ಚನ್ನರಾಯಪಟ್ಟಣ- ಗಾಂಧಿ ಸರ್ಕಲ್ ನಲ್ಲಿರುವ ರಾಯರ ರಂಗಮಂದಿರದಲ್ಲಿ ಮಂತ್ರಾಲಯ ಪೀಠಾಧಿಪತಿಗಳ ಆಶೀರ್ವಾದದಿಂದ ಶ್ರೀ ರಾಘವೇಂದ್ರ ಸ್ವಾಮಿಗಳವರಿಗೆ ಭಕ್ತರ ಸಹಕಾರದಿಂದ ಗುರುವಾರ ಗುರುಪೂರ್ಣಿಮೆ ಅಂಗವಾಗಿ ರಾಯರಿಗೆ ಬೆಳಿಗ್ಗೆ ಪಂಚಾಮೃತ ಅಭಿಷೇಕ ವಿಶೇಷವಾಗಿ ಹೂವಿನ ಅಲಂಕಾರ ಸಂಜೆ ರಾಘವೇಂದ್ರಸ್ವಾಮಿ ರವರಿಗೆ ಮಹಾಮಂಗಳಾರತಿಯನ್ನು ಸಹಸ್ರಾರು ಭಕ್ತಾದಿಗಳು ಕಣ್ಣು ತುಂಬಿಕೊಂಡರು.
ಇದೆ ಸಂದರ್ಭದಲ್ಲಿ 1008 ಬಾರಿ ಶ್ರೀ ರಾಘವೇಂದ್ರ ಸ್ವಾಮಿಗಳವರ ನಾಮಜಪ ಬರೆಯಲು ಉಚಿತ ಪುಸ್ತಕವನ್ನು ನೀಡಲಾಯಿತು ನಂತರ 4 ಬಗೆಯ ಪ್ರಸಾದ ವಿನಿಯೋಗ ಮಾಡಲಾಯಿತು.
- ಮಂಜುನಾಥ್ ಐ.ಕೆ.
