ಬೆಂಗಳೂರು, ಜುಲೈ 23: ರಾಜ್ಯದ ಸಣ್ಣ ವ್ಯಾಪಾರಿಗಳಿಗೆ ಬಹುದೊಡ್ಡ ಸಿಹಿಸುದ್ದಿ! ಜಿಎಸ್ಟಿ ಬಾಕಿಗೆ ಸಂಬಂಧಿಸಿದಂತೆ ನೋಟಿಸ್ಗಳನ್ನು ಪಡೆದ ಒಂಬತ್ತು ಸಾವಿರಕ್ಕೂ ಹೆಚ್ಚು ಸಣ್ಣ ವ್ಯಾಪಾರಿಗಳಿಗೆ ರಾಜ್ಯ ಸರ್ಕಾರ ನಿರೀಕ್ಷಿತ ಉಡುಗೊರೆ ನೀಡಿದ್ದು, ಹಳೆಯ ಬಾಕಿಗಳನ್ನು ಮನ್ನಾ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಸಿಬ್ಬಂದಿಯೊಂದಿಗೆ ಬುಧವಾರ ನಡೆದ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ವಾಣಿಜ್ಯ ತೆರಿಗೆ ಇಲಾಖೆ ನೀಡಿರುವ ಜಿಎಸ್ಟಿ ನೋಟಿಸ್ಗಳ ಕುರಿತು ವ್ಯಾಪಾರಿಗಳಲ್ಲಿ ಗೊಂದಲವಿದೆ. ಅಲ್ಲಿ ಕೆಲವು ಸಾಲದ ಮೊತ್ತಗಳು, ವೈಯಕ್ತಿಕ ವಹಿವಾಟುಗಳು ಸೇರಿಕೊಂಡಿದ್ದು, ಇದರ ಬಗ್ಗೆ ವ್ಯಾಪಾರಿಗಳು ಅಹವಾಲು ನೀಡಿದ್ದಾರೆ,” ಎಂದು ಹೇಳಿದರು.
ಪರಿಹಾರ ದೊರೆಯಲಿದೆ:
ನೋಟಿಸ್ ನೀಡುವುದು ತಪ್ಪಲ್ಲವಾದರೂ, ಸರ್ಕಾರ ವ್ಯಾಪಾರಿಗಳಿಗೆ ನೆರವಾಗಲು ತೀರ್ಮಾನಿಸಿದೆ. ಮಧ್ಯವರ್ತಿಗಳಿಂದ ದೂರವಿದ್ದು, ನೇರವಾಗಿ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಬಹುದಾಗಿದೆ.
ಇದನ್ನು ಓದಿ: Watch Video: ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಯ ಕಚೇರಿಯಲ್ಲಿ ಅಂಬೇಡ್ಕರ್ ಅವಮಾನ
ಅಗತ್ಯ ವಸ್ತುಗಳಿಗೆ ವಿನಾಯಿತಿ:
ಹಾಲು, ತರಕಾರಿ, ಮಾಂಸ, ಹಣ್ಣು ಮುಂತಾದ ಅಗತ್ಯ ಆಹಾರ ವಸ್ತುಗಳಿಗೆ ಜಿಎಸ್ಟಿ ವಿನಾಯಿತಿಯಿದೆ. ಆದ್ದರಿಂದ, ಇಂತಹ ವಸ್ತುಗಳನ್ನು ಮಾರುವವರಿಗೆ ತೆರಿಗೆ ವಿಧಿಸಲಾಗುವುದಿಲ್ಲ ಎಂಬ ನಿಶ್ಚಿತತೆ ಅಧಿಕಾರಿಗಳಿಂದ ಬಂದಿದೆ.
ಯುಪಿಐ ಅಡಿ ವಹಿವಾಟು ಮತ್ತು ಭವಿಷ್ಯದ ಕ್ರಮ:
ಯುಪಿಐ ಬಳಸಿ ರೂ.40 ಲಕ್ಷಕ್ಕಿಂತ ಹೆಚ್ಚು ವಹಿವಾಟು ಮಾಡಿರುವ ವ್ಯಾಪಾರಿಗಳಿಗೆ ಮಾತ್ರ ನೋಟಿಸ್ ನೀಡಲಾಗಿದೆ. ಈ ಹಿಂದೆ ಜಿಎಸ್ಟಿ ನೋಂದಣಿಗೆ ಪ್ರೇರಣೆಯಾಗಿ ನೋಟಿಸ್ ನೀಡಲಾಗಿತ್ತು. ಈಗಿನಿಂದ ಎಲ್ಲಾ ವ್ಯಾಪಾರ ವಹಿವಾಟುಗಳನ್ನು ಕಾನೂನುಬದ್ಧವಾಗಿ ನಡೆಸಬೇಕು ಎಂದು ಸರ್ಕಾರ ಸೂಚನೆ ನೀಡಿದೆ.

[…] ಇದನ್ನು ಓದಿ: ಸಣ್ಣ ವ್ಯಾಪಾರಿಗಳಿಗೆ ಸಿಹಿ ಸುದ್ದಿ: 9000 ಸಣ್… […]