ಕೆ.ಆರ್.ಪೇಟೆ, ಜುಲೈ 10: ಕೆ.ಆರ್.ಪೇಟೆ ದುಂಡುಶೆಟ್ಟಿ ಲಕ್ಷ್ಮಮ್ಮ ಸ್ಮಾರಕ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಕ್ಕಳ ತಜ್ಞ ಡಾ|| ಶಶಿಧರ್ ಅವರನ್ನು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಈ ಹಿನ್ನೆಲೆಯಲ್ಲಿ, ಆಸ್ಪತ್ರೆಯ ಆಡಳಿತದ ಪ್ರಭಾರವನ್ನು ಇದೀಗ ಅರವಳಿಕೆ ತಜ್ಞ ಡಾ|| ಗಿರೀಶ್ ಕೆ.ಎಂ. ಅವರಿಗೆ ನೀಡಲಾಗಿದ್ದು, ಅವರು ಈಗಾಗಲೇ ಇದೇ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರ್ಕಾರದ ಪರವಾಗಿ ಈ ಕುರಿತು ಅಧಿಕೃತ ಆದೇಶವನ್ನು ಜಿಲ್ಲಾಯ ಆರೋಗ್ಯ ಇಲಾಖೆಯ ಮುಖ್ಯಾಧಿಕಾರಿ ಡಾ|| ಮೋಹನ್ ಹೊರಡಿಸಿದ್ದು, ಎಲ್ಲ ಸಂಬಂಧಪಟ್ಟವರಿಗೆ ಸಿ.ಟಿ.ಸಿ. ಸಲ್ಲಿಸಲು ಸೂಚನೆ ನೀಡಲಾಗಿದೆ.
ಇದರೊಂದಿಗೆ ತಾಲ್ಲೂಕು ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಗಳ ನಿರ್ವಹಣೆಗೆ ಹೊಸ ವ್ಯವಸ್ಥಾಪನಾ ಜವಾಬ್ದಾರಿ ಜಾರಿಗೆ ಬಂದಿದೆ.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
