ಟಿ.ನರಸೀಪುರ : ಭಗವಾನ್ ಗೌತಮ ಬುದ್ಧರು ತೋರಿಸಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ಮುನ್ನಡೆಯಬೇಕು ಹಾಗೂ ಮಾನವತಾವಾದಿ ಡಾ. ಬಿಆರ್ ಅಂಬೇಡ್ಕರ್ ಅವರ ತತ್ವ ಸಿದ್ಧಾಂತ ಆದರ್ಶ ಅವರ ನಿಸ್ವಾರ್ಥ ಹೋರಾಟದ ಬದುಕನ್ನು ಪಾಲಿಸಿಕೊಂಡು ಹೋದರೆ ಎಲ್ಲಾ ರಂಗದಲ್ಲೂ ಕೀರ್ತಿಗಳಿಸಬಹುದೆಂದು ಪೂಜ್ಯ ಬೋಧಿರತ್ನ ಬಂತೇ ಜಿ ನಳಂದರವರು ತಿಳಿಸಿದರು.
ಸಮಾಜ ಸೇವಕರು ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯ ವಿಭಾಗೀಯ ಸಂಚಾಲಕರಾದ ಡಾ.ಆಲಗೂಡು ಎಸ್.ಚಂದ್ರಶೇಖರ್ ರವರು “ಕರ್ನಾಟಕ ಭೂಷಣ ” ಪ್ರಶಸ್ತಿ ಬಿರುದು ಪಡೆದ ಹಿನ್ನೆಲೆಯಲ್ಲಿ ಭಂತೇಜಿಯವರು ಕೂಡ್ಲೂರಿನಲ್ಲಿರುವ ನಳಂದ ಬುದ್ಧ ವಿಹಾರದಲ್ಲಿ ಸನ್ಮಾನಿಸಿ ಮಾತನಾಡಿ ನಮ್ಮಲ್ಲಿ ನಿಸ್ವಾರ್ಥತೆ ಮಾನವೀಯತೆ ಮನುಷ್ಯತ್ವ ಇಟ್ಟುಕೊಂಡು ನೊಂದ ಅಸಹಾಯಕರ ಪಾಲಿಗೆ ಸಹಾಯ ಮಾಡುವ ಮೂಲಕ ತ್ಯಾಗಿಗಳಾದರೆ ಸಾರ್ಥಕ ಬದುಕಿನೊಂದಿಗೆ ಎಲ್ಲರ ಮನಸಿನಲ್ಲೂ ನೆಲೆಸಬಹುದು ಎಂದು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮುಖಂಡರುಗಳಾದ ಕರೋಹಟ್ಟಿ ಕೆ. ಎನ್. ಪ್ರಭುಸ್ವಾಮಿ, ಕಿರುಗಸೂರು ಗ್ರಾಮ ಪಂಚಾಯಿತಿಯ ಸದಸ್ಯರಾದ ನಾಗರಾಜು ಹಾಗೂ ಎಡದೊರೆ ಶಿವಣ್ಣ ಇದ್ದರು.
– ಎಂ.ನಾಗೇಂದ್ರಕುಮಾರ್
