ಚಾಮರಾಜನಗರ:- ಪ್ರಸ್ತುತ ದಿನಗಳಲ್ಲಿ ಮಕ್ಕಳು ತಂದೆ ತಾಯಿಯನ್ನ ದೂರ ಮಾಡುತ್ತಿರುವುದು ಬಹಳ ಬೇಸರದ ಸಂಗತಿಯಾಗಿದೆ, ಆದರೆ ಇದು ಆಗಬಾರದು. ಮಕ್ಕಳಿಂದ ದೂರಾದ ವೃದ್ಧರಿಗೆ ಆಶ್ರಯಕ್ಕಾಗಿಯೇ ವೃದ್ಧಾಶ್ರಮಗಳಿದ್ದು ಅಂತಹವರಿಗೆ ಹೊಸ ಬದುಕನ್ನೇ ಕಟ್ಟಿಕೊಡುತ್ತವೆ ಎಂದು ಮಡಿವಾಳ ಶಿವಲಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರಾದ ದೇವರಾಜು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಉತ್ತುವಳ್ಳಿಯಲ್ಲಿರುವ ವೃದ್ಧ ಮತ್ತು ಅನಾಥಶ್ರಮದಲ್ಲಿ ಇಂದು ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಆಯೋಜಿಸಲಾಗಿದ್ದ ಲಿಂಗೈಕ್ಯಪೂಜ್ಯ ಶ್ರೀ ಬಸವಣ್ಣಸ್ವಾಮಿಗಳವರ ಸ್ಮರಣೋತ್ಸವ ಹಾಗೂ ಆಶ್ರಮದ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಸ್ಮಾನ್ಮಾನಿತರಾಗಿ ಆಗಮಿಸಿ ಮಾತನಾಡಿದರು.
ತಂದೆ ತಾಯಿಗಳು ಮಕ್ಕಳನ್ನ ಅತ್ಯಂತ ಪ್ರೀತಿಯಿಂದ ಪಾಲನೆ ಪೋಷಣೆ ಮಾಡುತ್ತಾರೆ, ಆದರೆ ವಯಸ್ಸಿಗೆ ಬಂದ ಮಕ್ಕಳು ವಯಸ್ಸಾದ ತಂದೆತಾಯಿಯನ್ನ ದೂರಮಾಡುವುದು ಎಷ್ಟುಸರಿ. ಆದರೆ ವೃದ್ದಾಶ್ರಮಗಳು ವೃದ್ದರನ್ನ ಪೋಷಿಸುವುದು, ಅವರಿಗೆ ಯಾವುದೆ ಕೊರತೆ ಕಾಡದಂತೆ ನೋಡಿಕೊಳ್ಳುವುದು ಬಹಳ ಸಂತೋಷವಾಗುತ್ತದೆ ಎಂದರು.

ಕುಂತೂರು ವೀರಸಿಂಹಾಸನ ಮಠದ ಶಿವಪ್ರಭುಸ್ವಾಮಿಗಳು ಮಾತನಾಡಿ, ಅನಾಥೋ ದೈವ ರಕ್ಷಕ ಎಂಬಂತೆ ಈ ಆಶ್ರಮವನ್ನ ಹಲವಾರು ವರ್ಷಗಳಿಂದ ಹಲವಾರು ಜನರ ಉತ್ತಮ ಜೀವನದೊಂದಿಗೆ ಬಹಳ ಯಶಸ್ವಿಯಾಗಿ ನಡೆಸಿಕೊಂಡು ಬಂದಿರುವುದು ಬಹಳ ದೊಡ್ಡ ಕೆಲಸವಾಗಿದೆ ಎಂದರು.
ಈ ಆಶ್ರಮದಲ್ಲಿ ಇರುವಂತಹವರಿಗೆ ವಚನಗಳು ಹಾಗೂ ಭಕ್ತಿ ಗೀತೆಗಳು ಸೇರಿದಂತೆ ಹಲವಾರು ಸನ್ಮಾರ್ಗಗಳನ್ನ ಬೋಧಿಸುತ್ತಾ, ಪುಣ್ಯದ ಸತ್ಕಾರಗಳನ್ನ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ತಿಳಿಸಿದರು.
ಇದೇ ಸಂದರ್ಬದಲ್ಲಿ ಮಡಿವಾಳದ ಶಿವಾಲಂಕಾರೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ದೇವರಾಜು, ಹಾಸ್ಯ ಕಲಾವಿದ ಉಮ್ಮತ್ತೂರು ಬಸವರಾಜು, ಕಳಲೆ ಬಾಸ್ಕರ ಹಾಗೂ ಸಮಾಜ ಸೇವಕಿ ಶೋಭರವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಆಶ್ರಯ ಸೇವಾ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎಂ.ರಮೇಶ್ ಪ್ರಭು, ಉಪಾಧ್ಯಕ್ಷ ಗುರುಸ್ವಾಮಿ, ಸದಸ್ಯರಾದ ಮಹಾದೇವಪ್ಪ, ಗಾಯಕರಾದ ಸುರೇಶ್ ನಾಗ್, ಎಂ.ಶಿವಣ್ಣ ಸುರೇಶ್ ಗೌಡ ಜಾದುಗಾರ ಜಗ್ಗು ಸೇರಿದಂತೆ ಇತರರಿದ್ದರು.
-ಶ್ರೀ ಸಾಯಿ ಎಸ್ ಮಂಜು
