ಬೆಂಗಳೂರು, 31 ಜುಲೈ 2026: ಫ್ಲಿಪ್ ಕಾರ್ಟ್ ಪ್ಲಸ್ ನ ಸದಸ್ಯರಿಗಾಗಿ ಫ್ಲಿಪ್ ಕಾರ್ಟ್ ಮತ್ತು ನೆಟ್ ಫ್ಲಿಕ್ಸ್ ಒಂದು ಹೊಸ ಯೋಜನೆಯನ್ನು ಪ್ರಕಟಿಸಿವೆ. ಈ ಸದಸ್ಯರು ತಮ್ಮ ಸಾಮಾನ್ಯ ಶಾಪಿಂಗ್ ಚಟುವಟಿಕೆಗಳ ಮೂಲಕ ಪ್ರತಿತಿಂಗಳು ನೆಟ್ ಫ್ಲಿಕ್ಸ್ ಮೊಬೈಲ್ ಪ್ಲಾನ್ ಅನ್ನು ಗಳಿಸಬಹುದಾಗಿದೆ. ಈ ಮೂಲಕ ಅತ್ಯುತ್ತಮ ಮನರಂಜನೆಯನ್ನು ಗಳಿಸಬಹುದಾಗಿದೆ. ಇದಕ್ಕಾಗಿ ಈ ಫ್ಲಿಪ್ ಕಾರ್ಟ್ ಸದಸ್ಯರು ಯಾವುದೇ ಪ್ರತ್ಯೇಕ ಚಂದಾದಾರಿಕೆಯನ್ನು ಮಾಡಿಕೊಳ್ಳಬೇಕಾಗಿಲ್ಲ ಅಥವಾ ಬಂಡಲ್ ರೀಚಾರ್ಜ್ ಮಾಡಿಸಿಕೊಳ್ಳುವ ಅಗತ್ಯವೂ ಇಲ್ಲ.
ಈ ಸಹಭಾಗಿತ್ವವು ಗ್ರಾಹಕರ ದೈನಂದಿನ ಜೀವನದ ಭಾಗವಾಗಿರುವ ಎರಡು ಅನುಭವಗಳನ್ನು ಸರಳ ಮತ್ತು ಬಹುಮಾನ ನೀಡುವ ರೀತಿಯಲ್ಲಿ ಒಟ್ಟುಗೂಡಿಸುತ್ತದೆ. ಭಾರತದ ಇ-ಕಾಮರ್ಸ್ ಕ್ಷೇತ್ರದಲ್ಲಿ ಇದೇ ಮೊದಲ ಬಾರಿಗೆ, ವಿಶ್ವದ ಪ್ರಮುಖ ಮನರಂಜನಾ ಸೇವೆಯಾಗಿರುವ ನೆಟ್ ಫ್ಲಿಕ್ಸ್ ಅನ್ನು ಪ್ರತ್ಯೇಕವಾಗಿ ಖರೀದಿಸುವುದಕ್ಕಿಂತ ಅಥವಾ ಬೇರೆ ಸೇವೆಯೊಂದಿಗೆ ಸೇರಿಸುವುದಕ್ಕಿಂತ, ದೈನಂದಿನ ಶಾಪಿಂಗ್ ಮೂಲಕ ಗಳಿಸುವ ಈ ಅವಕಾಶ ದೊರೆಯಲಿದೆ. ಈ ಕೊಡುಗೆಯು ಆಗಸ್ಟ್ 1, 2026 ರಿಂದ ಆರಂಭವಾಗಲಿದೆ.
ಇದು ಹೇಗೆ ಕಾರ್ಯನಿರ್ವಹಿಸುತ್ತದೆ:
ಈ ಪ್ರಕ್ರಿಯೆ ಅತ್ಯಂತ ಸರಳವಾಗಿದೆ:
● ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರು ಒಂದು ತಿಂಗಳೊಳಗೆ 299 ರೂಪಾಯಿ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ನಾಲ್ಕು ಅರ್ಹ ಆರ್ಡರ್ ಗಳನ್ನು ಪೂರ್ಣಗೊಳಿಸಬೇಕು.
● ಅರ್ಹ ಆರ್ಡರ್ ಗಳನ್ನು ಫ್ಲಿಪ್ ಕಾರ್ಟ್, ಫ್ಲಿಪ್ ಕಾರ್ಟ್ ಮಿನಿಟ್ಸ್ ಮತ್ತು ಫ್ಲಿಪ್ ಕಾರ್ಟ್ ಗ್ರಾಸರಿ ಮೂಲಕ ಮಾಡಬಹುದು.
