ಕೇರಳದ ಎರ್ನಾಕುಲಂನಲ್ಲಿ 23 ವರ್ಷದ ಸೋನಾ ಎಲ್ದೋಸ್ ಎಂಬ ಕ್ರಿಶ್ಚಿಯನ್ ಸಮುದಾಯದ ಯುವತಿ, ಪ್ರೀತಿಸಿದ ಮುಸ್ಲಿಂ ಯುವಕ ರಮೀಜ್ ಮೊಹಮ್ಮದ್ ಮತ್ತು ಆತನ ಕುಟುಂಬದಿಂದ ಮದುವೆಗೆ ಮೊದಲು ಧಾರ್ಮಿಕ ಮತಾಂತರಕ್ಕೆ ಒತ್ತಾಯಕ್ಕೆ ಒಳಗಾಗಿ ಸಾವಿಗೆ ಶರಣಾಗಿದ್ದಾಳೆ. ಟಿಟಿಸಿ ಟೀಚರ್ ಟ್ರೈನಿಂಗ್ ಪಡೆಯುತ್ತಿದ್ದ ಸೋನಾ, ಪ್ರಿಯಕರನ ಭರವಸೆಯ ಮೇಲೆ ಮನೆ ಬಿಟ್ಟು ಆತನೊಂದಿಗೆ ವಾಸಿಸುತ್ತಿದ್ದರು. ಆದರೆ ನಂತರ ರಮೀಜ್ ಮತ್ತು ಕುಟುಂಬದವರು ಮತಾಂತರಕ್ಕೆ ಬಲವಂತ ಮಾಡಿದ್ದು, ಇದರಿಂದ ಖಿನ್ನತೆಗೆ ಒಳಗಾದ ಆಕೆ ಆಗಸ್ಟ್ 9 ರಂದು ಕರುಕಡಂನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಪ್ರಕರಣದಲ್ಲಿ ರಮೀಜ್ ಮೊಹಮ್ಮದ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
