1.ಕನ್ನಡದ ಮೊದಲ ಸಂಪಾದಕಿ, ಪ್ರಕಾಶಕಿ, ಮುದ್ರಕಿ ಎಂದು ಹೆಸರಾದವರು
1)ಜಯದೇವಿತಾಯಿ ಲಿಗಾಡೆ. 2)ಜಯಶ್ರೀ ದೇವಿ. 3)ತಿರುಮಲಾಂಬ
2.ತಿರುಮಲಾಂಬ ಅವರು ಹುಟ್ಟಿದ ಊರು
1) ನಂಜನಗೂಡು. 2)ಅರಕಲಗೂಡು. 3)ಮತ್ತಿಗೋಡು
3.ತಿರುಮಲಾಂಬ ಅವರ ಜನ್ಮ ದಿನಾಂಕ
1)ಮಾರ್ಚ್-13, 1887 2)ಮಾರ್ಚ್-25, 1887 3)ಮಾರ್ಚ್-19, 1887
4.ತಿರುಮಲಾಂಬ ಅವರ ತಂದೆಯ ಹೆಸರು
1)ವೆಂಕಟಕೃಷ್ಣ ಅಯ್ಯಂಗಾರ್. 2)ಶ್ರೀನಿವಾಸ ಅಯ್ಯಂಗಾರ್. 3)ರಾಮಸ್ವಾಮಿ ಅಯ್ಯಂಗಾರ್
5.ತಿರುಮಲಾಂಬ ಅವರ ತಾಯಿಯ ಹೆಸರು
1)ನಿಂಗರಾಜಮ್ಮ. 2)ಅಲಮೇಲಮ್ಮ. 3)ಪುಟ್ಟಲಕ್ಷ್ಮಮ್ಮ
6.ತಿರುಮಲಾಂಬ ಅವರ ಊರ ಭಾಷೆ ಕನ್ನಡವಾದರೆ ಮನೆಯ ಭಾಷೆ
1) ತೆಲುಗು. 2)ಮಲಯಾಳಂ. 3)ತಮಿಳು
7.ತಿರುಮಲಾಂಬ ಅವರು ಬಾಲ್ಯವಿವಾಹ ಆದಾಗ ಅವರ ವಯಸ್ಸು
1) ಹತ್ತು. 2)ಎಂಟು. 3)ಹದಿಮೂರು
8.ಮಕ್ಕಳಿಗೆ ಪಾಠ ಹೇಳಿಕೊಡಲು ಆರಂಭಿಸಿದ ತಿರುಮಲಾಂಬ ಅವರ ಶಾಲೆಯ ಹೆಸರು
1)ವಿದ್ಯಾ ಮಂದಿರ. 2)ಮಾತೃ ಮಂದಿರ. 3)ಶಾರದಾ ಮಂದಿರ
9.ತಿರುಮಲಾಂಬ ಅವರು ವಿದ್ಯಾರ್ಥಿಗಳಿಗಾಗಿ ಆರಂಭಿಸಿದ ಪತ್ರಿಕೆ
1)ಸನ್ಮಾರ್ಗ ದರ್ಶಿನಿ. 2)ಸನ್ಮಾರ್ಗ. 3)ಪ್ರತಿಭಾ ದರ್ಶಿನಿ
10.ತಿರುಮಲಾಂಬ ಅವರ ‘ವಿಧವಾ ಕರ್ತವ್ಯ’ ಕತೆಯು ಪ್ರಕಟಗೊಂಡ ಪತ್ರಿಕೆ
1) ಜನವಾಣಿ. 2) ಅಮರ ವಾಣಿ. 3)ಮಧುರ ವಾಣಿ
11.ತಿರುಮಲಾಂಬ ಅವರು ಪ್ರಾರಂಭಿಸಿದ ಗ್ರಂಥಮಾಲೆ
1)ಸತಿ ಹಿತೈಷಿಣಿ. 2)ಸತಿ ಶಿರೋಮಣಿ. 3)ಸತಿ ವಿಶ್ವಾಸಿನಿ
12.ನಾಲ್ಕು ಆವೃತ್ತಿಗಳಲ್ಲಿ ಏಳು ಸಾವಿರ ಪ್ರತಿಗಳು ಮಾರಾಟವಾದ ತಿರುಮಲಾಂಬ ಅವರ ಕಾದಂಬರಿ
1)ಸುಗುಣಶೀಲೆ. 2)ಗುಣಶೀಲೆ. 3)ಸುಶೀಲೆ
13.ತಿರುಮಲಾಂಬ ಅವರು ಬರೆದ ಕೊನೆಯ ಕಾದಂಬರಿ
1)ವಿದ್ಯುಲ್ಲತಾ 2)ಮಣಿಮಾಲ. 3)ನಭಾ
14.’ಶಾಶ್ವತಿ’ ಸಂಸ್ಥೆಯ ಮೂಲಕ ‘ಶ್ರೀಮತಿ ನಂಜನಗೂಡು ತಿರುಮಲಾಂಬ ಪ್ರಶಸ್ತಿ’ ಸ್ಥಾಪಿಸಲು ಕಾರಣರಾದವರು
1)ಸ್ವತಃ ತಿರುಮಲಾಂಬ. 2)ಚಿ.ನ.ಮಂಗಳ. 3)ಸರ್ವಮಂಗಳ
15.ತಿರುಮಲಾಂಬ ಅವರು ವಿಧಿವಶರಾದ ದಿನಾಂಕ
1)ಅಕ್ಟೋಬರ್-31, 1982 2)ಸೆಪ್ಟೆಂಬರ್-31, 1982 3)ಆಗಸ್ಟ್-31, 1982
~~~~~~~~~~~~~~~~~~~~~~~~~~
★ಸರಿಯುತ್ತರಗಳು:-
1) ತಿರುಮಲಾಂಬ 2)ನಂಜನಗೂಡು 3)ಮಾರ್ಚ್-25, 1887 4)ವೆಂಕಟಕೃಷ್ಣ ಅಯ್ಯಂಗಾರ್ 5)ಅಲಮೇಲಮ್ಮ 6)ತಮಿಳು 7) ಹತ್ತು 8)ಮಾತೃ ಮಂದಿರ 9)ಸನ್ಮಾರ್ಗ ದರ್ಶಿನಿ 10)ಮಧುರ ವಾಣಿ 11)ಸತಿ ಹಿತೈಷಿಣಿ 12)ಸುಶೀಲೆ 13)ಮಣಿಮಾಲ 14)ಚಿ.ನ.ಮಂಗಳ 15)ಆಗಸ್ಟ್-31, 1982
*********
-ಸಂ:-ಹೊ.ರಾ.ಪರಮೇಶ್ ಹೊಡೇನೂರು
ಅರಕಲಗೂಡು ತಾ.ಹಾಸನ ಜಿಲ್ಲೆ
7022765372

[…] ತಿರುಮಲಾಂಬ – ಕವಿ ಪರಿಚಯ ಮಾಲಿಕೆ […]