● ನಾಲ್ಕನೇ ಅರ್ಹ ಆರ್ಡರ್ ಪೂರ್ಣಗೊಂಡ ನಂತರ, ಮುಂದಿನ 30 ದಿನಗಳವರೆಗೆ ನೆಟ್ ಫ್ಲಿಕ್ಸ್ ಮೊಬೈಲ್ ಪ್ಲಾನ್ ಅನ್ಲಾಕ್ ಆಗುತ್ತದೆ. ಇದರ ಮೂಲಕ ಸದಸ್ಯರು ನೆಟ್ ಫ್ಲಿಕ್ಸ್ನ ಭಾರತೀಯ ಮತ್ತು ಜಾಗತಿಕ ಚಲನಚಿತ್ರಗಳು ಹಾಗೂ ಸರಣಿಗಳ ಸಂಪೂರ್ಣ ಸಂಗ್ರಹವನ್ನು ವೀಕ್ಷಿಸಬಹುದಾಗಿದೆ.
● ಈ ಸೌಲಭ್ಯವನ್ನು ನೇರವಾಗಿ ಫ್ಲಿಪ್ ಕಾರ್ಟ್ ಆಪ್ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಲಾಗಿನ್ ಅಥವಾ ಹೆಚ್ಚುವರಿ ಪಾವತಿ ಅಗತ್ಯವಿಲ್ಲ.
● ಅರ್ಹತೆ ಪಡೆದ 30 ದಿನಗಳ ನಂತರ ಈ ಸೌಲಭ್ಯ ಮರುಹೊಂದಿಸಲಾಗುತ್ತದೆ ಮತ್ತು ಅದೇ ರೀತಿಯ ಶಾಪಿಂಗ್ ಚಟುವಟಿಕೆಯ ಮೂಲಕ ಮತ್ತೆ ಗಳಿಸಬೇಕು.
● ಇನ್ನೂ ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಾಗದ ಗ್ರಾಹಕರು 12 ತಿಂಗಳ ಅವಧಿಯಲ್ಲಿ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ 15 ಆರ್ಡರ್ ಗಳನ್ನು ಪೂರ್ಣಗೊಳಿಸಿದ ನಂತರ ಸ್ವಯಂಚಾಲಿತವಾಗಿ ಸದಸ್ಯತ್ವಕ್ಕೆ ಅರ್ಹರಾಗುತ್ತಾರೆ.
ಶಾಪಿಂಗ್ ಮತ್ತು ಮನರಂಜನೆ ಸಮ್ಮಿಳಿತದ ಹೊಸ ಅನುಭವ
ಫ್ಲಿಪ್ ಕಾರ್ಟ್ ಮತ್ತು ನೆಟ್ ಫ್ಲಿಕ್ಸ್ ನ ಈ ಸಹಭಾಗಿತ್ವವನ್ನು ವಿಭಿನ್ನವಾಗಿಸುವ ಪ್ರಮುಖ ಅಂಶವೆಂದರೆ ಇದರ ಮಾದರಿ. ನೆಟ್ ಫ್ಲಿಕ್ಸ್ ಸೌಲಭ್ಯವನ್ನು ಪ್ರತ್ಯೇಕವಾಗಿ ಖರೀದಿಸುವುದಾಗಲಿ ಅಥವಾ ಮೊದಲೇ ಸೇರಿಸಲಾಗಿರುವ ಪ್ಯಾಕೇಜ್ ಆಗಿರುವುದಾಗಲಿ ಇಲ್ಲ. ಗ್ರಾಹಕರು ನಿಗದಿತ ಶಾಪಿಂಗ್ ಮಾಡಿದರೆ ಸಾಕು ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿದೆ.
ಅಂದರೆ, ಗ್ರಾಹಕರು ಫ್ಲಿಪ್ ಕಾರ್ಟ್ನ ಪರಿಸರ ವ್ಯವಸ್ಥೆಯಲ್ಲಿ ದೈನಂದಿನ ಅಗತ್ಯ ವಸ್ತುಗಳು, ಗ್ರಾಸರಿ ಮತ್ತು ಫ್ಲಿಪ್ ಕಾರ್ಟ್ ಮಿನಿಟ್ಸ್ ಮೂಲಕ ತ್ವರಿತ ವಾಣಿಜ್ಯ ಸೇವೆಗಳಲ್ಲಿ ಹೆಚ್ಚು ತೊಡಗಿಸಿಕೊಂಡಂತೆ, ನೆಟ್ ಫ್ಲಿಕ್ಸ್ನ ಮೆಚ್ಚುಗೆ ಪಡೆದ ಭಾರತೀಯ ಮತ್ತು ಜಾಗತಿಕ ಚಿತ್ರಗಳು ಹಾಗೂ ಸರಣಿಗಳನ್ನು ನಿರಂತರವಾಗಿ ವೀಕ್ಷಿಸುವ ಅವಕಾಶವನ್ನು ಪಡೆಯಬಹುದು.
