜೆಸಿಬಿ ಮೂಲಕ ಮನೆಯನ್ನು ನೆಲಸಮ ಗೊಳಿಸಿದ್ದಾರೆ. ಮನೆ ನಿರ್ಮಾಣಕ್ಕೆ ಲಕ್ಷಾಂತರ ರೂ ವ್ಯಯಮಾಡಿದ್ದು ವಾಸಿಸಲು ಮನೆ ಇಲ್ಲದೆ ಬೀದಿಪಾಲಾಗುವಂತಾಗಿದೆ ಎಂದು ಹೇಳಿದರು.
ಮನೆ ದ್ವಂಸಗೊಳಿಸುವ ಪ್ರಕರಣ ಸಂಬಂಧ ಜು.4ರಂದು ಯಸಳೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದು ಇಲಾಖೆಯ ಮೇಲಾಧಿಕಾರಿ ಹಾಗೂ ಸ್ಥಳೀಯ ಶಾಸಕರ ಗಮನಕ್ಕೂ ಈ ವಿಷಯವನ್ನು ತಂದಿದ್ದು ನನ್ನ ಹಾಗೂ ನನ್ನ ಕುಟುಂಬದ ಮೇಲೆ ದೌರ್ಜನ್ಯ ಎಸಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ನನಗೆ ಸೂಕ್ತ ನ್ಯಾಯ ದೊರಕದೆ ಇದ್ದಲ್ಲಿ ಸಂಘಟನೆಗಳ ನೇತೃತ್ವದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮೂಲಕ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಈ ವೇಳೆ ರಂಜನ್, ಯೋಗೀಶ್, ದಿನೇಶ್, ಶಿವಕುಮಾರ್, ಧರ್ಮ, ವೀರೇಶ್ ಇದ್ದರು.

[…] […]