ತುಮಕೂರು ಜಿಲ್ಲೆಯ ಬಿಜೆಪಿ ಪಕ್ಷದ ಎಸ್.ಸಿ.ಮೋರ್ಚಾಗೆ ಜಿಲ್ಲಾ ಕಾರ್ಯದರ್ಶಿಯಾಗಿ ಸಿದ್ದಗಂಗಯ್ಯನವರನ್ನು ನೇಮಕ ಮಾಡಿ ಜಿಲ್ಲಾ ಎಸ್.ಸಿ.ಮೋರ್ಚಾ ಅಧ್ಯಕ್ಷರಾದ ವೈ.ಹೆಚ್.ರವಿಚಂದ್ರರವರು ನೇಮಕ ಮಾಡಿ ಆದೇಶಿದ್ದಾರೆ.ತಾವು ಪಕ್ಷವನ್ನು ಸಂಘಟನೆ ಮಾಡಿ ಪಕ್ಷದ ವರ್ಚಸ್ಸನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ,ಪಕ್ಷದ ಕಾರ್ಯಕರ್ತರೊಂದಿಗೆ ಉತ್ತಮ ಸಂಪರ್ಕದೊಂದಿಗೆ, ಸಂಘಟನೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ನೂತನವಾಗಿ ನೇಮಕವಾದ ಸಿದ್ದಗಂಗಯ್ಯನವರನ್ನು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಬಿ.ಸುರೇಶ್ ಗೌಡ,ಕೇಂದ್ರ ಸಚಿವ ವಿ.ಸೋಮಣ್ಣ,ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಹೆಬ್ಬಾಕರವಿ,ಬಿಜೆಪಿ ಪಕ್ಷದ ಕಾರ್ಯಕರ್ತರು,ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಅಭಿನಂದಿಸಿದ್ದಾರೆ.
– ಚಂದ್ರಚೂಡ ಕೆ.ಬಿ.
