ವಿಜಯನಗರ, ಜುಲೈ 12 – ಪ್ರಸಿದ್ಧ ಮೈಲಾರಲಿಂಗೇಶ್ವರ ದೇವಾಲಯದಲ್ಲಿ ಈ ವರ್ಷ ನುಡಿದ ಕಾರ್ಣಿಕ ನುಡಿಯು ರಾಜ್ಯ ರಾಜಕೀಯದಲ್ಲಿ ಕುತೂಹಲ ಹುಟ್ಟಿಸಿದೆ. “ತುಂಬಿದ ಕೊಡ ತುಳಿತುಕಿತಲೇ ಪರಾಕ್” ಎಂಬ ಈ ವರ್ಷದ ದೈವವಾಣಿ, ಕಾಂಗ್ರೆಸ್ ಸರ್ಕಾರದಲ್ಲಿ ಅಂತರ್ಯುದ್ದದ ಸೂಚನೆ ನೀಡಿದಂತಾಗಿದೆ.
ವಿಜಯನಗರ ಜಿಲ್ಲೆಯ ಹೂವಿನಡಗಲಿ ತಾಲ್ಲೂಕಿನ ಮೈಲಾರಲಿಂಗೇಶ್ವರ ದೇವರ ಕಾರ್ಣಿಕ ನುಡಿಯನ್ನು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ವಿವರಣೆ ಮಾಡುತ್ತಾ, “ರಾಜ್ಯದಲ್ಲಿ ಕಾಂಗ್ರೆಸ್ ಶಾಸಕರ ಮನಸ್ಸುಗಳು ಕದಲಿದರೆ ಮುಖ್ಯಮಂತ್ರಿ ಬದಲಾವಣೆ ಅನಿವಾರ್ಯವಾಗಬಹುದು” ಎಂದು ಹೇಳಿದರು. ಸರ್ಕಾರ ಈ ಹೊತ್ತು ತುಂಬಿದ ಕೊಡದಂತಿದೆ – ಆಡಿಯಾಗಿರುವ, ಸ್ಥಿರವಾಗಿರುವ. ಆದರೆ ಒಂದೂ ಕೈ ತುಳಿದರೆ – ಅಂದರೆ, ಶಾಸಕರಿಂದ ಅಸಮಾಧಾನ ಅಥವಾ ಆಂತರಿಕ ಬಂಡಾಯ ಉಂಟಾದರೆ – ಇಡೀ ವ್ಯವಸ್ಥೆಗೆ ಭಾರೀ ಬದಲಾವಣೆ ಸಾಧ್ಯವಿದೆ ಎಂಬ ಅರ್ಥವನ್ನೂ ಈ ನುಡಿ ಹೊಂದಿದೆ.
ಇದನ್ನು ಓದಿ: ಫಾಸ್ಟ್ಯಾಗ್ ಸರಿಯಾಗಿ ಅಂಟಿಸದ ವಾಹನಗಳಿಗೆ ಕಠಿಣ ಕ್ರಮ- ವಾಹನಗಳ “ಕಪ್ಪುಪಟ್ಟಿಗೆ” ಸೇರಿಸುವಂತೆ ಎನ್ಎಚ್ಎಐ ಎಚ್ಚರಿಕೆ
ಕಾರ್ಣಿಕ ನುಡಿಯ ಪ್ರಕಾರ, ಡಿಸಿಎಂ ಡಿ.ಕೆ. ಶಿವಕುಮಾರ್ ಸಿಎಂ ಆಗುವ ಯೋಗವಿದೆ ಎಂಬುದನ್ನು ಈ ಭವಿಷ್ಯವಾಣಿ ಸೂಚಿಸುತ್ತಿದೆ. ಇದೇ ಹಿನ್ನೆಲೆಯಲ್ಲಿ, ಮೈಲಾರ ದೇವರ ಆಶ್ರಯದಲ್ಲಿ ನುಡಿದ ದೈವವಾಣಿ ರಾಜ್ಯ ರಾಜಕಾರಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ಈ ಭವಿಷ್ಯವಾಣಿ ಪ್ರಕಟವಾದ ನಂತರ, ಕಾಂಗ್ರೆಸ್ ಒಳಗಡೆ ರಾಜಕೀಯ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳುವ ಸಾಧ್ಯತೆಯಿದೆ. ಸಿಎಂ ಸಿದ್ಧರಾಮಯ್ಯ ಅವರ ಮುಂದಿನ ರಾಜಕೀಯ ಪಯಣ ಮತ್ತು ಡಿಸಿಎಂ ಡಿಕೆಶಿ ಅವರ ನಿರೀಕ್ಷಿತ ಮುನ್ನಡೆ ಕುರಿತು ನಿರೀಕ್ಷೆಗಳು ಹೆಚ್ಚಾಗಿವೆ.

[…] […]