ಕೆ.ಆರ್.ಪೇಟೆ: ಯುವಕರು ಯಾವುದೇ ಜಾತಿ-ಭೇದ ಇಲ್ಲದೇ ಶಾಂತಿ ಸೌಹಾರ್ದತೆಯಿಂದ ಸರ್ಕಾರ ಸೂಚನೆಯಂತೆ ಶ್ರೀ ಗೌರಿ ಗಣೇಶ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಆಚರಿಸಬೇಕು ಎಂದು ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್ ಯುವಕರಿಗೆ ಸಲಹೆ ನೀಡಿದರು.
ಪಟ್ಟಣದ ಜಯನಗರ ಬಡಾವಣೆಯಲ್ಲಿರುವ ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಶ್ರೀ ಗೌರಿ ಗಣೇಶ ಹಬ್ಬದ ಪ್ರಯುಕ್ತ ನೂರಾರು ಯುವಕರ ಬಳಗಕ್ಕೆ ಶ್ರೀ ಗೌರಿ ಗಣೇಶನ ಪ್ರತಿಷ್ಠಾಪನೆಗೆ ಆರ್ಥಿಕ ಧನಸಹಾಯ ನೀಡಿ ಮಾತನಾಡಿದರು.ನಮ್ಮ ದೇಶವು ಶಾಂತಿಗೆ ಜನರು ಸಹೋದರರಂತೆ ಬಾಳುತ್ತಿದ್ದೇವೆ ಯುವಕರು ಹೆಸರಾಗಿದೆ ನಮ್ಮ ನೆಲದಲ್ಲಿ ಪ್ರತಿಯೊಂದು ಜಾತಿ ಧರ್ಮದ ಜನರು ಸಹೋದರರಂತೆ ಬಾಳುತ್ತಿದ್ದೇವೆ.ಯುವಕರು ಸಂಘ ಸಂಸ್ಥೆ ಹಾಗೂ ಶ್ರೀ ಗೌರಿ ಗಣೇಶ ಹಬ್ಬದ ಹೆಸರಿನಲ್ಲಿ ಅಶಾಂತಿಗೆ ಅವಕಾಶ ಕೊಡದೆ ಎಲ್ಲರೂ ಸೇರಿ ಸರ್ಕಾರ ಸೂಚನೆಗಳಂತೆ ಶಾಂತಿ ಸೌಹಾರ್ದತೆಯಿಂದ ಹಬ್ಬವನ್ನು ಆಚರಿಸಬೇಕು ಎಂದರು.

ಪ್ರತಿ ವರ್ಷವೂ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಸಂಖ್ಯೆ ಹೆಚ್ಚಾಗುತ್ತ ಭಗವಂತನ ಕೃಪೆಗೆ ಪಾತ್ರರಾಗುತ್ತಿದ್ದಾರೆ ಅದು ನಿಜಕ್ಕೂ ಶ್ಲಾಘನಿಯ. ಮಣ್ಣಿನ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಪರಿಸರ ಸಂರಕ್ಷಣೆಗೆ ಯುವ ಮತ್ತು ಸಾರ್ವಜನಿಕರು ಸಹಕರಿಸಬೇಕು. ನಾವು ನೆಮ್ಮದಿಯಿಂದ ಬದುಕಲು ಒಳ್ಳೆಯ ಗಾಳಿ, ನೀರು, ಮಣ್ಣು ಪರಿಸರ ಸಂರಕ್ಷಣೆಗೆ ಮುಂದಾಗುವ ಮೂಲಕ ಸದೃಢ ಸಮಾಜಕ್ಕೆ ಸಹಕಾರಿಯಾಗಬೇಕು ಒಂದು ಸಲಹೆ ನೀಡಿದರು.
ಶ್ರೀ ಮಲ್ಲಿಕಾರ್ಜುನ್ ಚಾರಿಟೇಬಲ್ ಟ್ರಸ್ಟ್ ಕಚೇರಿಯಲ್ಲಿ ಶ್ರೀ ಗೌರಿ ಗಣೇಶ ಪ್ರಯುಕ್ತ ಶ್ರೀ ಗೌರಿ ಗಣೇಶನ ಪ್ರತಿಷ್ಠಾಪನೆಗೆ ಆರ್ಥಿಕ ಧನ ಸಹಾಯಕ್ಕೆ ಬಂದ ನೂರಾರು ಯುವಕರಿಗ ಬೆಳಿಗ್ಗೆ ತಿಂಡಿ,ಮದ್ಯಾಹ್ನ ಊಟ,ಸಂಜೆ ಟಿಫನ್ ವ್ಯವಸ್ಥೆ ಕೈಗೊಂಡಿದ್ದಾರೆ.

ಈ ಸಂದರ್ಭದಲ್ಲಿ ಯುವಕರಾದ ಹಡವನಹಳ್ಳಿ ದರ್ಶನ್, ಪವನ್, ಮಂಜುನಾಥ್ ಗಣೇಶ್, ಪ್ರಣವ್, ಸುನಿಲ್, ಸಚಿನ್, ಪ್ರಜ್ವಲ್,ಮನೋಜ್, ಗೊರವಿ ವಿನಯ್, ಯಶವಂತ, ಅಖಿಲ್, ಅಭಿಷೇಕ್, ಮದನ್, ಶ್ರೇಯಾಂಕ್, ಗಂಗೇನಹಳ್ಳಿ ಅಪ್ಪು, ಪ್ರದೀಪ್, ಸಂತೋಷ್, ಉದಯ್, ಯೋಗೇಶ್, ಆಕಾಶ್, ಶ್ರೀಧರ್,ರಾಜಘಟ್ಟ ಆರ್ ಎಂ ರಂಜಿತ್,ವಿನೋದ್, ಕಿಶನ್, ಪ್ರೇಮ್ ಕುಮಾರ್, ರೋಹಿತ್, ಗೌತಮ್, ಆದಿತ್ಯ,ಸೇರಿದಂತೆ ನೂರಾರು ಯುವಕ ಬಳಗದ ಸದಸ್ಯರು ಇದ್ದರು.
– ಸುದ್ದಿಯೊಂದಿಗೆ ಮನು ಮಾಕವಳ್ಳಿ ಕೆ ಆರ್ ಪೇಟೆ
