ಹಾಸನ- ನಗರದ ರೋಟರಿ ಕ್ಲಬ್ ಆಫ್ ಹಾಸನ್ ಸನ್ ರೈಸ್ ಇದರ 2025–26ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜುಲೈ 13, ಭಾನುವಾರ ಸಂಜೆ 6:30ಕ್ಕೆ ನಗರದ ನಂದಗೋಕುಲ ಕನ್ವೆಕ್ಷನ್ ಹಾಲ್ನಲ್ಲಿ ಅದ್ದೂರಿಯಾಗಿ ಜರುಗಲಿದೆ.
ಈ ಹಿನ್ನೆಲೆಯಲ್ಲಿ, ಅಧ್ಯಕ್ಷ ವಜ್ರಕುಮಾರ್ ಎಚ್.ಡಿ., ಕಾರ್ಯದರ್ಶಿ ಕೆ.ಎಸ್. ಯೋಗೇಶ್ ಹಾಗೂ ಖಜಾಂಚಿ ಗವಿಗೌಡ ವಿ.ಎಂ ಸೇರಿದಂತೆ ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕಾರಿಣಿ ಮಂಡಳಿ ಸದಸ್ಯರುಗಳು ಸಾರ್ವಜನಿಕರನ್ನು, ರೋಟರಿ ಸದಸ್ಯರನ್ನು, ಹಾಗೂ ಹಾಸನದ ನಾಗರಿಕರನ್ನು ಈ ಸಮಾರಂಭದಲ್ಲಿ ಭಾಗವಹಿಸಿ, ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಆಹ್ವಾನಿಸಿದ್ದಾರೆ.

ಈ ಸಮಾರಂಭದಲ್ಲಿ ರೋಟರಿ ಸಂಸ್ಥೆಯ ಹೊಸ ನೇತೃತ್ವ ಬದ್ಲಾವಣೆಯೊಂದಿಗೆ, ಆವೃತ್ತಿಯ ಕಾರ್ಯದೃಷ್ಠಿ, ಸೇವಾ ಯೋಜನೆಗಳು ಮತ್ತು ಸಮುದಾಯ ಹಿತಕಾಂಕ್ಷೆಗಳನ್ನು ಹಂಚಿಕೊಳ್ಳಲಾಗುವುದು. ಸಾಮಾಜಿಕ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಪ್ರಾಮುಖ್ಯತೆಯನ್ನು ಹೊಂದಿರುವ ರೋಟರಿ ಕ್ಲಬ್ನ ಈ ಕಾರ್ಯಕ್ರಮ, ನಗರದ ಸೇವಾ ಚಟುವಟಿಕೆಗಳಿಗೆ ಹೊಸ ದಿಕ್ಕು ನೀಡುವ ನಿರೀಕ್ಷೆಯಿದೆ.
