ಹಾಸನ: ಅರಸೀಕೆರೆಯ ಹಿರಿಯ ಪತ್ರಕರ್ತರು ಹಾಗೂ ತಾಲ್ಲೂಕು ಸಂಘದ ಅಧ್ಯಕ್ಷರಾಗಿದ್ದ ಶಾಂತಕುಮಾರ್ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶ್ರದ್ದಾಂಜಲಿ ಸಲ್ಲಿಸಲಾಯಿತು.
ಈ ವೇಳೆ ಒಂದು ನಿಮಿಷ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು. ನಂತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್ ವೇಣು ಕುಮಾರ್ ಮಾತನಾಡಿ ಶಾಂತಕುಮಾರ್ ಅವರ ನಿಧನ ಜಿಲ್ಲಾ ಪತ್ರಿಕಾರಂಗಕ್ಕೆ ತುಂಬಲಾರದ ನಷ್ಟ. ಅವರು ತಮ್ಮ ಕೆಲಸದಲ್ಲಿ ಎಂದು ರಾಜಿಯಾಗದೆ ಪ್ರಾಮಾಣಿಕ ವೃತ್ತಿ ಜೀವನ ನಡೆಸಿದರು. ಶಾಂತಕುಮಾರ್ ಅವರು ಆರೋಗ್ಯದ ಕಡೆ ಹೆಚ್ಚು ಗಮನ ನೀಡಲಿಲ್ಲ, ಒತ್ತಡದ ನಮ್ಮ ವೃತ್ತಿ ಜೀವನದಲ್ಲಿ ಎಲ್ಲರೂ ಆರೋಗ್ಯದ ಕಡೆ ಹೆಚ್ಚು ಗಮನ ಹರಿಸಬೇಕು ಎಂದರು.
ಸಂಘದ ಮಾಜಿ ಅಧ್ಯಕ್ಷ ಕೆ.ಆರ್ ಮಂಜುನಾಥ್ ಅವರು ಮಾತನಾಡಿ ಮೂರು ದಶಕಗಳಿಂದ ಶಾಂತಕುಮಾರ್ ಅವರು ಪತ್ರಿಕಾರಂ ಗದಲ್ಲಿ ಸೇವೆ ಸಲ್ಲಿಸಿದ್ದಾರೆ. ಶ್ರಮಜೀವಿ ಹಾಗೂ ವೃತ್ತಿ ಬದ್ಧತೆಯೊಂದಿಗೆ ಎಲ್ಲರೊಂದಿಗೂ ಉತ್ತಮ ಒಡನಾಟ ಹೊಂದಿದ್ದರು ಎಂದರು.
ಸಂಘದ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್ , ಉಪಾಧ್ಯಕ್ಷರಾದ ಎಚ್.ಟಿ ಮೋಹನ್ ಕುಮಾರ್ , ಕೆ.ಎಂ. ಹರೀಶ್ , ಪ್ರಧಾನ ಕಾರ್ಯ ದರ್ಶಿ ಬಿ.ಸಿ ಶಶಿಧರ್ , ಕಾರ್ಯದರ್ಶಿ ಪಿ.ಎ ಶ್ರೀನಿವಾಸ್, ಸಿ. ಬಿ ಸಂತೋಷ್, ಕಾರ್ಯಕಾರಿ ಸಮಿತಿ ಸದಸ್ಯರು ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.
ಹಾಸನ: ಸೌಹಾರ್ದ ಸಹಕಾರಿ ಕಾಯ್ದೆಯ ರಜತ ಮಹೋತ್ಸವ – ಸಂಘಟಿತ ಕಾರ್ಯಕ್ರಮಗಳಿಗೆ ಸಜ್ಜು
