ಚನ್ನರಾಯಪಟ್ಟಣ, ಜುಲೈ 30: ಕರ್ನಾಟಕ ರಾಜ್ಯ ರೈತರ ಸಂಘ ಹಾಗೂ ಹಸಿರು ಸೇನೆಯ 45ನೇ ರೈತ ಹುತಾತ್ಮರ ದಿನಾಚರಣೆಯ ಅಂಗವಾಗಿ, ಚನ್ನರಾಯಪಟ್ಟಣದ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ತಾಲೂಕು ಘಟಕದ ಸಮಾಜ ಸೇವೆಗಳಿಗೆ ರಾಜ್ಯ ಮಟ್ಟದಲ್ಲಿ ಗೌರವ ದೊರೆತಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ಸಭಾ ವೇದಿಕೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡರ ಅಧ್ಯಕ್ಷತೆಯಲ್ಲಿ ಚನ್ನರಾಯಪಟ್ಟಣದ ರೆಡ್ ಕ್ರಾಸ್ ಸಂಸ್ಥೆಯ ನಿಷ್ಠಾವಂತ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ಶ್ರೀ ಭರತ್ ಕುಮಾರ್ ಎಚ್.ಜಿ, ಕಾರ್ಯದರ್ಶಿ ಜಬಿಉಲ್ಲಾ ಬೇಗ್ ಹಾಗೂ ನಿರ್ದೇಶಕ ಉದಯ ಶಂಕರ್ ಅವರು ಪ್ರಶಸ್ತಿ ಹಾಗೂ ಅಭಿನಂದನೆ ಸ್ವೀಕರಿಸಿದರು. ರೈತರ ಸಂಘದ ನಿರ್ವಹಣೆಯು ಈ ಸಂಸ್ಥೆಯ ವಿವಿಧ ಹತಾತ್ಮ ಕಾರ್ಯಗಳನ್ನೂ ಹಿಗ್ಗಿಸಿ ಹೊಗಳಿದ್ದು, ಸಮಾಜಮುಖಿ ಸೇವೆಗಳಿಗೆ ಈ ಗೌರವ ಪ್ರೇರಣೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತವಾಯಿತು.
- ಮಂಜುನಾಥ್ ಐ ಕೆ
