ಕೆ.ಆರ್.ಪೇಟೆ – ತಾಲ್ಲೂಕಿನ ಕಿಕ್ಕೇರಿ ಹೋಬಳಿ ಐಕನಹಳ್ಳಿ ಗ್ರಾಮ ಪಂಚಾಯಿತಿಯ ಹಿಂದಿನ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷರ ಸ್ಥಾನ ಬಯಸಿ ಯಲಾದಹಳ್ಳಿ ಸುಮಿತ್ರ ಶಂಭುಲಿಂಗಯ್ಯ ರವರು ಹೊರತುಪಡಿಸಿ ಉಳಿದ ಯಾವ ಸದಸ್ಯರಿಂದಲೂ ನಾಮಪತ್ರ ಸಲ್ಲಿಕೆಯಾಗದ ಹಿನ್ನೆಲೆ ಅವಿರೋಧವಾಗಿ ಸುಮಿತ್ರ ಶಂಭುಲಿಂಗಯ್ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ತಾಲೂಕು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಸಂತೋಷ್ ಕುಮಾರ್ ಘೋಷಣೆ ಮಾಡಿದರು.
ನೂತನ ಅಧ್ಯಕ್ಷರನ್ನ ಅಭಿನಂದಿಸಿ ಮಾತನಾಡಿದ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕರಾದ ಚೋಳೆನಹಳ್ಳಿ ಪುಟ್ಟಸ್ವಾಮಿಗೌಡ ಐಕನಹಳ್ಳಿ ಗ್ರಾ.ಪಂ ಇಂದಿನಿಂದಲೂ ಒಂದು ವಿಶೇಷ ಸ್ಥಾನಮಾನವಿದೆ ಪ್ರತಿಯೊಬ್ಬ ಕಟ್ಟ ಕಡೆಯ ವ್ಯಕ್ತಿಯನ್ನು ಗುರುತಿಸಿ ಸ್ಥಾನಮಾನ ಗೌರವ ಸಿಗಬೇಕು ಎಂಬ ದೂರ ದೃಷ್ಟಿ ಇರುವ ಏಕೈಕ ಪಕ್ಷ ಜೆಡಿಎಸ್ ಪಕ್ಷ.ನೂತನ ಅಧ್ಯಕ್ಷೆ ಸುಮಿತ್ರ ಶಂಭುಲಿಂಗಯ್ಯ ಅವರು ಪ್ರತಿಯೊಬ್ಬ ಗ್ರಾ.ಪಂ ಸದಸ್ಯರನ್ನು ಮತ್ತು ವ್ಯಾಪ್ತಿಯ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾ.ಪಂ ಒಳಪಟ್ಟಿರುವ ಗ್ರಾಮಗಳಿಗೆ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ರಸ್ತೆ ಸ್ವಚ್ಛತಾ ಕ್ರಮಗಳು, ಬೀದಿ ದೀಪಗಳ ನಿರ್ವಹಣೆಗೆ ಹೆಚ್ಚು ಹೊತ್ತು ನೀಡಬೇಕು ಎಂದು ಸಲಹೆ ನೀಡಿದರು.
ಎ.ಪಿ.ಎಂ.ಸಿ. ಮಾಜಿ ಅಧ್ಯಕ್ಷರಾದ ಐನೋರಹಳ್ಳಿ ಮಲ್ಲೇಶ್ ಮಾತನಾಡಿ ನಮ್ಮ ನಾಯಕರಾದ ಶಾಸಕಎಚ್.ಟಿ. ಮಂಜು ರವರ ನೇತೃತ್ವದಲ್ಲಿ ಹಾಗೂ ರಾಜ್ಯ ಸಹಕಾರ ಮಹಾಮಂಡಳಿ ನಿರ್ದೇಶಕ ಪುಟ್ಟಸಾಮಿಗೌಡ, ಮಂಡ್ಯ ಜಿಲ್ಲಾ ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಬಿ.ಎಂ. ಕಿರಣ್,ಮಾರ್ಗದರ್ಶನದಲ್ಲಿ ತೆರವಾಗಿದ್ದ ಅಧ್ಯಕ್ಷರ ಸ್ಥಾನಕ್ಕೆ ಪರಿಶಿಷ್ಟ ಜಾತಿ ಸಮುದಾಯದ ಸುಮಿತ್ರ ಶಿವಲಿಂಗಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ವಿಶೇಷವೇನೆಂದರೆ ಅಧ್ಯಕ್ಷರ ಸ್ಥಾನ ಸಾಮಾನ್ಯ ಮಹಿಳೆ ಕ್ಷೇತ್ರವಾದರೂ ಜಾತಿ ಭೇದ ಲೆಕ್ಕಿಸದೆ ಜೆಡಿಎಸ್ ಪಕ್ಷ ಸಮಾನತೆ ತೋರುವ ಪಕ್ಷ ಎಂಬುವ ನಿಟ್ಟಿನಲ್ಲಿ ನೂತನ ಅಧ್ಯಕ್ಷರು ಆಯ್ಕೆಯಾಗಿರುವುದೆ ಸಾಕ್ಷಿಯಾಗಿದೆ.ಇದನ್ನು ಮನಗೊಂಡು ನೂತನ ಅಧ್ಯಕ್ಷರು ಸಿಕ್ಕಿರುವ ಗೌರವಾನ್ವಿತ ಅವಕಾಶವನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಪಂಚಾಯಿತಿ ವ್ಯಾಪ್ತಿಗೆ ಬರುವ ಗ್ರಾಮಗಳನ್ನ ಅಭಿವೃದ್ಧಿಪಡಿಸುವ ಮುಖಾಂತರ ಪಕ್ಷದ ವರಿಷ್ಠರಿಗೆ ಹಾಗೂ ನಿಮ್ಮ ಗೆಲುವಿಗೆ ಸಹಕಾರ ನೀಡಿದ ಜೆಡಿಎಸ್ ಮುಖಂಡರಿಗೆ ಸದಸ್ಯರುಗಳಿಗೆ ಋಣ ತೀರಿಸಬೇಕು ಎಂದರು.

