ನವದೆಹಲಿ, ಜುಲೈ 18: ಭಾರತವು ಅಮೆರಿಕದಿಂದ ಆಮದಾಗುವ ವಾಹನಗಳು ಮತ್ತು ಅವುಗಳ ಬಿಡಿಭಾಗಗಳ ಮೇಲೆ ಶೇ 25ರಷ್ಟು ಪ್ರತಿ ಸುಂಕ ವಿಧಿಸುವ ನಿರ್ಧಾರ ಕೈಗೊಂಡಿರುವ ಕುರಿತು ಅಮೆರಿಕ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಅಮೆರಿಕದ ಪ್ರಕಾರ, ಈ ಸುಂಕವು ವಿಶ್ವ ವ್ಯಾಪಾರ ಸಂಘಟನೆಯ (WTO) ನಿಯಮಗಳಿಗೆ ವಿರುದ್ಧವಾಗಿದ್ದು, ಭಾರತದ ದಾವಿಗೆ ಯಾವುದೇ ಕಾನೂನು ಆಧಾರವಿಲ್ಲ.
ಭಾರತೀಯ ಪಕ್ಷದ ಪ್ರಕಾರ, ದೇಶೀಯ ಕೈಗಾರಿಕೆಗಳಿಗೆ ಹಾನಿಯಾಗುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಪ್ರತಿ ಸುಂಕ ವಿಧಿಸಲಾಗುತ್ತಿದೆ. ಆದರೆ ಅಮೆರಿಕ ಸ್ಪಷ್ಟಪಡಿಸಿದ್ದು, “ಈ ಸುಂಕವು ಡೊನಾಲ್ಡ್ ಟ್ರಂಪ್ ಆಡಳಿತದ ಸಂದರ್ಭದಲ್ಲಿಯೇ ರಾಷ್ಟ್ರೀಯ ಭದ್ರತೆಯನ್ನು ಉದ್ದೇಶಿಸಿ ಜಾರಿಗೊಳಿಸಲಾಗಿದ್ದು, ಇದು ಮುಂಜಾಗ್ರತಾ ಕ್ರಮವಲ್ಲ” ಎಂಬುದಾಗಿದೆ.
ಇದನ್ನು ಓದಿ: ಬೆಂಗಳೂರು: ರಾಜ್ಯದ ಅಂಗನವಾಡಿ ಮಕ್ಕಳಿಗೂ ‘ಅಪಾರ್ ಐಡಿ’: ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ಬರುವ ಮಹತ್ವದ ಹೆಜ್ಜೆ
ಅಮೆರಿಕವು WTOಗೆ ನೀಡಿರುವ ಲಿಖಿತ ಸ್ಪಷ್ಟನೆ ಪ್ರಕಾರ:
-
ದೇಶಕ್ಕೆ ಆಮದಾಗುವ ವಸ್ತುಗಳಿಂದ ಭದ್ರತೆಗೆ ತುತ್ತಾಗುವ ಅಪಾಯ ತಡೆಗಟ್ಟುವ ಉದ್ದೇಶದಿಂದ ಮಾತ್ರ ಸುಂಕ ಜಾರಿಯಾಗಿದೆ.
-
ಭಾರತೀಯ ಪ್ರತಿಸಂಕೆ ಆಧಾರವೇ ಇಲ್ಲದ ಕ್ರಮ.
-
ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಸುಂಕ ಕೂಡ ಮುಂಜಾಗ್ರತಾ ಕ್ರಮವಲ್ಲ.
ಭಾರತ ಕೂಡ 2019ರಲ್ಲಿ ಬಾದಾಮಿ, ಸೇಬು, ರಾಸಾಯನಿಕಗಳು ಸೇರಿದಂತೆ 28 ಅಮೆರಿಕನ್ ವಸ್ತುಗಳ ಮೇಲೆ ಪ್ರತಿ ಸುಂಕ ವಿಧಿಸಿದ್ದೆ. ಈಗ 2025ರ ಜುಲೈನಲ್ಲಿ ಮತ್ತೆ ಕೆಲ ವಾಹನ ಬಿಡಿಭಾಗಗಳ ಮೇಲೆ ಪ್ರತಿ ಸುಂಕ ವಿಧಿಸಿದ್ದು, ಅದರ ಪಟ್ಟಿ ಬಹಿರಂಗಪಡಿಸಿಲ್ಲ.
ಈ ನಡುವೆ ಭಾರತ-ಅಮೆರಿಕ ನಡುವಿನ ಐದನೇ ಸುತ್ತಿನ ವ್ಯಾಪಾರ ಮಾತುಕತೆಗಳು ಸದ್ಯ ವಾಷಿಂಗ್ಟನ್ನಲ್ಲಿ ನಡೆಯುತ್ತಿವೆ. ಸಂಬಂಧ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆಯ ನಡುವೆಯೇ ಈ ಬೆಳವಣಿಗೆಗಳು ಸಂಭವಿಸುತ್ತಿವೆ.