ಶಾಪಿಂಗ್ ಮತ್ತು ಮನರಂಜನೆ-ಇವೆರಡೂ ಬಹುತೇಕ ಭಾರತೀಯರ ದೈನಂದಿನ ಜೀವನದ ಭಾಗವಾಗಿವೆ. ಈಗ ಇವು ಹಿಂದೆಂದೂ ಕಾಣದ ರೀತಿಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತವೆ.
ಗ್ರಾಹಕರಿಗೆ ದೊರೆಯುವ ಅವಕಾಶ
ಈ ಸಹಭಾಗಿತ್ವವು ಭಾರತದ ಯುವ ಡಿಜಿಟಲ್ ಗ್ರಾಹಕರ ಬದಲಾಗುತ್ತಿರುವ ನಿರೀಕ್ಷೆಗಳನ್ನೂ ಪ್ರತಿಬಿಂಬಿಸುತ್ತದೆ. ವಿಶೇಷವಾಗಿ ಜನರೇಷನ್ Z (Gen Z) ಗ್ರಾಹಕರಿಗೆ ಶಾಪಿಂಗ್ ಮತ್ತು ಮನರಂಜನೆ ದೈನಂದಿನ ಜೀವನದ ಪರಸ್ಪರ ಸಂಬಂಧ ಹೊಂದಿರುವ ಪ್ರಮುಖ ಭಾಗಗಳಾಗಿವೆ.
ಡಿಜಿಟಲ್ ಯುಗದಲ್ಲಿ ಬೆಳೆದಿರುವ ಈ ಗ್ರಾಹಕರು ಕೇವಲ ಮೌಲ್ಯವಲ್ಲದೆ ಉತ್ತಮ ಅನುಭವಗಳನ್ನೂ ಬಯಸುತ್ತಿದ್ದಾರೆ. ಆದ್ದರಿಂದ, ಕೇವಲ ವಹಿವಾಟಿನ ಆಧಾರದ ಮೇಲಿನ ಬಹುಮಾನಗಳನ್ನು ಮೀರಿ ಹೆಚ್ಚಿನ ಪ್ರಯೋಜನಗಳನ್ನು ನೀಡುವ ಲಾಯಲ್ಟಿ ಪ್ರೋಗ್ರಾಂಗಳು ಈಗ ಹೆಚ್ಚು ಪ್ರಸ್ತುತವಾಗಿವೆ.
ಶಾಪಿಂಗ್ ಮತ್ತು ಮನರಂಜನೆಯನ್ನು ಒಟ್ಟಿಗೆ ತರುವ ಮೂಲಕ, ಫ್ಲಿಪ್ ಕಾರ್ಟ್ ಪ್ಲಸ್ ಗ್ರಾಹಕರಿಗೆ ತಮ್ಮ ದೈನಂದಿನ ಖರೀದಿಗಳಿಂದ ಹೆಚ್ಚಿನ ಮೌಲ್ಯವನ್ನು ಪಡೆಯುವ ಮತ್ತೊಂದು ಅರ್ಥಪೂರ್ಣ ಅವಕಾಶವನ್ನು ನೀಡುತ್ತದೆ.
ಈ ಸಹಭಾಗಿತ್ವವನ್ನು ಭಾರತದಾದ್ಯಂತದ ಗ್ರಾಹಕರಿಗೆ ಸುಲಭವಾಗಿ ಲಭ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಫ್ಲಿಪ್ ಕಾರ್ಟ್, ಫ್ಲಿಪ್ ಕಾರ್ಟ್ ಗ್ರಾಸರಿ ಮತ್ತು ಫ್ಲಿಪ್ ಕಾರ್ಟ್ ಮಿನಿಟ್ಸ್ ಮೂಲಕ ದಿನಸಿ, ದೈನಂದಿನ ಅಗತ್ಯ ವಸ್ತುಗಳು ಅಥವಾ ಇತರ ಸಾಮಾನ್ಯ ಖರೀದಿಗಳನ್ನು ಮಾಡುವಾಗ, ತಮ್ಮ ನಿಯಮಿತ ಶಾಪಿಂಗ್ ಅಭ್ಯಾಸಗಳ ಮೂಲಕ ವಿಶ್ವದಾದ್ಯಂತ ಜನಪ್ರಿಯವಾಗಿರುವ ನೆಟ್ ಫ್ಲಿಕ್ಸ್ ಚಿತ್ರಗಳು ಮತ್ತು ಸರಣಿಗಳನ್ನು ವೀಕ್ಷಿಸುವ ಅವಕಾಶವನ್ನು ಪಡೆಯಬಹುದು.