ಬಳಿಕ ಮಾತನಾಡಿದ ನೂತನ ಅಧ್ಯಕ್ಷತೆ ಸುಮಿತ್ರ ಶಂಭುಲಿಂಗಯ್ಯ ತಮ್ಮ ಆಡಳಿತ ಅವಧಿಯಲ್ಲಿ ಅಭಿವೃದ್ಧಿಪಡಿಸುವ ಭರವಸೆ ನೀಡಿದರು.ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆಯೇ ಬೆಂಬಲಿಸಿದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ವಿತರಿಸಿ ವಿಜಯೋತ್ಸವ ಆಚರಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಐಕನಹಳ್ಳಿ ತಾ.ಪಂ ಮಾಜಿ ಅಧ್ಯಕ್ಷ ರಾಮೇಗೌಡ,ಹೇಮಾವತಿ ಸಕ್ಕರೆ ಕಾರ್ಖಾನೆ ಮಾಜಿ ಅಧ್ಯಕ್ಷರು ಆನೆಗೋಳ ಮಂಜುನಾಥ್,ತಾ.ಪಂ ಮಾಜಿ ಸದಸ್ಯ ಐಕನಹಳ್ಳಿ ಶಾರದ ಕೃಷ್ಣೆಗೌಡ,ಐಕನಹಳ್ಳಿ ಉದಯ್ ಕುಮಾರ್, ಕಿಕ್ಕೇರಿ ಹೋಬಳಿ ಜೆಡಿಎಸ್ ಅಧ್ಯಕ್ಷ ಕಾಯಿ ಮಂಜೇಗೌಡ, ಕಿಕ್ಕೇರಿ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶೇಖರ್, ಕಿಕ್ಕೇರಿ ಹೋಬಳಿ ಜೆಡಿಎಸ್ ಉಪಾಧ್ಯಕ್ಷ ಮಿಲ್ ಚಂದ್ರು, ಗ್ರಾಮದ ಹಿರಿಯ ಮುಖಂಡ ಚಂದ್ರಣ್ಣ,ಗ್ರಾಮಪಂಚಾಯಿತಿ ಉಪಾಧ್ಯಕ್ಷ ಸಾಸಲು ಈರಾಜು,ಗ್ರಾ.ಪಂ ಸದಸ್ಯರಾದ ಅಂಭುಜಾ, ನಂಜುಂಡೇಗೌಡ, ಸುವರ್ಣ, ಕುಮಾರ್ ಎನ್, ದೇವರಾಜು, ನಾಗಮಣಿ, ಪ್ರಸನ್ನ, ಪಲ್ಲವಿ, ಭಾಗ್ಯಮ್ಮ, ಮಂಜೇಗೌಡ, ಶಂಕರ, ಸುಧಾ, ಕೆ.ಎಸ್. ಕವಿತಾ, ಕಲಾವದಿ ಮಹಾಸಭಾ ತಾಲೂಕು ಅಧ್ಯಕ್ಷ ಹೂಚನಹಳ್ಳಿ ನಟರಾಜು, ದಲಿತ ಮುಖಂಡ ಚೌಡೇನಹಳ್ಳಿ ದೇವರಾಜ ಮುಖಂಡರಾದ ಕೃಷ್ಣಾಪುರ ಗಿರೀಶ,ರುದ್ರೇಶ್, ಸೇರಿದಂತೆ ಉಪಸ್ಥಿತರಿದ್ದರು.
ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
