ನವದೆಹಲಿ, ಆ.29: ಭಾರತದ ರಿಸರ್ವ್ ಬ್ಯಾಂಕ್ನ ಮಾಜಿ ಗವರ್ನರ್ ಉರ್ಜಿತ್ ಪಟೇಲ್ ಅವರನ್ನು ಅಂತರಾಷ್ಟ್ರೀಯ ನಾಣ್ಯ ನಿಧಿ (IMF) ಯ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಉರ್ಜಿತ್ ಪಟೇಲ್ ಅವರು 2016 ರಿಂದ 2018 ರವರೆಗೆ ಆರ್ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿದ್ದರು. ಅವರ ಅವಧಿಯಲ್ಲಿ ನೋಟು ರದ್ದತಿ ಸೇರಿದಂತೆ ಹಲವು ಆರ್ಥಿಕ ಸುಧಾರಣೆಗಳಿಗೆ ಅವರು ಸಾಕ್ಷಿಯಾಗಿದ್ದರು. ಈಗ ಐಎಂಎಫ್ನಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಅವರು ಭಾರತ ಸೇರಿದಂತೆ ಹಲವು ದೇಶಗಳ ಪರವಾಗಿ ಪ್ರಮುಖ ಆರ್ಥಿಕ ನೀತಿ ಚರ್ಚೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
ಆರ್ಥಿಕ ತಜ್ಞನಾಗಿ ಜಾಗತಿಕ ಹಣಕಾಸು ವ್ಯವಸ್ಥೆಯಲ್ಲಿ ಪಟೇಲ್ ಅವರ ಅನುಭವ ಮಹತ್ವದ ಪಾತ್ರವಹಿಸಲಿದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