ಹೆಚ್ಚುವರಿ ಖರ್ಚನ್ನು ಉತ್ತೇಜಿಸುವ ಬದಲು, ದೈನಂದಿನ ಖರೀದಿಗಳಿಗೆ ಬಹುಮಾನ ನೀಡುವ ಮೂಲಕ ಈ ಕಾರ್ಯಕ್ರಮವು ಮೆಟ್ರೋ ನಗರಗಳ ಜೊತೆಗೆ 2 ಮತ್ತು 3 ನೇ ಶ್ರೇಣಿಯ ನಗರಗಳಲ್ಲಿನ ಗ್ರಾಹಕರಿಗೂ ಫ್ಲಿಪ್ ಕಾರ್ಟ್ ಪ್ಲಸ್ನ ಮೌಲ್ಯವನ್ನು ವಿಸ್ತರಿಸುತ್ತದೆ.
ಫ್ಲಿಪ್ ಕಾರ್ಟ್ನ ಸಿಎಫ್ಒ ಮತ್ತು ಸ್ಟ್ರಾಟೆಜಿಕ್ ಪಾರ್ಟ್ನರ್ ಶಿಪ್ಸ್ ನ ಎಸ್ ವಿಪಿ ರವಿ ಅಯ್ಯರ್ ಅವರು ಮಾತನಾಡಿ, “ದಿನಸಿ, ದೈನಂದಿನ ಅಗತ್ಯ ವಸ್ತುಗಳು ಮತ್ತು ತ್ವರಿತ ವಾಣಿಜ್ಯ ಸೇವೆಗಳು (ಕ್ವಿಕ್ ಕಾಮರ್ಸ್) ಗ್ರಾಹಕರು ಶಾಪಿಂಗ್ ಮಾಡುವ ವಿಧಾನದಲ್ಲಿ ಹೆಚ್ಚುತ್ತಿರುವ ಮಹತ್ವದ ಭಾಗವಾಗುತ್ತಿರುವ ಈ ಸಂದರ್ಭದಲ್ಲಿ, ಆ ದೈನಂದಿನ ವ್ಯವಹಾರಗಳನ್ನು ಇನ್ನಷ್ಟು ಬಹುಮಾನಯುತವಾಗಿಸುವ ದೊಡ್ಡ ಅವಕಾಶವನ್ನು ನಾವು ಕಾಣುತ್ತಿದ್ದೇವೆ. ತಿಂಗಳಿಗೆ ನಾಲ್ಕು ಆರ್ಡರ್ ಗಳನ್ನು ಪೂರ್ಣಗೊಳಿಸುವುದು ಈಗಾಗಲೇ ನಮ್ಮ ಅನೇಕ ಗ್ರಾಹಕರ ಸಹಜ ಶಾಪಿಂಗ್ ಅಭ್ಯಾಸದ ಭಾಗವಾಗಿದೆ. ಈ ಸಹಭಾಗಿತ್ವವು ಆ ದೈನಂದಿನ ಚಟುವಟಿಕೆಯನ್ನು ವಿಶ್ವಮಟ್ಟದ ಮನರಂಜನೆಯ ಪ್ರವೇಶವಾಗಿ ಪರಿವರ್ತಿಸುತ್ತದೆ. ಗ್ರಾಹಕರು ನಿಜವಾಗಿಯೂ ಮೌಲ್ಯಯುತವೆಂದು ಪರಿಗಣಿಸುವ ಅನುಭವಗಳತ್ತ ಲಾಯಲ್ಟಿ ಪ್ರೋಗ್ರಾಂಗಳು ಈಗ ಹೆಚ್ಚು ಜನಪ್ರಿಯವಾಗುತ್ತಿವೆ. ನೆಟ್ ಫ್ಲಿಕ್ಸ್ ಜೊತೆಗಿನ ಈ ಸಹಭಾಗಿತ್ವವು ಅದೇ ರೀತಿಯ ಮೌಲ್ಯಯುತ ಅನುಭವವನ್ನು ಗ್ರಾಹಕರಿಗೆ ನೀಡುವ ನಮ್ಮ ಪ್ರಯತ್ನವಾಗಿದೆ. ಫ್ಲಿಪ್ ಕಾರ್ಟ್ ಪ್ಲಸ್ ನ ಬೆಳವಣಿಗೆಯ ಪಯಣದಲ್ಲಿ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದ್ದು, ಗ್ರಾಹಕರ ದೈನಂದಿನ ಜೀವನದ ಇನ್ನಷ್ಟು ಕ್ಷೇತ್ರಗಳಲ್ಲಿ ನೈಜ ಮೌಲ್ಯವನ್ನು ಒದಗಿಸುವಂತಹ ಕಾರ್ಯಕ್ರಮವನ್ನು ನಾವು ನಿರಂತರವಾಗಿ ವಿನ್ಯಾಸಗೊಳಿಸುತ್ತಿದ್ದೇವೆ” ಎಂದು ತಿಳಿಸಿದ್ದಾರೆ.
