ಚನ್ನರಾಯಪಟ್ಟಣ : ತಾಲ್ಲೂಕಿನ ರಾಜಾಪುರ ಗೇಟ್ ಬಳಿಯಿರುವ ಶ್ರೀ ಸದ್ಗುರು ಸಾಯಿ ಮಂದಿರ ದಲ್ಲಿ ಜು.10 ರಂದು ಗುರುವಾರ ಗುರು ಪೂರ್ಣಿಮಾ ಮಹೋತ್ಸವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ಶ್ರೀ ಸದ್ಗುರು ಸಾಯಿ ಸಿದ್ಧಾಶ್ರಮದ ಪೀಠಾಧ್ಯಕ್ಷ ಶ್ರೀ ಗುರುಮೂರ್ತಿ ಗುರೂಜಿ ಅವರು ಹೇಳಿದರು.
ಪಟ್ಟಣದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗುರು ಪೂರ್ಣಿಮಾ ಮಹೋತ್ಸವ ಪ್ರಯುಕ್ತ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 8 ಗಂಟೆಗೆ ಗಂಗಾ ಪೂಜೆ, 8.30 ಕ್ಕೆ ವ್ಯಾಸಪೂಜೆ, 9ಕ್ಕೆ ಭಿಕ್ಷಾವಂದನೆ ಮತ್ತು ಆಶೀರ್ವಚನ ಹಾಗೂ 10 ಗಂಟೆಗೆ ಕುಂಬಾಭಿಷೇಕ ನಡೆಯಲಿದೆ ಎಂದರು.
ಇದನ್ನು ಓದಿ: ಚನ್ನರಾಯಪಟ್ಟಣ-ತಾಲೂಕು ಕಂಟ್ರಾಕ್ಟರ್ ಅಸೋಸಿಯೇಷನ್ ನೂತನ ಅಧ್ಯಕ್ಷರಾಗಿ ಕಗ್ಗೆರೆ ತೋಪೇಗೌಡ ಅವಿರೋಧ ಆಯ್ಕೆ
ಮಧ್ಯಾಹ್ನ 12 ಗಂಟೆಗೆ ಆರತಿ, 12.30ಕ್ಕೆ ಪ್ರಸಾದ ವಿತರಣೆ ಮತ್ತು ಅನ್ನದಾಸೋಹ ಕಾರ್ಯಕ್ರಮ ಜರುಗಲಿದೆ. ಸಂಜೆ 6.30 ಕ್ಕೆ ಆರತಿ, 7ಕ್ಕೆ ಶ್ರೀ ಸಾಯಿ ಬಾಬಾರ ಪಾದಸ್ಪರ್ಶ ಹಾಗೂ ರಾತ್ರಿ 8 ಗಂಟೆಗೆ ಶೇಜಾ ಆರತಿ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳು ನೆರವೇರಲಿದೆ ಎಂದು ತಿಳಿಸಿದರು.
ಗುರು ಪೂರ್ಣಿಮಾ ಅಂಗವಾಗಿ 5 ಸಾವಿರ ಭಕ್ತರಿಗೆ ಅನ್ನದಾಸೋಹ ಏರ್ಪಡಿಸಲಾಗಿದ್ದು ತಾಲ್ಲೂಕಿನ ಸಮಸ್ತ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸಾಯಿ ಬಾಬಾ ಅವರ ಗುರು ಪೂರ್ಣಿಮಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಶ್ರೀ ಶಿವಾನಂದ ಗುರೂಜಿ ಇತರರು ಹಾಜರಿದ್ದರು.
– ಮಂಜುನಾಥ್ ಐ.ಕೆ
