ಹಾಸನ, ಜೂನ್ 27: ಡಾ. ವೈ.ಎಸ್. ವೀರಭದ್ರಪ್ಪ ಅವರ ಕೃತಿ ಬಿಡುಗಡೆ ಹಾಗೂ ಅಭಿನಂದನಾ ಗ್ರಂಥ ಬಿಡುಗಡೆ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಶನಿವಾರ ಸಂಜೆ ಹಾಸನದ ಕನ್ನಡ ಸಾಹಿತ್ಯ ಭವನದ ಆವರಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಬಿ.ಪಿ. ಐಸಾಮಿಗೌಡ ವಹಿಸಿದ್ದರು.
ಸಭೆಯಲ್ಲಿ ಕಾರ್ಯಕ್ರಮದ ಯಶಸ್ವಿ ಆಯೋಜನೆಗೆ ಅಗತ್ಯ ಸಿದ್ಧತೆಗಳು, ವಿವಿಧ ಜವಾಬ್ದಾರಿಗಳ ಹಂಚಿಕೆ ಹಾಗೂ ಆಹ್ವಾನ ಪತ್ರಿಕೆ ವಿತರಣೆಗಾಗಿ ಸಮಿತಿ ರಚಿಸುವ ಕುರಿತು ಚರ್ಚಿಸಿ ತೀರ್ಮಾನಿಸಲಾಯಿತು. ಕಾರ್ಯಕ್ರಮದ ವೇದಿಕೆಯಲ್ಲಿ ಎಲ್ಇಡಿ ಪರದೆ ಅಳವಡಿಕೆ ಸೇರಿದಂತೆ ಅಗತ್ಯ ವೇದಿಕೆ ವ್ಯವಸ್ಥೆಗಳನ್ನು ಕಲ್ಪಿಸುವ ಕುರಿತು ಸಹ ನಿರ್ಧಾರ ಕೈಗೊಳ್ಳಲಾಯಿತು.

ಸಭೆಯಲ್ಲಿ ಸಮಿತಿ ಸದಸ್ಯರಾದ ಬಿ.ಕೆ. ಮಂಜುನಾಥ್, ಹೆಚ್.ಎಲ್. ಮಲ್ಲೇಶಗೌಡ, ಆರ್.ಪಿ. ವೆಂಕಟೇಶ್ ಮೂರ್ತಿ, ಕಟ್ಟಾಯ ಶಿವಕುಮಾರ್, ಜಯಲಕ್ಷ್ಮಿ ರಾಜಣ್ಣಗೌಡ, ಡಾ. ನಾಯಕರಹಳ್ಳಿ ಮಂಜೇಗೌಡ, ದರ್ಪಣ ಗೋಪಾಲ್, ಮಹಂತೇಶ್, ನವಿಲೆ ಪರಮೇಶ್, ರಾಜಶೇಖರ್ ಮೂರ್ತಿ (ಪಾಪು), ಅಡಗೂರು ಬಸವರಾಜು, ಮೋಹನ್ ರಾಜು, ಕುಮಾರ್, ರಮೇಶ್ ಡಿ.ಎನ್., ಸವಿತಾ ಶಿವಕುಮಾರ್, ಗಂಧನ ತೇಜಸ್, ವೈ.ಎಸ್. ಸರಸ್ವತಿ, ವನಜಾಕ್ಷಿ, ವೇದಶ್ರೀರಾಜ್, ಬಿ.ವಿ. ಶೋಭ ಮಹೇಶ್, ಪವಿತ್ರ ಹಾಗೂ ಮಾನಸ ಸೇರಿದಂತೆ ಹಲವರು ಉಪಸ್ಥಿತರಿದ್ದರು.
– ಶಿವಕುಮಾರ್ ಕಟ್ಟಾಯ