ನೆಟ್ ಫ್ಲಿಕ್ಸ್ನ ಎಪಿಎಸಿ ಪಾರ್ಟ್ನರ್ ಶಿಪ್ಸ್ ನ ಬಿಸಿನೆಸ್ ಡೆವಲಪ್ ಮೆಂಟ್ ವಿಭಾಗದ ಉಪಾಧ್ಯಕ್ಷ ಲಾರೆಂಟ್ ಉಗೆನ್ ಅವರು ಮಾತನಾಡಿ, “ಭಾರತವು ವಿಶ್ವದ ಅತ್ಯಂತ ಆಸಕ್ತಿದಾಯಕ ಮನರಂಜನಾ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಅತ್ಯುತ್ತಮ ಸಹಭಾಗಿತ್ವಗಳು ನೈಜ ಗ್ರಾಹಕರ ಅಭ್ಯಾಸಗಳನ್ನು ಆಧರಿಸಿ ನಿರ್ಮಾಣವಾಗುತ್ತವೆ. ಲಕ್ಷಾಂತರ ಭಾರತೀಯರ ದೈನಂದಿನ ಶಾಪಿಂಗ್ ನ ಭಾಗವಾಗಿ ಫ್ಲಿಪ್ ಕಾರ್ಟ್ ಕಾರ್ಯನಿರ್ವಹಿಸುತ್ತಿದೆ. ಈಗ ನಾವು ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರಿಗೆ ತಮ್ಮ ಮಾಸಿಕ ಶಾಪಿಂಗ್ ಮೈಲಿಗಲ್ಲುಗಳನ್ನು ಪೂರ್ಣಗೊಳಿಸುವ ಮೂಲಕ ಒಂದು ತಿಂಗಳ ನೆಟ್ ಫ್ಲಿಕ್ಸ್ ಮೊಬೈಲ್ ಪ್ಲಾನ್ ಅನ್ನು ಸುಲಭವಾಗಿ ಮತ್ತು ಬಹುಮಾನಯುತವಾಗಿ ಪಡೆಯುವ ಅವಕಾಶವನ್ನು ಒದಗಿಸುತ್ತಿದ್ದೇವೆ. ಇದು ಭಾರತದಲ್ಲಿ ನೆಟ್ ಫ್ಲಿಕ್ಸ್ನ ಮೊದಲ ಇ-ಕಾಮರ್ಸ್ ಸಹಭಾಗಿತ್ವವಾಗಿದೆ. ಸರಳ, ಬಹುಮಾನ ನೀಡುವ ಮತ್ತು ಫ್ಲಿಪ್ ಕಾರ್ಟ್ ಪ್ಲಸ್ ಸದಸ್ಯರು ಈಗಾಗಲೇ ನಡೆಸುತ್ತಿರುವ ಶಾಪಿಂಗ್ ಹಾಗೂ ತೊಡಗಿಸಿಕೊಳ್ಳುವಿಕೆಯ ವಿಧಾನಗಳಿಗೆ ಹೊಂದಿಕೊಳ್ಳುವಂತಹ ಹೆಚ್ಚಿನ ಪರಿಣಾಮ ಬೀರುವ, ಗ್ರಾಹಕ ಕೇಂದ್ರಿತ ಸಹಭಾಗಿತ್ವಗಳನ್ನು ನಿರ್ಮಿಸುವ ನಮ್ಮ ಉದ್ದೇಶವನ್ನು ಇದು ಪ್ರತಿಬಿಂಬಿಸುತ್ತದೆ” ಎಂದು ಬಣ್ಣಿಸಿದ್ದಾರೆ.
