ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಜಲಮೂಲ ಸಮಗ್ರ ನಿರ್ವಹಣೆಗೆ ‘ಡಿಜಿಟಲ್ ವಾಟರ್ ಸ್ಟಾಕ್ ಯೋಜನೆ’ ಜಾರಿಗೆ ಬಂದಿದೆ.
ಉಪಗ್ರಹ ಸೆನ್ಸಾರ್ಗಳಿಂದ ಪಡೆಯುವ ದತ್ತಾಂಶ, ಕೃತಕ ಬುದ್ಧಿಮತ್ತೆ ಹಾಗೂ ಮಷಿನ್ ಲರ್ನಿಂಗ್ ತಂತ್ರಜ್ಞಾನದಿಂದ ಸಂಗ್ರಹವಾಗುವ ಇಮೇಜಿಂಗ್ಗಳನ್ನು ವಿಶ್ಲೇಷಿಸಿ, ಜಲಮೂಲಗಳ ನಿಖರ ಮಾಹಿತಿಯನ್ನು ಒದಗಿಸುವುದು ಇದರ ಉದ್ದೇಶ.
ಈ ಯೋಜನೆಯಡಿ, ಕಳೆದ ಐದು ವರ್ಷಗಳ ಜಲಮೂಲ ದತ್ತಾಂಶಗಳನ್ನು ಪಡೆದು ಪ್ರಸ್ತುತ ಸ್ಥಿತಿಯೊಂದಿಗೆ ಹೋಲಿಕೆ ಮಾಡಲಾಗುತ್ತದೆ. ಜಲಮೂಲದ ಸ್ವರೂಪದಲ್ಲಿ ಆಗುತ್ತಿರುವ ಬದಲಾವಣೆ, ನೀರಿನ ಶೇಖರಣೆಯ ವ್ಯತ್ಯಾಸ ಹಾಗೂ ಕುಂದುಕೊರತೆಗಳನ್ನು ಗುರುತಿಸಿ ಸರಿಪಡಿಸುವ ಕ್ರಮ ಕೈಗೊಳ್ಳಲಾಗುವುದು.
ಜಲ ಸಂಪನ್ಮೂಲಗಳ ಸಮಗ್ರ ನಿರ್ವಹಣೆ, ಶಾಶ್ವತ ಅಭಿವೃದ್ಧಿ ಹಾಗೂ ಜನತೆಗೆ ನೀರಿನ ಲಭ್ಯತೆಯನ್ನು ಖಾತ್ರಿಪಡಿಸಲು ಈ ಯೋಜನೆ ಪ್ರಮುಖ ಹೆಜ್ಜೆಯಾಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
